September 20, 2024

ಸಾರ್ವಜನಿಕರು ಜಿಲ್ಲಾಧಿಕಾರಿಗಳ ಭೇಟಿಗೆ ಕಾಲ ನಿಗದಿಪಡಿಸಿರುವ ಆದೇಶ ಹಿಂದಕ್ಕೆ ಪಡೆಯಬೇಕು

0
ಆಮ್ ಆದ್ಮಿ ಪಕ್ಷದ ಜಿಲ್ಲಾ ಮಾಧ್ಯಮ ಉಸ್ತುವಾರಿ ಡಾ|| ಕೆ.ಸುಂದರಗೌಡ ಪತ್ರಿಕಾಗೋಷ್ಠಿ

ಆಮ್ ಆದ್ಮಿ ಪಕ್ಷದ ಜಿಲ್ಲಾ ಮಾಧ್ಯಮ ಉಸ್ತುವಾರಿ ಡಾ|| ಕೆ.ಸುಂದರಗೌಡ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಸಾರ್ವಜನಿಕರು ಜಿಲ್ಲಾಧಿಕಾರಿಗಳ ಭೇಟಿಗೆ ವಾರದಲ್ಲಿ ಮೂರು ದಿನಗಳ ಕಾಲ ಸಮಯ ನಿಗದಿಪಡಿಸಿರುವುದನ್ನು ಕೂಡಲೇ ಈ ಆದೇಶವನ್ನು ವಾಪಸ್ ಪಡೆದು ಸಾರ್ವಜನಿಕರಿಗೆ ಅನುಕೂಲಮಾಡಬೇಕೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಮಾಧ್ಯಮ ಉಸ್ತುವಾರಿ ಡಾ|| ಕೆ.ಸುಂದರಗೌಡ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯ ದೂರದ ಸ್ಥಳಗಳಿಂದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ಬಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡುವುದು ಅನಿವಾರ್ಯವಾಗಿದ್ದು ಆದರೆ ವಾರಕ್ಕೆ ಮೂರು ದಿನ ಸೋಮವಾರ, ಬುಧವಾರ, ಶುಕ್ರವಾರ ಮಧ್ಯಾಹ್ನ ೩:೩೦ ಗಂಟೆಗೆ ಸಮಯ ನಿಗಧಿ ಮಾಡಿರುವುದರಿಂದ ತೀವ್ರ ತೊಂದರೆ ಆಗಿದ್ದು ಕೂಡಲೇ ಈ ಆದೇಶವನ್ನು ರದ್ದು ಮಾಡಿ ಸಾರ್ವಜನಿಕರ ಭೇಟಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳು ತುರ್ತಾಗಿ ಈ ಆದೇಶವನ್ನು ರದ್ದುಪಡಿಸದಿದ್ದರೆ ಪಕ್ಷದಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ ಅವರು ಶಿಕ್ಷಣ ಆರೋಗ್ಯಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಬೇಕೆಂದು ಆಶ್ರಯ ಯೋಜನೆ ಅಡಿ ಮನೆಗಳನ್ನು ನಿರ್ಮಾಣ ಮಾಡಿ ವಿತರಿಸಬೇಕೆಂದು ಒತ್ತಾಯಿಸಿದರು.

ಮಳೆ ಕೊರತೆಯಿಂದಾಗಿ ಬರಗಾಲ ತುತ್ತಾಗಿರುವ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ರೈತರ ನೆರವಿಗೆ ದಾವಿಸಬೇಕೆಂದು ಒತ್ತಾಯಿಸಿದ ಅವರು ಭ್ರ?ಚಾರ ಮತ್ತು ಜಾತಿವಾದದಿಂದಾಗಿ ಸ್ವಾವಲಂಬನೆಗೆ ಪೆಟ್ಟು ಬಿದ್ದಿದೆ ಎಂದು ದೂರಿದರು.

ಅಕ್ಟೋಬರ್ ನಲ್ಲಿ ಸ್ಥಿರಾಸ್ತಿ ಮತ್ತು ನಿವೇಶನಗಳನ್ನು ಕೊಂಡುಕೊಳ್ಳುವಾಗ ನೋಂದಣಿ ಶುಲ್ಕವನ್ನು ಶೇ.೩೦ ರ? ಏರಿಸಿ ಸಾರ್ವಜನಿಕರು ಸ್ಥಿರಾಸ್ತಿ ಮತ್ತು ನಿವೇಶನಗಳನ್ನು ದುಬಾರಿ ದರಕ್ಕೆ ಕೊಂಡುಕೊಳ್ಳುವಂತೆ ಮಾಡಿ ಸಾರ್ವಜನಿಕರ ಜೇಬಿಗೆ ನೇರ ಕೈ ಹಾಕುವ ಸರ್ಕಾರ ಜನಸಾಮಾನ್ಯರಿಗೆ ಸಂತೋ?ವನ್ನು ಮತ್ತು ಸಹಕಾರವನ್ನು ನೀಡಿದ್ದೇನೆ ಎಂದು ಜೇಬುಗಳ್ಳರ ವ್ಯವಹಾರವನ್ನು ಮಾಡಿ ೨೫,೦೦೦ ಕೋಟಿಯ ಬಂಡವಾಳವನ್ನು ಖಜಾನೆಗೆ ಶೇಖರಣೆ ಮಾಡಿರುವುದು ಸಾರ್ವಜನಿಕರಲ್ಲಿ ಉಸಿರು ಕಟ್ಟುವ ಪರಿಸ್ಥಿತಿಯನ್ನು ಉಂಟುಮಾಡಿದೆ ಎಂದು ಟೀಕಿಸಿದರು.

ಪ್ರಥಮವಾಗಿ ರಾಜ್ಯದಲ್ಲಿ ಹಬ್ಬಿರುವ ಭ್ರ?ಚಾರವನ್ನು ಬೇರು ಸಮೇತ ಕೀಳದೆ ಯಾವುದೇ ಕಾರ್ಯಕ್ರಮವನ್ನು ಕೈಗೊಂಡರು ಸಾರ್ವಜನಿಕರಿಗೆ ವಂಚನೆ ಮಾಡಿದಂತೆ ಆಗುತ್ತದೆ. ಭ್ರ?ಚಾರದಲ್ಲಿ ತೊಡಗಿದವರ ಆಸ್ತಿ ಮತ್ತು ಬ್ಯಾಂಕ್ ಅಕೌಂಟ್ ತನಿಖೆ ಮುಖಾಂತರ ಪರಿಶೀಲಿಸಿ ಆಸ್ತಿ ಮತ್ತು ಹಣವನ್ನು ಸಾರ್ವಜನಿಕರ ಸೇವೆಗೆ ಮುಟ್ಟುಗೋಲು ಹಾಕಿಕೊಂಡು ಭ್ರ?ಚಾರಿಗಳಿಗೆ ಭಯವನ್ನುಂಟು ಮಾಡುವಂತೆ ಆಗ್ರಹಿಸಿದರು.

ಸರ್ಕಾರ ನೌಕರರಿಂದ ಎಂಟು ಗಂಟೆಯ ಶ್ರಮದ ಕೆಲಸವನ್ನು ಪಡೆದಲ್ಲಿ ಮಾತ್ರ ರಾಜ್ಯ ಮತ್ತು ದೇಶ ಅಭಿವೃದ್ಧಿ ಪಥದಲ್ಲಿ ಸಾಗುವುದಕ್ಕೆ ಸಾಧ್ಯ ಆದರೆ ಸಂಶೋಧನೆಯ ವರದಿ ಪ್ರಕಾರ ಭಾರತದಲ್ಲಿ ಕೇವಲ ಮೂರು ಗಂಟೆಯ ಶ್ರಮದ ಕೆಲಸ ನಡೆಯುತ್ತಿದ್ದು ವಿದೇಶದಲ್ಲಿ ನಿಸ್ವಾರ್ಥವಾಗಿ ಏಳು ಗಂಟೆ ಶ್ರಮಜೀವನ ನಡೆಯುವುದರಿಂದ ಬ್ರ?ಚಾರಕ್ಕೆ ಕಡಿವಾಣ ಹಾಕುವ ಮೂಲಕ ದೇಶವನ್ನು ನಡೆಸುವಲ್ಲಿ ಸಫಲರಾಗಿದ್ದಾರೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಲಿಂಗಾರಾಧ್ಯ, ಕಾರ್ಯದರ್ಶಿ ಎಂ.ಪಿ ಈರೇಗೌಡ ಮುಖಂಡರು ಗಳಾದ ನಾಸಿರಬೇಗಂ, ರಂಗನಾಥ್, ಪ್ರಭು ಇದ್ದರು.

Aam Aadmi Party District Media Incharge Dr K. Sundar Gowda

 

About Author

Leave a Reply

Your email address will not be published. Required fields are marked *