September 20, 2024

ಸೆ.18ರಿಂದ ಅಕ್ಟೋಬರ್ 11 ರ ವರೆಗೆ 23 ದಿನಗಳ ಕಾಲ ಗಣಪತಿ ಉತ್ಸವ

0
ಗಣಪತಿ ಸೇವಾ ಸಮಿತಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಪತ್ರಿಕಾಗೋಷ್ಠಿ

ಗಣಪತಿ ಸೇವಾ ಸಮಿತಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಶ್ರೀ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿ?ಪಿಸಲಿರುವ ಗಣಪತಿ ಉತ್ಸವ ಸೆ.೧೮ ರಿಂದ ಅಕ್ಟೋಬರ್ ೧೧ ರ ವರೆಗೆ ೨೩ ದಿನಗಳ ಕಾಲ ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಗಣಪತಿ ಸೇವಾ ಸಮಿತಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ ಸೆ.೧೮ ರಂದು ನಗರದ ಬಸವನಹಳ್ಳಿ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಆವರಣದಿಂದ ಮೆರವಣಿಗೆ ಮೂಲಕ ಶ್ರೀ ಬೋಳರಾಮೇಶ್ವರ ದೇವಾಲಯದ ಆಸ್ಥಾನ ಮಂಟಪದಲ್ಲಿ ಮಧ್ಯಾಹ್ನ ೩ ಗಂಟೆಗೆ ಪ್ರತಿ?ಪಿಸಿ ಪ್ರತಿದಿನ ಪೂಜಾ ಕೈಂಕರ್ಯದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

ಇದರ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹರಿಕಥೆ, ಜಾದು, ಸುಗಮ ಸಂಗೀತ, ನಾಟಕ ನೃತ್ಯ, ಆರ್ಕೆಸ್ಟ್ರಾ ಇತರೆ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಅಕ್ಟೋಬರ್ ೧೧ ರಂದು ಸ್ತ್ರೀಯರನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಾದಸ್ವರ ಡೊಳ್ಳು, ವೀರಗಾಸೆ, ಹುಲಿವೇ?, ಹಳ್ಳಿ ವಾದ್ಯ, ಕೀಲು ಕುದುರೆ ನೃತ್ಯ ಇನ್ನೂ ಮುಂತಾದ ಕಲಾತಂಡಗಳೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ನಗರದ ಕೋಟೆ ಕೆರೆಯಲ್ಲಿರುವ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡುವುದಾಗಿ ತಿಳಿಸಿದರು.

ಅಕ್ಟೋಬರ್ ೮ ರಂದು ಭಾನುವಾರ ದಾನಿಗಳಿಂದ ಹಾಗೂ ನಗರದ ವರ್ತಕರಿಂದ ಸಾರ್ವಜನಿಕ ಗಣ ಹೋಮ ಮತ್ತು ಅನ್ನ ಸಮರ್ಪಣೆ ಕಾರ್ಯಕ್ರಮ ಹಾಗೂ ಅ.೨ ರಂದು ಸಂಕ?ಹರ ಚತುರ್ಥಿ ವಿಶೇ? ಪೂಜೆ, ೯ ರಂದು ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸಾರ್ವಜನಿಕರು, ಭಕ್ತಾದಿಗಳು ಪೂಜಾ ಸೇವಾರ್ಥದಾರರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ತಮ್ಮ ತನು ಮನ ಧನ ಸಹಾಯದೊಂದಿಗೆ ಸಹಕರಿಸಿ ಶ್ರೀ ಅವರ ಕೃಪೆಗೆ ಪಾತ್ರರಾಗಬೇಕಾಗಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಗಣಪತಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಇ ಚೇತನ್, ಖಜಾಂಜಿ ಎಚ್.ವೈ ಮೋಹನ್‌ಕುಮಾರ್, ಗೌರವಾಧ್ಯಕ್ಷರಾದ ಎನ್.ಈಶ್ವರಪ್ಪ, ಸಿ.ಆರ್ ಕೇಶವಮೂರ್ತಿ, ಉಪಾಧ್ಯಕ್ಷ ಉಮೇಶ್ ಉಪಸ್ಥಿತರಿದ್ದರು

Ganapati festival lasts for 23 days

About Author

Leave a Reply

Your email address will not be published. Required fields are marked *