September 20, 2024

ಪೌರಕಾರ್ಮಿಕರಿಗೆ ಆಯೋಜಿಸಲಾಗಿದ್ದ ತ್ಯಾಜ್ಯ ವಿಂಗಡಣೆ ಮಾಹಿತಿ ಕಾರ್ಯಾಗಾರ

0
ಪೌರಕಾರ್ಮಿಕರಿಗೆ ಆಯೋಜಿಸಲಾಗಿದ್ದ ತ್ಯಾಜ್ಯ ವಿಂಗಡಣೆ ಮಾಹಿತಿ ಕಾರ್ಯಾಗಾರ

ಪೌರಕಾರ್ಮಿಕರಿಗೆ ಆಯೋಜಿಸಲಾಗಿದ್ದ ತ್ಯಾಜ್ಯ ವಿಂಗಡಣೆ ಮಾಹಿತಿ ಕಾರ್ಯಾಗಾರ

ಚಿಕ್ಕಮಗಳೂರು: ಮನೆಯಲ್ಲಿಯೇ ಕಸವನ್ನು ವಿಂಗಡಿಸಿ ತೆಗೆದುಕೊಳ್ಳಬೇಕೆಂದು ಕಸದ ಗಾಡಿಯವರಿಗೆ ಸ್ವಚ್ಚಟ್ರಸ್ಟ್ ರಾಯಬಾರಿಯಾಗಿರುವ ಶುಭಾವಿಜಯ್ ಕರೆ ನೀಡಿದರು.

ಅವರು ಇಂದು ಪೌರಾಡಳಿತ ನಿರ್ದೇಶನಾಲಯ, ನಗರಸಭೆ ಇವರ ವತಿಯಿಂದ ಪೌರಕಾರ್ಮಿಕರಿಗೆ ಆಯೋಜಿಸಲಾಗಿದ್ದ ತ್ಯಾಜ್ಯ ವಿಂಗಡಣೆ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಹಸಿಕಸ ಮತ್ತು ಒಣಕಸವನ್ನು ಮನೆಯಲ್ಲಿಯೇ ಪ್ರತ್ಯೇಕಿಸಿ ನಗರಸಭೆಯಿಂದ ಬರುವ ಕಸದ ಗಾಡಿಯವರು ತೆಗೆದುಕೊಳ್ಳಬೇಕು ನಂತರ ಹಸಿಕಸವನ್ನು ಕರಗಿಸಿ ಕಾಂಪೋಸ್ಟ್ ಗೊಬ್ಬರ ತಯಾರಿಸಬಹುದಾಗಿದೆ ಎಂದರು.
ಕರಗದೆ ಇರುವ ಕಸವನ್ನು ಪುನರ್ ಬಳಕೆ ಮಾಡಬಹುದಾಗಿದೆ ಇದರಿಂದ ನಗರಸಭೆ ಸಿಬ್ಬಂದಿ ಪೌರಕಾರ್ಮಿಕರಿಗೆ ಕೆಲಸ ಸುಗಮವಾಗುವುದರ ಜೊತೆಗೆ ಸ್ವಚ್ಚ ಸುಂದರ ನಗರವಾಗುತ್ತದೆ, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.

ನಗರಸಭೆ ಸಹಯೋಗವಿಲ್ಲದೆ ಈ ಕಾರ್ಯಸಾಧ್ಯವಿಲ್ಲ, ಸ್ವಚ್ಛಟ್ರಸ್ಟ್ ರಾಯಭಾರಿಯಾಗಿರುವುದಕ್ಕೆ ಸಂತೋ?ವಾಗಿದೆ ಸ್ವಚ್ಚಟ್ರಸ್ಟ್ ವತಿಯಿಂದ ಇನ್ನೂ ಹೆಚ್ಚು ಅರಿವು ಮೂಡಿಸಿ ಜಾಗೃತಿ ಮೂಡಿಸುವುದಾಗಿ ಹೇಳಿದರು.

ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ನಗರದಲ್ಲಿ ಸಂಗ್ರಹವಾಗುವ ಕಸವನ್ನು ವಿಂಗಡಣೆ ಮಾಡಿ ನೀಡುವಂತೆ ನಗರದ ನಾಗರೀಕರಲ್ಲಿ ಮನವಿ ಮಾಡಿದ ಅವರು ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ ಎಂದರು.

ಯಂತ್ರದ ಮೂಲಕ ಘನತ್ಯಾಜ್ಯವನ್ನು ವಿಂಗಡಿಸುವ ಕಾರ್ಯ ನಡೆಯುತ್ತಿದೆ ಆದ್ದರಿಂದ ಹಸಿ ಕಸವನ್ನು ಮನೆಯಲ್ಲಿಯೇ ಪ್ರತ್ಯೇಕಿಸಿ ಕೊಡುವುದರಿಂದ ಒತ್ತಡ ಕಡಿಮೆಯಾಗಿ ಸಾವಯುವ ಗೊಬ್ಬರ ತಯಾರಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಪೌರಾಯುಕ್ತ ಬಸವರಾಜ್ ಮಾತನಾಡಿ ನಗರದ ಪ್ರತಿ ವಾರ್ಡ್‌ನಲ್ಲಿಯೇ ಒಣಕಸ-ಹಸಿಕಸ ವಿಂಗಡಿಸಿ ವಿತರಿಸುವ ಕಾರ್ಯಕ್ಕೆ ನಗರಸಭೆ ಸಿಬ್ಬಂದಿ ಪೌರ ನೌಕರರು ಮುಂದಾಗಬೇಕು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ನಗರ ಸ್ವಚ್ಚತೆಯಲ್ಲಿ ಮನಮುಟ್ಟುವಂತಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸ್ವಚ್ಚಟ್ರಸ್ಟ್ ರಾಯಭಾರಿಯಾಗಿ ಆಯ್ಕೆಯಾಗಿರುವ ಚಲನಚಿತ್ರ ನಟ ರಘುನಂದನ್, ಡಾ|| ಶುಭಾವಿಜಯ್ ಅವರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಸ್ವಚ್ಚಟ್ರಸ್ಟ್‌ನ ಡಾ|| ಗೀತಾವೆಂಕಟೇಶ್, ನಗರಸಭೆ ಉಪಾಧ್ಯಕ್ಷ ಅಮೃತೇಶ್ ಮತ್ತಿತರರಿದ್ದರು.

Waste Segregation Information Workshop

About Author

Leave a Reply

Your email address will not be published. Required fields are marked *