September 20, 2024

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 6.06 ಕೋಟಿ ನಿವ್ವಳ ಲಾಭ 

0
ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್ ಸುರೇಶ್ ಪತ್ರಿಕಾಗೋಷ್ಠಿ

ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್ ಸುರೇಶ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರಸ್ತುತ ವ? ೬.೦೬ ಕೋಟಿ ನಿವ್ವಳ ಲಾಭ ಗಳಿಸಿದ್ದು, ಮುಂದಿನ ವ?ಕ್ಕೆ ೧ ಸಾವಿರ ಕೋಟಿ ರೂ ಸಾಲಸೌಲಭ್ಯ ನೀಡುವ ಗುರಿ ಹೊಂದಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್ ಸುರೇಶ್ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಬಗ್ಗೆ ಮಾಹಿತಿ ನೀಡಿದ ಅವರು ನಾಳೆ (ಸೆ.೨೨) ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಸರ್ವ ಸದಸ್ಯರ ಸಭೆ ಕರೆದಿದ್ದು ಬ್ಯಾಂಕಿನ ವ್ಯವಹಾರಗಳ ಕುರಿತು ಎಲ್ಲಾ ಸದಸ್ಯರು ಅನುಮೋದನೆ ಪಡೆಯಲಾಗುವುದೆಂದು ಹೇಳಿದರು.

೧೯೫೫ ರಲ್ಲಿ ಆರಂಭಗೊಂಡಿದ್ದ ಬ್ಯಾಂಕ್ ೨೮ ಶಾಖೆಗಳನ್ನು ಹೊಂದಿದ್ದು, ವಿವಿಧ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಪ್ರಸಕ್ತ ೨೦೨೨-೨೩ನೇ ಸಾಲಿನ ಅಂತ್ಯಕ್ಕೆ ೬೩.೫೧ ಕೋಟಿ ರೂ ?ರು ಬಂಡವಾಳ ಹೊಂದಿದ್ದು, ೨೦೯೫೨೮ ಠೇವಣಿದಾರರ ಮೂಲಕ ೧೨೭೬.೮೬ ಕೋಟಿ ರೂ ಠೇವಣಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಸಾಲಿಗೆ ಶೂನ್ಯ ಬಡ್ಡಿ ದರದಲ್ಲಿ ೫೬೮೧೫ ರೈತರಿಗೆ ೯೮೦ ಕೋಟಿ ಬೆಳೆಸಾಲ ವಿತರಿಸಲಾಗಿದ್ದು, ಮುಂದಿನ ವ?ಕ್ಕೆ ಸಾವಿರ ಕೋಟಿ ಬೆಳೆಸಾಲ ನೀಡಲು ಗುರಿ ಹೊಂದಲಾಗಿದೆ ಎಂದು ಹೇಳಿದರು.

ಇದೇ ಅವಧಿಯಲ್ಲಿ ಶೇ ೩ ರ ಬಡ್ಡಿ ದರದಲ್ಲಿ ೪೨೮ ರೈತರಿಗೆ ೨೯ ಕೋಟಿ ಕೃಷಿ ಮಧ್ಯಮಾವಧಿ ಸಾಲ ನೀಡಲು ಗುರಿ ಹೊಂದಿದ್ದು, ೧೩.೨೧ ಕೋಟಿ ಸಾಲ ವಿತರಿಸಲಾಗಿದೆ. ಇದೇ ಅವಧಿಯಲ್ಲಿ ೧೬೧೩೧ ಸದಸ್ಯರಿಗೆ ೩೪೮.೨೫ ಕೋಟಿ ರೂ ಕೃಷಿಯೇತರ ಸಾಲ ವಿತರಣೆ ಮಾಡಿದ್ದು, ಇನ್ನೂ ೩೩೦ ಕೋಟಿ ಕೃಷಿಯೇತರ ಸಾಲ ನೀಡಲು ಗುರಿ ಹೊಂದಲಾಗಿದೆ ಎಂದರು.

ಬ್ಯಾಂಕಿನಲ್ಲಿ ಮಾರ್ಚ್ ಅಂತ್ಯದವರೆಗೆ ಒಟ್ಟು ೧೩೬೫೬ ಸ್ವಸಹಾಯ ಗುಂಪುಗಳಿದ್ದು, ೨೦೨೨-೨೩ ನೇ ಸಾಲಿನಲ್ಲಿ ೧೧೮ ಹೊಸ ಗುಂಪುಗಳನ್ನು ರಚಿಸಲಾಗಿದೆ. ಎನ್.ಆರ್.ಎಲ್.ಎಂ ಯೋಜನೆಯಲ್ಲಿ ೮೩ ಸ್ವಸಹಾಯ ಗುಂಪುಗಳಿಗೆ ೧.೯೧ ಕೋಟಿ ಸಾಲ ನೀಡುವ ಮೂಲಕ ಜಿಲ್ಲೆಯ ಬಡ ಮತ್ತು ಹಿಂದುಳಿದ ವರ್ಗಗಳ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬಹು ಸೇವಾ ಯೋಜನೆಯ ಮೂಲಕ ೪೩ ಸಂಘಗಳಿಗೆ ೧೫.೮೭ ಕೋಟಿ ರೂ ಗೋದಾಮು ನಿರ್ಮಾಣಕ್ಕೆ ಸಾಲ ನೀಡಲಾಗಿದೆ. ಬ್ಯಾಂಕಿನ ಸಿಬ್ಬಂದಿಯ ಹಾಗೂ ರೈತರ ಸಹಕಾರದಿಂದ ಶೇ ೯೮ ರ? ಪ್ರಮಾಣದ ಸಾಲ ವಸೂಲಾಗಿದ್ದು ಶೇ ೬.೩೪ ರಷ್ಟಿದ್ದ ಎನ್‌ಪಿಎ ಪ್ರಮಾಣ ಶೇ ೩.೧೮ ಕ್ಕೆ ಇಳಿದಿದೆ ಎಂದರು.

ಬ್ಯಾಂಕಿನ ವಹಿವಾಟಿನಲ್ಲಿ ಒಟ್ಟು ೧೮ ಕೋಟಿ ಲಾಭಗಳಿಸಿದ್ದು, ಸಹಕಾರ ಸಂಘಗಳಿಗೆ ಪೀಠೋಪಕರಣ ಇತ್ಯಾದಿ ಅಭಿವೃದ್ಧಿಗೆ ೧.೫೦ ಕೋಟಿ ರೂ ಕಾಯ್ದಿರಿಸಲಾಗಿದ್ದು ಅದನ್ನು ಕಳೆದು ೬.೬ ಕೋಟಿ ರೂ ನಿವ್ವಳ ಲಾಭ ಘೋ?ಣೆ ಮಾಡಲಾಗಿದೆ ಎಂದು ತಿಳಿಸಿದರು.

ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಬ್ಯಾಂಕಿನ ಸೇವೆಯನ್ನು ಉನ್ನತೀಕರಣಗೊಳಿಸಿದ್ದು, ಮೈಕ್ರೋ ಎಟಿಎಂ, ಐಎಂಪಿಎಸ್ ಮತ್ತು ಯುಪಿಐಎನ್ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಬ್ಯಾಂಕಿನ ಪ್ರಗತಿಗೆ ರೈತರು, ಠೇವಣಿದಾರರು, ಸಿಬ್ಬಂದಿಯವರು ಹಾಗೂ ಎಲ್ಲಾ ಗ್ರಾಹಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಬಡ್ಡಿ ರಿಯಾಯಿತಿ ಹಾಗೂ ಇತರ ಯೋಜನೆಗಳಲ್ಲಿ ಸರ್ಕಾರದಿಂದ ಇರುವ ಬಾಕಿ ಬಗ್ಗೆ ಪ್ರಶ್ನಿಸಿದಾಗ ೧೪ ಕೋಟಿ ರೂ ಬಾಕಿ ಇರುವುದಾಗಿ ಬ್ಯಾಂಕಿನ ವ್ಯವಸ್ಥಾಪಕ ತಿಮ್ಮಪ್ಪ ಸ್ಪ?ಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ಆರ್ ಆನಂದಪ್ಪ, ಉಪಾಧ್ಯಕ್ಷ ಸಿ.ಎಲ್ ರಮೇಶ್, ನಿರ್ದೇಶಕರುಗಳಾದ ಪರಮೇಶ್ವರಪ್ಪ, ರಾಮಪ್ಪ ಉಪಸ್ಥಿತರಿದ್ದರು

District Central Cooperative Bank

About Author

Leave a Reply

Your email address will not be published. Required fields are marked *