September 20, 2024

ಪದವೀಧರ – ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾರರನ್ನುನೊಂದಾಯಿಸುವ ಕಾರ್ಯವನ್ನು ಚುರುಕುಗೊಳಿಸಬೇಕು

0
ಜಿಲ್ಲಾ ಬಿಜೆಪಿ ಪಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಷತ್ ಚುನಾವಣೆ ಪೂರ್ವಭಾವಿ ಸಿದ್ಧತಾ ಸಭೆ

ಜಿಲ್ಲಾ ಬಿಜೆಪಿ ಪಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಷತ್ ಚುನಾವಣೆ ಪೂರ್ವಭಾವಿ ಸಿದ್ಧತಾ ಸಭೆ

ಚಿಕ್ಕಮಗಳೂರು: ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾರರನ್ನು ನೊಂದಾಯಿಸುವ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.

ಬುಧವಾರ ಜಿಲ್ಲಾ ಬಿಜೆಪಿ ಪಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಷತ್ ಚುನಾವಣೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜನಸಂಘದ ಕಾಲದಿಂದಿಂದಲೂ ಪರಿಷತ್ ಚುನಾವಣೆಗಳನ್ನು ನಾವು ಗೆಲ್ಲುತ್ತಾ ಬಂದಿದ್ದೇವೆ. ಪದವೀಧರ ಕ್ಷೇತ್ರದಲ್ಲಿ ೬ ಬಾರಿ ನಿರಂತರ ಗೆಲುವುದ ಸಾಧಿಸಿದ್ದೇವೆ. ಶಿಕ್ಷಕರ ಕ್ಷೇತ್ರದಲ್ಲಿ ೪ ಬಾರಿ ಗೆದ್ದಿದ್ದೇವೆ. ಎಷ್ಟು ಜನ ಮತದಾರರನ್ನು ನಾವು ನೊಂದಾಯಿಸುತ್ತೇವೋ ಅದರ ಮೇಲೆ ನಮ್ಮ ಗೆಲುವುದ ಖಾತ್ರಿಯಾಗುತ್ತಾ ಹೋಗುತ್ತದೆ. ಈ ಕಾರಣಕ್ಕೆ ನಮ್ಮ ವಿಚಾರದಲ್ಲಿ ಒಲವಿರುವವರನ್ನ ನೊಂದಣಿಮಾಡಿಸಬೇಕು ಎಂದು ಕರೆ ನೀಡಿದರು.

ಸಂಘಟನಾ ಜಾಲವೇ ನಮಗಿರುವ ದೊಡ್ಡ ಸಾಮರ್ಥ್ಯ. ಮತದಾರರನ್ನು ನೊಂದಣಿ ಮಾಡಿಸುವುದು ಸುಲಭವಲ್ಲ. ಬೆನ್ನು ಹಿಡಿದ ಬೇತಾಳದ ರೀತಿ ಬೆನ್ನು ಬಿದ್ದು ಕೆಲಸ ಮಾಡಬೇಕು. ನಮ್ಮ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ೨೯ ವಿಧಾನಸಭಾ ಕ್ಷೇತ್ರಗಳ ಪೈಕಿ ೧ ಜೆಡಿಎಸ್ ಇದೆ. ೧೪ ಬಿಜೆಪಿ ಹಾಗೂ ೧೪ ಕಾಂಗ್ರೆಸ್ ಇದೆ. ಈಗಿರುವ ಸ್ಥಿತಿಯಲ್ಲಿ ಒಂದೊಂದೇ ಸ್ಥಾನ ಇದ್ದಾಗಲೂ ಗೆದ್ದು ಬಂದಿದ್ದೇವೆ. ಈಗ ನೊಂದಣಿಯನ್ನು ಇನ್ನಷ್ಟು ಚೆನ್ನಾಗಿ ಮಾಡಿದರೆ ಸುಲಭವಾಗಿ ಗೆಲ್ಲಬಹುದು ಎಂದು ತಿಳಿಸಿದರು.

ಸೆಪ್ಟೆಂಬರ್ ೩೦ ರಿಂದ ಮತದಾರರ ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಪ್ರಾರಂಭವಾಗುತ್ತದೆ. ನವೆಂಬರ್ ೬ ಕ್ಕೆ ಮೊದಲ ಹಂತ ಮುಕ್ತಾಯಗೊಳ್ಳಲಿದೆ. ನಂತರ ಪರಿಶೀಲನೆ, ಕರಡು ಮತದಾರರ ಪಟ್ಟಿ ಬಿಡುಗಡೆ ನಂತರ ಡಿಸೆಂಬರ್‌ನಲ್ಲಿ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಆಗಲಿದೆ. ಡಿಸೆಂಬರ್ ನಂತರ ಮತ್ತೊಂದು ಅವಕಾಶ ಸಿಗಬಹುದು ಎಂದು ಯಾರೂ ಕಾಯಬಾರದು ಕಾರಣ ನಾವೆಲ್ಲರೂ ಲೋಕಸಭಾ ಚುನಾವಣೆ ಮೂಡ್‌ಗೆ ಬಂದುಬಿಡುತ್ತೇವೆ. ಈ ಕಾರಣಕ್ಕೆ ಏನೇ ಮಾಡುವುದಿದ್ದರೂ ನವೆಂಬರ್ ೬ ರೊಳಗಾಗಿ ಮಾಡಬೇಕು ಎಂದರು.

ಪದವೀಧರರು, ಶಿಕ್ಷಕರು ಹೆಚ್ಚಾಗಿ ಒಂದೇ ಸ್ಥಳದಲ್ಲಿ ಸಿಗುವ ಬ್ಯಾಂಕ್, ಕೋರ್ಟ್, ಕಾಲೇಜು, ಪಾಲಿಟೆಕ್ನಿಕ್ ಇನ್ನಿತರೆ ಖಾಸಗಿ, ಸರ್ಕಾರಿ ಸಂಸ್ಥೆಗಳಿಗೆ ತೆರಳಿ ಅವರ ಮನವೊಲಿಸಿ ನೊಂದಣಿ ಮಾಡಿಸಬೇಕು. ಕರಡು ಮತದಾರರ ಪಟ್ಟಿ ಬಂದ ಕೂಡಲೇ ಅದನ್ನೊಮ್ಮೆ ಪರಿಶೀಲನೆ ನಡೆಸಬೇಕು. ಬೇನಾಮಿ ಸಂಸ್ಥೆಗಳ ಹೆಸರಲ್ಲಿ ಶಿಕ್ಷಕರೇ ಅಲ್ಲದ ಮತದಾರರನ್ನು ನೊಂದಾಯಿಸುವ ಕೆಲಸವನ್ನು ಕೆಲವರು ಮಾಡುತ್ತಾರೆ ಅಂತಹದ್ದನ್ನು ಗುರುತಿಸುವ ಕೆಲಸವೂ ಆಗಬೇಕು ಎಂದರು.

ಹೊಂದಾಣಿಕೆ ಇತ್ಯಾದಿ ವಿಚಾರ ಇದ್ದರೂ ನಮ್ಮ ಕೆಲಸ ನೊಂದಣಿ ಮಾಡಿಸುವುದು. ಆ ಕೆಲಸವನ್ನು ಚೆನ್ನಾಗಿ ಮಾಡಿದ್ದರೆ ಟಿಕೆಟ್‌ನ್ನೂ ನಮಗೇ ಕೊಡಿ ಎಂದು ಕೇಳಬಹುದು. ಹೊಂದಾಣಿಕೆ ಲೋಕಸಭೆಗೆ ಮಾತ್ರವೋ ಅಥವಾ ಎಲ್ಲ ಚುನಾವಣೆಗೆ ಅನ್ವಯಿಸುತ್ತದೋ ಎನ್ನುವುದು ಇನ್ನೂ ಮಾತುಕತೆ ಹಂತದಲ್ಲಿದೆ. ಆ ಕಾರಣಕ್ಕೆ ಆ ಗೋಜಲಿಗೆ ನಾವು ಹೋಗುವುದು ಬೇಡ ಎಂದರು.

ಮತ್ತೋರ್ವ ಮಾಜಿ ಶಾಸಕ ಡಿ.ಎನ್.ಜೀವರಾಜ್ ಮಾತನಾಡಿ, ಶಿಕ್ಷಕರಾಗಿದ್ದವರು. ಬಹುತೇಕ ಪದವೀಧರರೇ ಆಗಿರುತ್ತಾರೆ. ಹಾಗಾಗಿ ಅವರು ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರ ಎರಡಕ್ಕೂ ಮತದಾರರಾಗಿರುತ್ತಾರೆ. ಈ ಕಾರಣಕ್ಕೆ ಅವರಿಂದ ಎರಡು ಫಾರಂ ಸಂಗ್ರಹಿಸಬೇಕಾಗುತ್ತದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಮಾಜಿ ಶಾಸಕ ಡಿ.ಎಸ್.ಸುರೇಶ್, ಮುಖಂಡರುಗಳಾದ ದೀಪಕ್‌ದೊಡ್ಡಯ್ಯ, ಸಿಆರ್.ಪ್ರೇಂಕುಮಾರ್, ಹಂಪಾಪುರಪುಟ್ಟೇಗೌಡ, ದೇರಾಜ್‌ಶೆಟ್ಟಿ, ಅವಿನಾಶ್ ಇತರರು ಇದ್ದರು.

Parishad Election Preparatory Meeting

About Author

Leave a Reply

Your email address will not be published. Required fields are marked *