September 20, 2024

ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ವ್ಯವಸ್ಥಾಪನಾ ಸಮಿತಿ ರದ್ದತಿಗೆ ಮನವಿ

0
ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಚಿಕ್ಕಮಗಳೂರು: ನಿಯಮ ಬಾಹಿರವಾಗಿ ರಚಿಸಿರುವ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ವ್ಯವಸ್ಥಾಪನಾ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸುವಂತೆ ಮುಸ್ಲಿಂ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಮುಸ್ಲಿಂ ಸಂಘಟನೆಗಳ ಒಕ್ಕೂಟ ಮುಖಂಡರಾದ ಕೆ.ಮಹಮದ್ ಮನವಿ ನೀಡಿ ಮಾತನಾಡಿ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಪ್ರತಿ ವ? ನಡೆಯುವ ಉರುಸ್ ಮತ್ತು ದತ್ತ ಜಯಂತಿ ಕಾರ್ಯಕ್ರಮಗಳನ್ನು ಎರಡು ಪ್ರತ್ಯೇಕ ಸಮಿತಿಗಳ ನೇತೃತ್ವದಲ್ಲಿ ನೆರವೇರಿಸುತ್ತ ಬರುತ್ತಿತ್ತು. ಆದರೆ ಈ ವ? ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದ್ದು ಸದರಿ ಸಮಿತಿಯನ್ನು ರಚಿಸುವಾಗ ಎರಡು ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎರಡು ಸಮುದಾಯಕ್ಕೆ ಸಮಾನವಾದ ಪ್ರಾತಿನಿಧ್ಯವನ್ನು ನೀಡದೆ ಒಂದೇ ಸಮುದಾಯಕ್ಕೆ ಪ್ರಾಮುಖ್ಯತೆ ನೀಡಿ ರಚಿಸಲ್ಪಟ್ಟಿದೆ ಎಂದಿದ್ದಾರೆ.

ಇದನ್ನು ವಿರೋಧಿಸಿ ಕಳೆದ ಫೆಬ್ರವರಿ ೨೧ ರಂದು ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿಯನ್ನು ಸಲ್ಲಿಸಿದ್ದು ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಹಾಗೂ ನಿಯಮಗಳಿಗೆ ಅನುಸಾರ ಎರಡು ಸಮುದಾಯದವರನ್ನು ಸೇರಿಸಿಕೊಂಡು ಸಮಿತಿ ರಚಿಸದೆ ಅದೇ ಸಮಿತಿಯನ್ನು ಮುಂದುವರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಸಮಿತಿ ಅಡಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಒಂದೇ ಕೋಮಿನ ಕಾರ್ಯಕ್ರಮಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿ ಮತ್ತೊಂದು ಕೋಮಿನ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಲಾಗುತ್ತಿದೆ, ಇದರಿಂದ ಭಕ್ತಾಧಿಗಳ ಮನಸ್ಸಿಗೆ ನೋವು ಉಂಟಾಗುತ್ತಿದೆ ಎಂದು ವಿ?ಧಿಸಿದ್ದಾರೆ.

ಅತಿ ಶೀಘ್ರದಲ್ಲಿ ಈಗಿರುವ ವ್ಯವಸ್ಥಾಪನಾ ಸಮಿತಿಯನ್ನು ವಿಸರ್ಜಿಸಿ ಉಭಯ ಸಮಾಜದವರಿಗೂ ಸಮಾನವಾದ ಪ್ರ್ರಾತಿನಿಧ್ಯವನ್ನು ಕಲ್ಪಿಸಿ, ಹೊಸ ಸಮಿತಿಯನ್ನು ರಚಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಿ.ಎಸ್ ಖಲಂದರ್, ನಜೀರ್ ಅಹಮದ್, ಸೈಯದ್ ಅನೀಫ್, ಸಿರಾಜ್ ಹುಸೇನ್, ಶಾದಬ್ ಅಲಂ ಖಾನ್ ಮತ್ತಿತರರಿದ್ದರು.

Management Committee of Guru Dattatreya Bababudan Swami Dargah

About Author

Leave a Reply

Your email address will not be published. Required fields are marked *