September 20, 2024

ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ ಸಹಯೋಗದಲ್ಲಿ ನೂರು ಶಾಲೆಗಳಿಗೆ 100 ಪುಸ್ತಕ ಯೋಜನೆ

0
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಸುದ್ದಿಗೋಷ್ಠಿ

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ ಸಹಯೋಗದಲ್ಲಿ ನೂರು ಶಾಲೆಗಳಿಗೆ ೧೦೦ ಪುಸ್ತಕ ಯೋಜನೆಯಡಿ ಸೆ.೧೬ ರಂದು ಬೆಳೆಗೆ ೧೧ ಗಂಟೆಗೆ ಕುವೆಂಪು ಕಲಾಮಂದಿರದಲ್ಲಿ ೧೦೦ ಪುಸ್ತಕ ಅನಾವರಣ ಹಾಗೂ ಜಿಲ್ಲೆಯ ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ ಸಮಾರಂಭವನ್ನು ಏರ್ಪಡಿಸಲಾಗಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಕೆ.ಕೆ.ಬ ಮತ್ತು ಪತ್ರ ಬರಹಗಾರರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮಕ್ಕಳ ಪ್ರೀತಿ ಬೆಳೆಸಿ ಪುಸ್ತಕ ಸಂಸ್ಕೃತಿಗೆ ಪೂರಕವಾದ ಕಾರ್ಯಕ್ರಮ ಇದಾಗಿದೆ ಎಂದರು.

ಜಿಲ್ಲೆಯಲ್ಲಿ ಆಯ್ಕೆಯಾಗಿರುವ ೧೦೦ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಈಗಾಗಲೇ ಡಿ.ಡಿ.ಪಿ.ಐ ಅವರ ಮೂಲಕ ಆಹ್ವಾನ ನೀಡಲಾಗಿದ್ದು ಅಂದು ನೂರು ಉಚಿತ ಪುಸ್ತಕ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗಿದ್ದು, ೧೦೦ ಪುಸ್ತಕಗಳ ಲೋಕಾರ್ಪಣೆ ಪುಸ್ತಕ ವಿತರಣೆಯನ್ನು ಜಿಲ್ಲಾಧಿಕಾರಿ ಡಾ.ಮೀನಾ ನಾಗರಾಜ್ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಇದೇ ಜಿಲ್ಲೆಯವರಾದ ಸಾಹಿತಿ ಕಾದಂಬರಿ ಕಾರರಾದ ಎಂ.ಆರ್ ದತ್ತಾತ್ರೇಯ ಅವರು ೧೦೦ ಪುಸ್ತಕಗಳ ಅನಾವರಣ ಮಾಡಲಿದ್ದಾರೆ ಎಂದು ಹೇಳಿದರು.

ಶಾಸಕ ಎಚ್.ಡಿ ತಮ್ಮಯ್ಯ ಪುಸ್ತಕ ವಿತರಣೆ ಮಾಡಲಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಜಿ.ರಂಗನಾಥಸ್ವಾಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ ಅಧ್ಯಕ್ಷ ಸೂರಿಶ್ರೀನಿವಾಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತಾವು ಅಧ್ಯಕ್ಷತೆ ವಹಿಸಲಿದ್ದು ಅಂದು ನೂರು ಶಾಲೆಗಳಿಗೆ ನೂರು ನೂರು ಪುಸ್ತಕಗಳನ್ನು ಆಯ್ಕೆ ಆಗಿರುವ ಸರ್ಕಾರಿ ಶಾಲೆಗಳಿಗೆ ವಿತರಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಕನ್ನಡ ಬರಹಗಾರ ಮತ್ತು ಪ್ರಕಾಶಕರ ಸಂಘ ರಾಜ್ಯ ಮಟ್ಟದ ಸಂಘವಾಗಿದ್ದು ೧ ನವೆಂಬರ್ ೨೦೦೩ ರಿಂದ ಅಸ್ತಿತ್ವಕ್ಕೆ ಬಂದಿದ್ದು ನಿಯಮಾನುಸಾರ ಸರ್ಕಾರದಲ್ಲಿ ನೊಂದಣಿಯಾಗಿರುತ್ತದೆ. ಈ ಸಂಘವು ರಾಜ್ಯಾದ್ಯಂತ ಸದಸ್ಯರನ್ನು ಹೊಂದಿದೆ. ಉತ್ಸಾಹಿ ಆಸಕ್ತ, ಕ್ರಿಯಾಶೀಲ, ಸಮಾನ ಮನಸ್ಕ ಬರಹಗಾರರು ಮತ್ತು ಪ್ರಕಾಶಕರ ಸಂಘಟಿತ ಸಂಸ್ಥೆ ಈ ಸಂಘ ಕನ್ನಡ ಪುಸ್ತಕೋದ್ಯಮದ ಸರ್ವತೋಮುಖ ಅಭಿವೃದ್ಧಿ ಹಾಗೂ ಪುಸ್ತಕ ಪ್ರೀತಿಯನ್ನು ಬೆಳೆಸಿ ಪೋಷಿಸಲು ಸಹಕಾರಿಯಾಗುವಂತಹ ಹಲವು ಸದುದ್ದೇಶಗಳೊಂದಿಗೆ ಸಂಘವನ್ನು ಸ್ಥಾಪಿಸಲಾಗಿದೆ ಎಂದು ವಿಶ್ಲೇಷಿಸಿದರು.

ನೂರು ಶಾಲೆಗಳಿಗೆ ನೂರು ನೂರು ಪುಸ್ತಕ ಯೋಜನೆ

ಪುಸ್ತಕ ಸಂಸ್ಕೃತಿಗೆ ಪೂರಕವಾಗಿ ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ಹುಟ್ಟು ಹಾಕಿ ಪಠ್ಯೇತರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಲು ಪ್ರತಿ ವ? ಒಂದೊಂದು ಜಿಲ್ಲೆಯ ಆಯ್ದ ಒಂದು ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ತಲಾ ನೂರು ಪುಸ್ತಕಗಳನ್ನು ಉಚಿತವಾಗಿ ವಿತರಿಸುವ ಯೋಜನೆ ಅಡಿಯಲ್ಲಿ ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನಾಡೋಜಾ ಡಾಕ್ಟರ್ ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ, ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಗೆ ನಾಡೋಜ ಡಾಕ್ಟರ್ ಪಾಟೀಲ್ ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ, ಗಡಿ ಭಾಗದ ಚಾಮರಾಜನಗರ ಜಿಲ್ಲೆಗೆ ಕರ್ನಾಟಕ ರತ್ನ ಡಾಕ್ಟರ್ ದೇ.ಜವರೇಗೌಡ ಅಧ್ಯಕ್ಷತೆಯಲ್ಲಿ ವಿತರಿಸಲಾಗಿದೆ ಎಂದರು.

ತುಮಕೂರು ಜಿಲ್ಲೆಗೆ ಪ್ರೊಫೆಸರ್ ಎಸ್.ಜಿ ಸಿದ್ದರಾಮಯ್ಯ ಅಧ್ಯಕ್ಷತೆಯಲಿ, ಮೈಸೂರು ಜಿಲ್ಲೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿದ್ದ ಎನ್.ಮಹೇಶ್ ರವರ ಅಧ್ಯಕ್ಷತೆಯಲ್ಲಿ, ಮಂಡ್ಯ ಜಿಲ್ಲೆಗೆ ಎಂ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಗೆ ಡಾಕ್ಟರ್ ನಾ.ಡಿಸೋಜ ಅವರ ನೇತೃತ್ವದಲ್ಲಿ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು. ಮೇಲ್ಕಂಡ ಏಳು ಜಿಲ್ಲೆಗಳ ೭೦೦ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಇಲ್ಲಿಯವರೆಗೆ ೭೦,೦೦೦ ಮಕ್ಕಳ ಪುಸ್ತಕಗಳನ್ನು ವಿತರಿಸಿದ್ದೇವೆ ಎಂದು ವಿವರಿಸಿದರು.

ಮಕ್ಕಳ ಜ್ಞಾನಾರ್ಜನೆಗೆ ಉಪಯುಕ್ತವಾದ ಉತ್ತಮ ಮಕ್ಕಳ ಪುಸ್ತಕಗಳನ್ನು ಹಲವಾರು ಉತ್ಸಾಹಿ ಸಂಘ ಸಂಸ್ಥೆಗಳು ಬರಹಗಾರರ ಪುಸ್ತಕ ದಾನಿಗಳು ಮತ್ತು ಪ್ರಕಾಶಕರಿಂದ ಕೊಡುಗೆಯಾಗಿ ಸಂಗ್ರಹಿಸಿ ಉಚಿತವಾಗಿ ವಿತರಿಸಲಾಗುತ್ತಿದೆ. ಹೀಗೆ ಪಡೆದ ಪುಸ್ತಕಗಳನ್ನು ಶಾಲೆ ಆಡಳಿತ ವರ್ಗದವರು ಕಪಾಟಿನಲ್ಲಿಟ್ಟು ಬೀಗ ಹಾಕದೆ ಮಕ್ಕಳಿಗೆ ಓದಲು ನೀಡುವ ಮೂಲಕ ಯೋಜನೆಯ ಸಾರ್ಥಕತೆಗೆ ಸಹಕಾರ ನೀಡಬೇಕೆಂದು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಲ್ಲಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಮೈಸೂರು ಘಟಕದ ಸಂಚಾಲಕ ಮಾನಸ, ಕಾರ್ಯದರ್ಶಿ ಸುರೇಶ್, ಸದಸ್ಯ ಚಂದ್ರ ಕೀರ್ತಿ, ಜಿ.ಕ.ಸಾ.ಪ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾ.ಅಧ್ಯಕ್ಷ ಬಿ.ಸೋಮಶೇಖರ್ ಉಪಸ್ಥಿತರಿದ್ದರು

Karnataka Kannada Writers and Publishers Association press conference

About Author

Leave a Reply

Your email address will not be published. Required fields are marked *