September 20, 2024

ಅಂಚೆ ನೌಕರರ ಸಹಕಾರ ಸಂಘಕ್ಕೆ 15 ಲಕ್ಷ ನಿವ್ವಳ ಲಾಭ

0
ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಚಿಕ್ಕಮಗಳೂರು: ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘವು ಪ್ರಸ್ತುತ ಸಾಲಿನಲ್ಲಿ ೧೫ ಲಕ್ಷ ರೂ. ನಿವ್ವಳ ಲಾಭಗಳಿಸುವ ಮೂಲಕ ಆರ್ಥಿಕವಾಗಿ ಮುನ್ನೆಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಸಿ.ಭಾಸ್ಕರ್ ಹೇಳಿದರು.

ನಗರದ ಶಾರದಾ ಪೈ ಕಲ್ಯಾಣ ಮಂಟಪದಲ್ಲಿ ಚಿಕ್ಕಮಗಳೂರು ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘದಲ್ಲಿ ಈಗಾಗಲೇ ಸದಸ್ಯರಿಗೆ ೨.೫ ಕೋಟಿಗೂ ಹೆಚ್ಚು ಸಾಲ ವಿತರಿಸಿ ಬಳಿಕ ಶೇ.೯೦ರಷ್ಟು ಸಾಲವನ್ನು ವಸೂಲಿ ಮಾಡಲಾಗಿದೆ. ಪ್ರಸ್ತುತ ಸಂಘದಲ್ಲಿ ೧೩೦೦ಕ್ಕೂ ಹೆಚ್ಚು ಮಂದಿ ಸದಸ್ಯರಾಗಿರುವುದು ಸಂಘದ ಬೆಳವಣಿಗೆಗೆ ಮೂಲ ಕಾರಣವಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ಸ್ಥಾಪಿಸುವ ಗುರಿ ಹೊಂದಿದ್ದು ಅದರಂತೆ ಒಂದು ನಿವೇಶನ ಅಥವಾ ಕಟ್ಟಡವನ್ನು ಖರೀದಿ ಮಾಡಲು ತೀರ್ಮಾನಿಸಿದ್ದು ಕೆಲವೇ ದಿನಗಳಲ್ಲಿ ಕಾರ್ಯಕತಕ್ಕೆ ಮುಂದಾಗಲಾ ಗುವುದು ಎಂದು ಹೇಳಿದರು.

ಸಂಘದ ಸದಸ್ಯರು ಅತಿಹೆಚ್ಚು ಸಂಖ್ಯೆಯಲ್ಲಿ ಸಂಘಕ್ಕೆ ಠೇವಣಿ ಇರಿಸಿದರೆ ಸಂಘವು ಆರ್ಥಿಕವಾಗಿ ಮುಂದು ವರೆಯಲು ಸಾಧ್ಯ. ಜೊತೆಗೆ ಸಂಕಷ್ಟದಲ್ಲಿರುವ ಸದಸ್ಯರುಗಳಿಗೆ ಸಾಲ ವಿತರಿಸಿ ಅವರಿಂದ ಬರುವಂತಹ ಬಡ್ಡಿಯಿ ಂದ ಸಂಘವು ಹಾಗೂ ಸದಸ್ಯರು ಉತ್ತಮವಾಗಿ ಬೆಳವಣಿಗೆಯಾಗಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ನಾಗಭೂಷಣ್, ನಿರ್ದೇಶಕರುಗಳಾದ ಹೆಚ್.ಎಲ್.ಪ್ರಸನ್ನ ಕುಮಾರ್, ಹೆಚ್.ಟಿ.ಮಂಜಪ್ಪ, ಎಂ.ಸುಧಾ, ಬಿ.ಎನ್.ಸಚಿನ್‌ಕುಮಾರ್, ಎಸ್.ಡಿ.ಮಂಜಪ್ಪ, ಟಿ.ಎಸ್.ಬಸವರಾಜ್, ಬಿ.ಎಂ.ನಾಗರಾಜ್, ಹೆಚ್.ಸುಬ್ರಮಣ್ಯ, ರೋವಿನ ಮೇರಿ ಅನಿತಾ, ಆರ್.ಶ್ರೀನಿವಾಸ್, ಸೌರಭ್ ಆಸ್ಟಿಕರ್, ಬಿ. ಮಂಜಪ್ಪ, ಘನಲಿಂಗಮೂರ್ತಿ, ಸಿ.ಎಸ್.ಶಶಿಕುಮಾರ್, ಕಾರ್ಯದರ್ಶಿ ಮಧು ಉಪಸ್ಥಿತರಿದ್ದರು.

Annual General Meeting of Postal Department Employees’ Co-operative Society

About Author

Leave a Reply

Your email address will not be published. Required fields are marked *