September 20, 2024

ಪೌರಕಾರ್ಮಿಕರು ದಿನನಿತ್ಯ ನಗರವನ್ನು ಸ್ವಚ್ಛ ಮಾಡುವ ಮೂಲಕ ಸಾಮಾಜಿಕ ಕಳಕಳಿ ಹೊಂದಿದ್ದಾರೆ

0
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕ್ರೀಡಾಕೂಟ

ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕ್ರೀಡಾಕೂಟ

ಚಿಕ್ಕಮಗಳೂರು: ಆರೋಗ್ಯ ಮತ್ತು ಸಮಾಜದ ಸ್ವಾಸ್ಥ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ದಿನನಿತ್ಯ ನಗರವನ್ನು ಸ್ವಚ್ಛ ಮಾಡುವ ಮೂಲಕ ಸಾಮಾಜಿಕ ಕಳಕಳಿ ಹೊಂದಿದ್ದಾರೆ ಎಂದು ವಿಧಾನ ಪರಿ?ತ್ ಸದಸ್ಯ ಎಸ್.ಎಲ್ ಬೋಜೇಗೌಡ ಹೇಳಿದರು.

ಅವರು ಇಂದು ಶುಭಾ? ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ನಗರಸಭೆ, ರಾಜ್ಯ ಪೌರಕಾರ್ಮಿಕರ ಸಂಘದ ಸಹಯೋಗದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಪೌರ ಕಾರ್ಮಿಕರಿಗೆ ಅವರದೇ ಆದ ಸ್ಥಾನಮಾನಗಳಿವೆ. ಇ? ವ?ಗಳಾದರೂ ಅವರ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರ ಕಣ್ಣು ತೆರೆದು ನೋಡಿಲ್ಲ, ನಮ್ಮನ್ನು ಯಾವಾಗ ಖಾಯಂ ಮಾಡುತ್ತಾರೆಂದು ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ ಎಂದು ವಿ?ಧಿಸಿದರು.

ನಗರದಲ್ಲಿ ೧ ಲಕ್ಷಕ್ಕೂ ಮೀರಿ ಜನಸಂಖ್ಯೆ ಇದ್ದು, ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರ ಸಂಖ್ಯೆ ಹೆಚ್ಚಳವಾಗಿಲ. ಇರುವಂತ ಸಿಬ್ಬಂದಿಗಳಿಂದಲೇ ಸ್ವಚ್ಛ ಕಾರ್ಯ ನಡೆಯುತ್ತಿದೆ, ಸೌಲಭ್ಯಗಳಿಂದ ವಂಚಿತರಾಗಿರುವ ಇವರಿಗೆ ಕೂಡಲೇ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿದರು.

ಇಂತಹ ಪೌರಕಾರ್ಮಿಕ ದಿನಾಚರಣೆಗಳು ಅವರಲ್ಲಿ ಸ್ಪೂರ್ತಿ ತುಂಬಿ, ಸಂವಿಧಾನ ಬದ್ಧವಾಗಿ ಕಾನೂನು, ಬದ್ಧವಾಗಿ ಬರಬೇಕಾದ ಸೌಲಭ್ಯ ಪಡೆದುಕೊಳ್ಳುವಲ್ಲಿ ಮುಂದಾಗಬೇಕು. ಎರಡು ದಿನ ಪೌರಕಾರ್ಮಿಕರು ಪ್ರತಿಭಟನೆ, ಧರಣಿ ಕುಳಿತರೆ ಇಡೀ ನಗರ ಸ್ವಚ್ಛತೆಯನ್ನು ಕಾಣುವುದಿಲ್ಲ ಈ ನಿಮ್ಮ ಉತ್ತಮ ಕಾರ್ಯಗಳಿಗೆ ಸದಾ ನಿಮ್ಮೊಂದಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.

ದಿನನಿತ್ಯದ ಜಂಜಾಟದಿಂದ ದೂರ ಇದ್ದು, ಕ್ರೀಡಾಕೂಟದಲ್ಲಿ ಭಾಗಿಯಾಗುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದ ಅವರು ಈ ಸಮಾಜಮುಖಿ ಕಾರ್ಯ ನಗರದ ಜನರಿಗೆ ತೋರಿಸುವಂತಾಗಲಿ. ಈ ಎರಡು ದಿನ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಿ ದುಗುಡ ದುಮ್ಮಾನ ದೂರ ಮಾಡಿಕೊಳ್ಳಿ ಎಂದು ಹಾರೈಸಿದರು.

ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ ಪೌರಕಾರ್ಮಿಕರ ಸಮಸ್ಯೆಗಳಿಗೆ ಈವರೆಗೆ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರ ಸ್ಪಂದಿಸಿಲ್ಲ ಇನ್ನು ಮುಂದೆ ಆದರೂ ಈಗಿರುವ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಈ ಕ್ರೀಡಾಕೂಟದಲ್ಲಿ ಸೋತವರು ಬಾಗದೆ, ಗೆದ್ದವರು ಬೀಗದೆ ಶಾಂತಿ ಸೌಹಾರ್ಧಯುತವಾಗಿ ಕಾರ್ಯಕ್ರಮ ಮುಗಿಸಲು ವಿನಂತಿಸಿದರು.

ಮೊದಲಿಗೆ ಪೌರಾಯುಕ್ತ ಬಿ.ಸಿ ಬಸವರಾಜ್ ಸ್ವಾಗತಿಸಿದರು, ಮಾಜಿ ಸದಸ್ಯ ದಿನೇಶ್, ಪೌರ ನೌಕರರ ಸಂಘದ ಗೌರವಾಧ್ಯಕ್ಷ ರಮೇಶ್‌ನಾಯ್ಡು, ಜಿಲ್ಲಾಧ್ಯಕ್ಷ ಅಣ್ಣಯ್ಯ, ಜಿಲ್ಲಾ ಕಾರ್ಯದರ್ಶಿ ಶಿವಾನಂದಪ್ಪ, ಜಿಲ್ಲಾ ಉಪಾಧ್ಯಕ್ಷ ಸುನೀಲ್‌ಕುಮಾರ್, ಖಜಾಂಚಿ ಸತೀಶ್, ಕೃಷ್ಣಮೂರ್ತಿ, ಮಂಜುನಾಥ್, ನಾಗರಾಜ್, ಶ್ರೀನಿವಾಸ್, ಕೃಷ್ಣಮೂರ್ತಿ, ಭರತ್‌ನಾಯ್ಕ, ವಿವೇಕ್, ಮುರಗೇಶ್, ಇಂಜಿನಿಯರ್‌ಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Sports event as part of Civil Workers’ Day celebrations

About Author

Leave a Reply

Your email address will not be published. Required fields are marked *