September 20, 2024

ಸೆ.28 ರಂದು ಜಿಲ್ಲೆಗೆ ಶೌರ್ಯ ಜಾಗರಣಾ ರಥಯಾತ್ರೆ

0
ವಿ.ಹೆಚ್.ಪಿ ವಿಭಾಗ ಸಂಚಾಲಕ ಆರ್.ಡಿ ಮಹೇಂದ್ರ ಪತ್ರಿಕಾಗೋಷ್ಠಿ

ವಿ.ಹೆಚ್.ಪಿ ವಿಭಾಗ ಸಂಚಾಲಕ ಆರ್.ಡಿ ಮಹೇಂದ್ರ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ವಿಶ್ವ ಹಿಂದು ಪರಿ?ತ್ ೬೦ನೇ ವ?ಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ಆಯೋಜಿಸಿರುವ ಶೌರ್ಯ ಜಾಗರಣಾ ರಥಯಾತ್ರೆ ಸೆ.೨೮ ರಂದು ಜಿಲ್ಲೆಗೆ ಆಗಮಿಸುತ್ತಿದೆ ಎಂದು ವಿ.ಹೆಚ್.ಪಿ ವಿಭಾಗ ಸಂಚಾಲಕ ಆರ್.ಡಿ ಮಹೇಂದ್ರ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ ರಥಯಾತ್ರೆಯು ಸೆ.೨೫ ರಂದು ಚಿತ್ರದುರ್ಗದಿಂದ ಪ್ರಾರಂಭವಾಗಿ ಅಂದು ಜಿಲ್ಲೆಗೆ ಆಗಮಿಸಲಿದೆ. ಶಿವಮೊಗ್ಗ ಮಾರ್ಗವಾಗಿ ಆಗಮಿಸುವ ರಥಯಾತ್ರೆ ಎನ್.ಆರ್ ಪುರ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರಿನಲ್ಲಿ ವಾಸ್ತವ್ಯ ಮಾಡಿ ಸೆ.೨೯ ರಂದು ಆಲ್ದೂರು ಮಾರ್ಗವಾಗಿ ನಗರಕ್ಕೆ ಆಗಮಿಸಿ ನಂತರ ಹಾಸನ ಜಿಲ್ಲೆಗೆ ಹೊರಡಲಿದೆ. ಅ.೧೦ ರಂದು ಉಡುಪಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿ ಈ ರಥಯಾತ್ರೆ ಸಂಪನ್ನಗೊಳ್ಳಲಿದೆ ಎಂದರು.

ನಮ್ಮದು ಶೌರ್ಯ ಪರಾಕ್ರಮಗಳ ಇತಿಹಾಸ. ಸಾವಿರಾರು ವ?ಗಳಿಂದ ಈ ರಾಷ್ಟ್ರದ ಮೇಲೆ ಪರಕೀಯರ ಆಕ್ರಮಗಳು ನಡೆಯುತ್ತಲೇ ಇದ್ದರೂ ಅದನ್ನು ದಿಟ್ಟವಾಗಿ, ಸಮರ್ಪಕವಾಗಿ ಎದುರಿಸುತ್ತಾ, ಸನಾತನ ಧರ್ಮವನ್ನು ಈ ಪವಿತ್ರ ಭಾರತ ಭೂಮಿಯನ್ನು ಸಂರಕ್ಷಿಸುವಲ್ಲಿ ನೂರಾರು ಸಾವಿರಾರು ವೀರರು, ಧೀರರು, ಶೂರರು, ಪರಾಕ್ರಮಿಗಳು ತಮ್ಮ ಜೀವನವನ್ನೇ ಸಮರ್ಪಿಸಿ ಅವಶ್ಯ ಬಂದಾಗ ಬಲಿದಾನವು ಆಗಿ ನಮಗೆ ಶ್ರೇ? ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ ಎಂದು ಹೇಳಿದರು.

ಅವರ ತ್ಯಾಗ ಬಲಿದಾನಗಳ ಪರಿಣಾಮವಾಗಿ ಸನಾತನ ಧರ್ಮವು ಸುರಕ್ಷಿತವಾಗಿ ನಮ್ಮ ಕಾಲಖಂಡದವರೆಗೆ ತಲುಪಿದ್ದು, ಇದನ್ನು ಸಂರಕ್ಷಿಸುವ ಹೊಣೆ ಮತ್ತು ಮುಂದಿನ ಪೀಳಿಗೆಗೆ ಯಥಾವತ್ತಾಗಿ ತಲುಪಿಸಿ ನಿರಂತರ ಧರ್ಮ ರಕ್ಷಣೆಯನ್ನು ಮಾಡಬೇಕಾದ ಕಾರ್ಯವು ಪ್ರತಿಯೊಬ್ಬ ಹಿಂದುವಿನ ಮೇಲಿದೆ ಎಂದರು.

ಈ ವಿಚಾರವನ್ನು ಇಂದಿನ ಜನತೆಗೆ ತಲುಪಿಸಿ ಅವರಲ್ಲಿ ಧರ್ಮಪ್ರಜ್ಞೆಯನ್ನು ಜಾಗೃತಗೊಳಿಸಿ ಈ ರಾ?ವನ್ನು, ಸನಾತನ ಧರ್ಮವನ್ನು ಸಂರಕ್ಷಿಸಲೆಂದೇ ಜನ್ಮ ತಾಳಿದ ವಿಶ್ವ ಹಿಂದೂ ಪರಿ?ತ್. ಧರ್ಮ ರಕ್ಷತಿ ರಕ್ಷಿತಾಃ ಎಂಬ ಧ್ಯೇಯ ಮಂತ್ರದೊಂದಿಗೆ ರಾ? ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈ ಸಂಘಟನೆಗೆ ಸೇರಿಕೊಂಡು ಧ್ಯೇಯ ಸಾಧನೆಗಾಗಿ ಪ್ರತಿಯೊಬ್ಬರನ್ನು ಕೈಬೀಸಿ ಕರೆಯುತ್ತಿದೆ ಎಂದು ತಿಳಿಸಿದರು.

ಈ ಯಶೋಗಾತೆಯನ್ನು ಎಲ್ಲರಿಗೂ ತಿಳಿಸಿ, ನಮ್ಮ ಪೂರ್ವಜರ ಬಗ್ಗೆ, ಸನಾತನ ಧರ್ಮದ ಬಗ್ಗೆ ನೈಜ ಅರಿವನ್ನು ಮೂಡಿಸುವ ಸಲುವಾಗಿ ಬಜರಂಗದಳವು ಆಯೋಜಿಸಿರುವ ಈ ರಾ?ವ್ಯಾಪಿ ರಥಯಾತ್ರೆಯಲ್ಲಿ ಪ್ರತಿಯೊಬ್ಬ ಹಿಂದುವೂ ಭಾಗವಹಿಸಿ, ಕೈಜೋಡಿಸಿ ತನುಮನದೊಂದಿಗೆ ಸಮರ್ಪಿಸಿಕೊಳ್ಳುವಂತೆ ಸಮಸ್ತ ಹಿಂದು ಸಮಾಜವನ್ನು ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿ.ಹೆಚ್.ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಕಾರ್ಯದರ್ಶಿ ರಂಗನಾಥ್, ಬಜರಂಗದಳ ಸಂಯೋಜಕ ಸಿ.ಡಿ ಶಿವಕುಮಾರ್, ಯೋಗೀಶ್ ರಾಜ್ ಅರಸ್, ಶಶಾಂಕ್ ಉಪಸ್ಥಿತರಿದ್ದರು.

Shaurya Jagarana Rath Yatra to the district on September 28

About Author

Leave a Reply

Your email address will not be published. Required fields are marked *