September 20, 2024

ಲಯನ್ಸ್ ಸೇವಾಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0
Lions Club district president G. Ramesh press conference

Lions Club district president G. Ramesh press conference

ಚಿಕ್ಕಮಗಳೂರು: ಸುವರ್ಣ ಮಹೋತ್ಸವ ಸವಿ ನೆನಪಿನಲ್ಲಿ ಸೆ.೨೧ ರಂದು ನಗರದ ಮಧುವನ ಬಡಾವನೆಯಲ್ಲಿರುವ ಲಯನ್ಸ್ ಸೇವಾಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಜಿಲ್ಲಾಧ್ಯಕ್ಷ ಜಿ.ರಮೇಶ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಂದು ಸುರತ್ಕಲ್ ಶ್ರೀನಿವಾಸ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔ?ಧಿಗಳನ್ನು ವಿತರಿಸಲಿದ್ದು ಮೂಲ್ಕಿ ಬಪ್ಪನಾಡು ಇನ್ಸ್‌ಪೈರ್ ಲಯನ್ಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದೆ ಎಂದರು.

ಇತ್ತೀಚೆಗೆ ಅಗಲಿದ ಖ್ಯಾತ ಉದ್ಯಮಿ ಇಂಜಿನಿಯರ್ ಹಾಗೂ ಈ ವ?ದ ಲಯನ್ಸ್ ಸಂಸ್ಥೆಯಲ್ಲಿ ಸಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಲಯನ್ಸ್ ಬಿ.ಎನ್ ಮಲ್ಲೇಶ್ ರವರ ಸ್ಮರಣಾರ್ಥ ಏರ್ಪಡಿಸಲಾಗಿದೆ ಎಂದು ಹೇಳಿದರು.

ಅಂದು ಬೆಳಗ್ಗೆ ೯.೩೦ ರಿಂದ ಪ್ರಾರಂಭವಾಗುವ ಈ ಶಿಬಿರದಲ್ಲಿ ಬಿ.ಪಿ, ಇ.ಸಿ.ಜಿ, ಜನರಲ್ ಮೆಡಿಸಿನ್, ಕಿವಿ, ಮೂಗು, ಗಂಟಲು, ತಪಾಸಣೆ ಕಣ್ಣಿನ ತಪಾಸಣೆ ಶ್ವಾಸಕೋಶ ವಿಭಾಗ, ಸ್ತ್ರೀರೋಗ ತಪಾಸಣೆ, ಮಧುಮೇಹ ಮುಂತಾದ ಕಾಯಿಲೆಗಳ ತಪಾಸಣೆ ಹಾಗೂ ಔ?ಧಿಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದರು.

ಈ ಕಾರ್ಯಕ್ರಮವನ್ನು ಪ್ರೆಸ್‌ಕ್ಲಬ್ ಅಧ್ಯಕ್ಷ ಬಿ.ಎಂ ರವಿ ಉದ್ಘಾಟಿಸಲಿದ್ದು, ಮಲೆನಾಡು ಸಂಗತಿ ಪತ್ರಿಕೆ ಸಂಪಾದಕ ಹೆಚ್.ಎಸ್ ಸುಂದರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಲು ಕೋರಿದರು. ತಮ್ಮ ಹೆಸರನ್ನು ಲಯನ್ಸ್ ಸಂಸ್ಥೆ ದೂ.ಸಂ ೯೪೪೮೬೫೭೬೯೭, ೯೮೪೪೪೫೪೭೯೫ ಈ ಸಂಖ್ಯೆಗಳಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.

ಲಯನ್ ಸಂಸ್ಥೆ ೪೯ ವ?ಗಳನ್ನು ಯಶಸ್ವಿಯಾಗಿ ಪೂರೈಸಿ ಈ ವ? ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ೪೯ ವ? ಅವಧಿಯ ಅಧ್ಯಕ್ಷರುಗಳು ಲಯನ್ ಸಂಸ್ಥೆಯ ಸಮರ್ಪಣ ಸದಸ್ಯರೊಂದಿಗೆ ನೂರಾರು ಸೇವಾ ಕಾರ್ಯಗಳನ್ನು ಸಹಕಾರ ಗೊಳಿಸುತ್ತಿದ್ದಾರೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸುಟ್ಟ ಗಾಯಗಳ ವಾರ್ಡ್ ನಿರ್ಮಾಣ, ವಾಹನ ನಿಲುಗಡೆ ವ್ಯವಸ್ಥೆ, ಡಯಾಲಿಸಿಸ್ ಯಂತ್ರ ನೀಡಿಕೆ, ನಗರದಲ್ಲಿ ಪ್ರಯಾಣಿಕರ ತಂಗುದಾಣಗಳ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ, ಚಿತಾಗಾರದ ನಾವಿನ್ಯತೆ, ವಿಶೇ? ಚೇತನರ ಶಾಲೆ ಸ್ವಾಗತ ಫಲಕಗಳು ಹೀಗೆ ಅನೇಕ ಶಾಶ್ವತ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಪ್ರತಿ ವ? ಉಚಿತ ನೇತ್ರ ಚಿಕಿತ್ಸೆ ಶಿಬಿರಗಳನ್ನು ನಡೆಸಿದೆ. ಕೃತಕ ಕೈಕಾಲು ಜೋಡಣ ಶಿಬಿರಗಳನ್ನು ನಡೆಸಿದೆ. ಈ ಧ್ಯೇಯೋದ್ದೇಶಗಳನ್ನು ಮುಂದುವರಿಸುತ್ತಾ ೫೦ನೇ ವ?ದ ಸುವರ್ಣ ಮಹೋತ್ಸವದ ಈ ವರ್ಷದುದ್ದಕ್ಕೂ ನಿರಂತರವಾಗಿ ಅನೇಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈಗಾಗಲೇ ರಕ್ತದಾನ ಶಿಬಿರ ಯೋಗ ತರಬೇತಿ ಶಿಬಿರದಂತ ತಪಾಸಣಾ ಶಿಬಿರ ನೇತ್ರ ತಪಾಸಣಾ ಶಿಬಿರಗಳನ್ನು ಪೂರೈಸಿದೆ, ಮುಂದೆ ವ್ಯಾಕ್ಸಿನೇ?ನ್ ಶಿಬಿರ ಹಾಗೂ ಐಎಎಸ್ ತರಬೇತಿ ಶಿಬಿರಗಳನ್ನು ಆಯೋಜಿಸಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ನಗರದ ಕುರುವಂಗಿ ಗ್ರಾಮದ ೫೦ ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ನೆಟ್ಟಿರುವ ೪೨೦೦ ಗಿಡಗಳ ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಂಡು ಮೊದಲನೇ ಹಂತವಾಗಿ ಎಲ್ಲ ಗಿಡಗಳಿಗೆ ಜೈವಿಕ ಗೊಬ್ಬರವನ್ನು ಹಾಕಿ ಪೋಷಿಸಲಾಗಿದೆ. ಬೇಸಿಗೆಯಲ್ಲಿ ನೀರು ಕೊಟ್ಟು ಎಲ್ಲ ಗಿಡಗಳನ್ನು ಉಳಿಸಿಕೊಂಡು ’ಲಯನ್ಸ್ ಸುವರ್ಣವನ’ ಎಂಬ ಪರಿಕಲ್ಪನೆ ಮಾಡಲಾಗಿದೆ ಎಂದು ಹೇಳಿದರು.

ಸಮಾಜ ಸೇವೆಯಲ್ಲಿ ವಿವಿಧ ಕ್ಷೇತ್ರದಲ್ಲಿನ ೫೦ ಜನ ಧುರೀಣರನ್ನು ಗುರುತಿಸಿ ಅಭಿನಂದಿಸುವ ಯೋಜನೆ ಹಮ್ಮಿಕೊಂಡಿದ್ದು, ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಮಧುವನ ಲೇಔಟ್ನ ಮೊದಲ ಮಹಡಿಯಲ್ಲಿ ತನ್ನ ಕಟ್ಟಡದ ವಿಸ್ತರಣಾ ಕಾಮಗಾರಿಯನ್ನು ಸುಮಾರು ೪೦ ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ದಾನಿಗಳ ಸಹಕಾರದೊಂದಿಗೆ ನಿರ್ಮಾಣ ಮಾಡಿ ಸಾರ್ವಜನಿಕ ಸೇವೆಗೆ ಸಿದ್ಧಗೊಳಿಸಲಾಗುವುದು ಎಂದರು.

ಪ್ರಸಕ್ತ ವ?ದಲ್ಲಿ ದಾನಿಗಳ ಪ್ರಾಯೋಜಕತೆಯಲ್ಲಿ ೨-೩ ಅತ್ಯಗತ್ಯ ಪ್ರಯಾಣಿಕರ ತಂಗುದಾಣವನ್ನು ವಿನೂತನ ಶೈಲಿಯಲ್ಲಿ ಆಕ?ಕವಾಗಿ ನಿರ್ಮಿಸುವ ದಿಶೆಯಲ್ಲಿ ಈಗಾಗಲೇ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಸಂಸ್ಥೆಯ ಹೆಚ್.ಆರ್ ಹರೀಶ್, ಎಂ.ಆರ್ ನಾಗರಾಜ್, ಕಾರ್ಯದರ್ಶಿ ಟಿ.ನಾರಾಯಣಸ್ವಾಮಿ ಇದ್ದರು.

Free health checkup camp at Lions Sevabhavan

About Author

Leave a Reply

Your email address will not be published. Required fields are marked *