September 20, 2024

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸಶಕ್ತಗೊಳಿಸುವಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವ

0
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ

ಚಿಕ್ಕಮಗಳೂರು: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಶಕ್ತಗೊಳಿಸುವಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ತರವಾಗಿದೆ ಎಂದು ಶಾಸಕ ಎಚ್ ಡಿ ತಮ್ಮಯ್ಯ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ನಮ್ಮ ಯುವ ಜನತೆ ಪ್ರಜಾಪ್ರಭುತ್ವವನ್ನು ಸರಿಯಾಗಿ ಅರ್ಥೈಸಿಕೊಂಡು ಅದನ್ನು ಬೆಳೆಸಿದಲ್ಲಿ ನಾವು ವಿಶ್ವಕ್ಕೆ ಮಾದರಿಯಾಗುತ್ತೇವೆ ಎಂದರು.

ಭಾರತದ ಪ್ರಜಾಪ್ರಭುತ್ವಕ್ಕೆ ಪ್ರಪಂಚದಲ್ಲೇ ಅತ್ಯಂತ ಮಹತ್ತರವಾದ ಸ್ಥಾನವಿದೆ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶ ಎಂಬ ಹಿರಿಮೆ ನಮ್ಮ ರಾಷ್ಟ್ರಕ್ಕೆ ಇದೆ ಅದನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಇಂದಿನ ಪೀಳಿಗೆ ಮೇಲಿದೆ ಎಂದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯ ಏಳು ಜನರ ಕರಡು ಸಮಿತಿ ರಚನೆ ಮಾಡಿದ ಸಂವಿಧಾನವನ್ನು 1949 ರ ನವೆಂಬರ್ 26ರಂದು ಅಂಗೀಕಾರ ಮಾಡಲಾಯಿತು ನಂತರ 1959 ರ ಜನವರಿ 26ರಂದು ಅದನ್ನು ಅಧಿಕೃತವಾಗಿ ಜಾರಿಗೆ ತರಲಾಯಿತು ಎಂದು ತಿಳಿಸಿದರು

ವಿಶ್ವ ಶ್ರೇಷ್ಠ ಅದ್ಬುತ ಸಂವಿಧಾನವನ್ನು ಹಿರಿಯ ನಾಗರೀಕರು ನಮಗೆ ನೀಡಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಇತರೆ ಹಿರಿಯ ನಾಗರೀಕರ ಪರಿಶ್ರಮದ ಶ್ರೇಷ್ಠ ಸಂವಿಧಾನ ನಮಗೆ ದೊರೆತಿದ್ದು, ಜಾತಿ, ಮತ, ಪಂಥ, ಲಿಂಗ ಭೇದವಿಲ್ಲದ ಸಮಾನತೆ, ಸೌರ್ಹಾದತೆ ಹೆಚ್ಚಿಸುವ ಹಾಗೂ ರಾಷ್ಟ್ರ ಐಕ್ಯತೆಯ ಸಿದ್ದಾಂತಗಳನ್ನು ನಮಗೆ ನೀಡಿದೆ. ಇದರ ಸಂಪೂರ್ಣ ಸಾರ ಸಂವಿಧಾನ ಪೀಠಿಕೆಯಲ್ಲಿದ್ದು, ಎಲ್ಲರೂ ಪೀಠಿಕೆ ಹಾಗೂ ಸಂವಿಧಾನದ ಬಗ್ಗೆ ಅರಿಯುವ ಜೊತೆಗೆ ಮುಂದಿನ ಪೀಳಿಗೆಗೆ ಸಂವಿಧಾನದ ಆಶಯ ಆಳವಡಿಸಿಕೊಳ್ಳುವ ಹಾಗೂ ತತ್ವ ಸಿದ್ದಾಂತಗಳನ್ನು ತಿಳಿ ಹೇಳುವ ಕಾರ್ಯ ಮಾಡುವಂತೆ ಹೇಳಿದರು.

ವಿಶ್ವದಲ್ಲೇ ಅತಿ ದೊಡ್ಡ ಸಂವಿಧಾನ ನಮ್ಮದು ಅದನ್ನು ರಚಿಸಿದ್ದಕ್ಕಾಗಿ ಅಂಬೇಡ್ಕರ್ ಅವರನ್ನು ಸಂವಿಧಾನ ಪಿತಾಮಹ ಎಂದು ಕರೆಯಲಾಗುತ್ತಿದೆ ಎಂದ ಅವರು ನಮ್ಮ ಸಂವಿಧಾನವನ್ನು ತಿಳಿಸಲು ಅಥವಾ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಗೋಪಾಲಕೃಷ್ಣ ಭಾರತದ ಸಂವಿಧಾನಕ್ಕೆ ಅದರದೇ ಆದ ವೈಶಿಷ್ಟ್ಯಗಳಿವೆ ಎಂದರು.
ನಮ್ಮ ಸಂವಿಧಾನದ ಪ್ರತಿ ಪದಕ್ಕೂ ಅರ್ಥವಿದೆ ಎಂದ ಅವರು ಇನ್ನು ಮುಂದೆ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಸಂವಿಧಾನದ ಮಹತ್ವವನ್ನು ಪ್ರಚಾರಪಡಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಭಾರತದ ಸಂವಿಧಾನದ ಪ್ರಸ್ತಾವನೆ ಬೋಧಿಸಿದರು. ಸಮಾಜ ಕಲ್ಯಾಣ ಉಪನಿರ್ದೇಶಕ ಡಾ. ಯೋಗೀಶ್ ಸ್ವಾಗತಿಸಿದರು.  ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ರಾಜೇಶ್, ಎಐಟಿ ಕಾಲೇಜಿನ ಪ್ರಾಂಶುಪಾಲ ಜಯದೇವ, ತಹಸೀಲ್ದಾರ್ ಡಾ. ಸುಮಂತ್, ಹಾಗೂ ವಿವಿಧ ಸಂಘಟನೆಗಳ ಮುಖಾಂಡರು ಹಾಜರಿದ್ದರು.

ನಗರದ ತಾಲ್ಲೂಕು ಕಛೇರಿ ಆವರಣದಿಂದ ಜಿಲ್ಲಾ ಆಟದ ಮೈದಾನದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಜಾಥಾ ಹಮ್ಮಿಕೊಳ್ಳಲಾಯಿತು.

International Democracy Day Programme

About Author

Leave a Reply

Your email address will not be published. Required fields are marked *