September 20, 2024

ಮೂಲ ಭೂತ ಸೌಕರ್ಯ ಕಲ್ಪಿಸಲು ಸೂಕ್ತ ಕ್ರಮ

0
ಶಾಸಕ ಹೆಚ್.ಡಿ. ತಮ್ಮಯ್ಯ ನೇತೃತ್ವದಲ್ಲಿ ವಾರ್ಡ್ ನಂ.೧೮ ರಲ್ಲಿ ಇಂದಿರಾ ಗಾಂಧಿ ಬಡಾವಣೆಯಲ್ಲಿ ಜನಸಂಪರ್ಕ ಸಭೆ

ಶಾಸಕ ಹೆಚ್.ಡಿ. ತಮ್ಮಯ್ಯ ನೇತೃತ್ವದಲ್ಲಿ ವಾರ್ಡ್ ನಂ.೧೮ ರಲ್ಲಿ ಇಂದಿರಾ ಗಾಂಧಿ ಬಡಾವಣೆಯಲ್ಲಿ ಜನಸಂಪರ್ಕ ಸಭೆ

ಚಿಕ್ಕಮಗಳೂರು:  ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆ ಮಂಜೂರು ಮಾಡುವುದಾಗಿ ಶಾಸಕ ಹೆಚ್.ಡಿ. ತಮ್ಮಯ್ಯ ಭರವಸೆ ನೀಡಿದರು.

ಅವರು ಇಂದು ವಾರ್ಡ್ ನಂ.೧೮ ರಲ್ಲಿ ಇಂದಿರಾ ಗಾಂಧಿ ಬಡಾವಣೆಯಲ್ಲಿ ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೆ ಪರಿಹರಿಸಲು ಕ್ರಮವಹಿಸುವುದಾಗಿ ತಿಳಿಸಿದರು.

ಸ್ಥಳೀಯ ಸಮಸ್ಯೆಗಳ ಅರಿವು ನನಗಿದೆ ಹಿಂದೆ ನಗರಸಭೆಯಿಂದ ಈ ಬಡಾವಣೆಯ ನಾಗರೀಕರಿಗೆ ಮನೆಯ ಸ್ವಾಧೀನ ಪತ್ರ ನೀಡಿದ್ದು ಅದಕ್ಕೆ ಮಾನ್ಯತೆ ಇಲ್ಲ ಮುಂದಿನ ದಿನಗಳಲ್ಲಿ ಆಶ್ರಯ ಸಭೆ ನಡೆಸಿ ಸೂರಿಲ್ಲದ ಬಡವರಿಗೆ ಮನೆ ನಿರ್ಮಿಸಿಕೊಡಲು ಗುರಿಹೊಂದಿದ್ದೇನೆ ಎಂದರು.

ನಗರಸಭೆಯಿಂದ ಅಧಿಕಾರಿಗಳನ್ನು ಕಳುಹಿಸಿ ಈ ಭಾಗದಲ್ಲಿ ಸರ್ವೆ ಮಾಡಿ ಫಲಾನುಭವಿಗಳನ್ನು ಗುರುತಿಸುವಂತೆ ಸೂಚಿಸಲಾಗುವುದೆಂದು ತಿಳಿಸಿದ ಅವರು ಆಯ್ಕೆಗೊಂಡ ಫಲಾನುಭವಿಗಳಿಗೆ ಇನ್ನೂ ೫ ತಿಂಗಳಲ್ಲಿ ತಹಸೀಲ್ದಾರ್ ಸಹಿ ಮಾಡಿರುವ ಹಕ್ಕು ಪತ್ರವನ್ನು ಕೊಡುವುದಾಗಿ ಭರವಸೆ ನೀಡಿದರು.

ಈ ಬಡಾವಣೆಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಸಮುಧಾಯ ಭವನ, ವಿದ್ಯುತ್ ಸಮಸ್ಯೆ ಸೇರಿದಂತೆ ಮುಂತಾದ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ ಈ ಎಲ್ಲಾ ಸಮಸ್ಯೆಗಳಿಗೆ ಏಕಕಾಲದಲ್ಲಿ ಬಗೆಹರಿಸಲು ಸಾಧ್ಯವಿಲ್ಲ ಹಂತ ಹಂತವಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ೫ ಗ್ಯಾರಂಟಿ ಯೋಜನೆಗಳಲ್ಲಿ ಅನ್ನ ಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.

ಈ ಹಿನ್ನೆಲೆಯಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಅನುಧಾನದ ಕೊರತೆಯಿಂದಾಗಿ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಮುಂದೆ ಇದಕ್ಕೆ ಬೇಕಾದ ಅನುಧಾನವನ್ನು ತಂದು ವಾರ್ಡಿನ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸುತ್ತೇನೆ ಎಂದು ಹೇಳಿದರು.

ಕ್ಷೇತ್ರದಲ್ಲಿ ನಾಗರೀಕರಿಗೆ ಶಾಂತಿ, ಸೌಹಾರ್ಧತೆ, ಸಾಮರಸ್ಯ ಅತಿಮುಖ್ಯ ಅದಕ್ಕಾಗಿ ಶ್ರಮಿಸುವುದರ ಜೊತೆಗೆ ಶಾಂತಿ ಕದಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ನಗರದ ಕೋಟೆ ಕೆರೆಯಲ್ಲಿ ಸ್ವಚ್ಛನೀರಿನಿಂದ ಕಲ್ಯಾಣಿಯನ್ನು ಸುಸಜ್ಜಿತ ವಿದ್ಯುತ್ ಅಲಂಕಾರದೊಂದಿಗೆ ವ್ಯವಸ್ಥೆ ಮಾಡಲಾಗಿದ್ದು ನಾಗರೀಕರು ತಮ್ಮ ಮನೆಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿಗಳನ್ನು ಇಲ್ಲಿಯೇ ವಿಸರ್ಜಿಸುವ ಮೂಲಕ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಜಿಲ್ಲಾವಕ್ತಾರ ರೂಬಿನ್ ಮೊಸಸ್, ನಗರಸಭೆ ಸದಸ್ಯರುಗಳಾದ ಮುನೀರ್, ಮಣಿಕಂಠ, ಶಾದಬ್ ಅಲಂ ಖಾನ್, ಗುಣವತಿ, ಪೌರಯುಕ್ತರಾದ ಬಸವರಾಜ್ ನಗರಸಭೆ ಸಿಬ್ಬಂದಿ, ಮೆಸ್ಕಾಂ ಸಿಬ್ಬಂದಿ ಮತ್ತಿತ್ತರರು ಭಾಗವಹಿಸಿದ್ದರು.

Public relations meeting at Indira Gandhi baḍavaṇeyalli

About Author

Leave a Reply

Your email address will not be published. Required fields are marked *