September 20, 2024

ಡಿ.ಸಿ.ಸಿ ಬ್ಯಾಂಕ್ ಆಧುನಿಕ ವ್ಯವಸ್ಥೆಯೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ

0
ಡಿಸಿಸಿ ಬ್ಯಾಂಕ್ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ಸಭೆ

ಡಿಸಿಸಿ ಬ್ಯಾಂಕ್ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ಸಭೆ

ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಡಿಜಿಟಲ್ ವ್ಯವಹಾರದಲ್ಲಿ ತೊಡಗಿಸಿಕೊಂಡು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜೊತೆಗೆ ಎ.ಟಿ.ಎಂ ಮೊಬೈಲ್ ಬ್ಯಾಂಕಿಂಗ್ ನಂತಹ ನೂತನ ತಂತ್ರಾಂಶಗಳ ಸೇವೆಯನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಕಾರ್ಪೊರೇಟ್ ಬ್ಯಾಂಕಗಳಿಗೆ ಸವಾಲೊಡ್ಡಿ ಹೆಜ್ಜೆ ಇಡುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಡಿ.ಎಸ್ ಸುರೇಶ್ ತಿಳಿಸಿದರು.

ಅವರು ಇಂದು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಡಿಸಿಸಿ ಬ್ಯಾಂಕ್ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸಕ್ತ ವ?ದಿಂದಲೇ ಮೈಕ್ರೋ ಎ.ಟಿ.ಎಂ ಜಾರಿಗೊಳಿಸಲಾಗಿದೆ ಮುಂದಿನ ದಿನಗಳಲ್ಲಿ ಮತ್ತ? ಹೊಸ ಶಾಖೆಗಳನ್ನು ತೆರೆಯಲು ಗುರಿ ಹೊಂದಲಾಗಿದ್ದು ಅಲ್ಲದೆ ವ?ಂತ್ಯಕ್ಕೆ ೯೭೦ ಕೋಟಿ ರೂ. ಕೃಷಿ ಸಾಲ ೩೩೦ ಕೋಟಿ ಕೃಷಿಯೇತರ ಸಾಲ ವಿತರಿಸಲು ಯೋಜನೆ ರೂಪಿಸಿಲಾಗಿದೆ ಎಂದು ತಿಳಿಸಿದರು.

ಬ್ಯಾಂಕು ೧೯೫೫ರಲ್ಲಿ ಹಿರಿಯ ಪ್ರಾಮಾಣಿಕ ಸಹಕಾರಿಗಳ ಸಹಕಾರದಿಂದ ಕೆಲವೇ ಶಾಖೆಗಳಿಂದ ಆರಂಭಗೊಂಡು ಅಂದಿನಿಂದ ಇಂದಿನವರೆಗೆ ಅವರುಗಳ ಪ್ರಾಮಾಣಿಕ ಹಾಗೂ ಅಚಲ ಸೇವೆಗಳಿಂದ ಸಿಬ್ಬಂದಿಗಳ ನಿರಂತರ ಶ್ರಮದಿಂದ ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನದಿಂದ ರೈತ ಬಾಂಧವರ ಪ್ರಾಮಾಣಿಕ ಮರುಪಾವತಿಯಿಂದ ಬ್ಯಾಂಕು ನಿಯಮಿತವಾಗಿ ಲಾಭ ಗಳಿಸುತ್ತಲೇ ಬಂದಿದೆ. ಅಂದಿನ ದಿನಗಳಲ್ಲಿ ಕೆಲವೇ ರೂಪಾಯಿಗಳಲ್ಲಿ ಆರಂಭಗೊಂಡ ವ್ಯವಹಾರ ಇಂದು ಎರಡು ಸಾವಿರ ಕೋಟಿಗಳಿಗೂ ಅಧಿಕ ವ್ಯವಹಾರಕ್ಕೆ ಬಂದು ನಿಂತಿರುವುದು ನಿಮ್ಮೆಲ್ಲರ ಸಹಕಾರದಿಂದಲೇ ಎಂದು ಶ್ಲಾಘಿಸಿದರು.

ಅಂದಿನ ದಿನಗಳಲ್ಲಿ ಕೇವಲ ನಿಬಂಧಕರ ನೋಂದಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬ್ಯಾಂಕು ಇಂದು ರಿಸರ್ವ್ ಬ್ಯಾಂಕ್ ಪರವಾನಗಿ ಹೊಂದಿ ಅದರ ನಿಯಮಗಳಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಈ ವ?ದಲ್ಲಿ ಅಪೆಕ್ಸ್ ಬ್ಯಾಂಕ್ ಮತ್ತು ನಬಾರ್ಡ್ ಸಹಯೋಗದೊಂದಿಗೆ ೨೮ ಶಾಖೆ ಮತ್ತು ಪ್ರ್ರಾಥಮಿಕ ಸಹಕಾರ ಸಂಘಗಳ ಮುಖೇನ ರೈತರಿಗೆ ೮೯೮ ಕೋಟಿಗೂ ಹೆಚ್ಚು ಕೃಷಿ ಸಾಲವನ್ನು ಬ್ಯಾಂಕಿನ ಶಾಖೆಗಳ ಮೂಲಕ ೩೪೮ ಕೋಟಿ ಕೃಷಿಯೇತರ ಸಾಲವನ್ನು ಹೀಗೆ ಒಟ್ಟು ೧೨೪೬ ಕೋಟಿ ಸಾಲ ವಿತರಿಸಿ ೧೪೦೬.೬೯ ಕೋಟಿ ಹೊರಬಾಕಿ ಆಗಿದೆ ಎಂದು ಹೇಳಿದರು.

ಅಲ್ಲದೆ ೨ ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಬ್ಯಾಂಕು ಹೊಂದಿದ್ದು ೧೨೭೬ ಕೋಟಿಗೂ ಹೆಚ್ಚು ಠೇವಣಿಯನ್ನು ಹೊಂದಿದೆ ಶೇ.೯೮ ಸಾಲ ವಸೂಲಾತಿಯನ್ನು ಮಾಡಿ ಪ್ರತೀ ವ? ಲಾಭಗಳಿಸುತ್ತಲೇ ಬಂದಿದೆ. ಪ್ರಸ್ತುತ ಸಾಲಿನಲ್ಲಿ ೧೮ ಕೋಟಿ ಲಾಭಗಳಿಸಿದ್ದು ರೂ.೬.೦೬ ಕೋಟಿ ಲಾಭ ಘೋ?ಣೆಯಾಗಿ ಗಳಿಕೆಯಾಗಿರುತ್ತದೆ ಎಂದು ವಿವರಿಸಿದರು.

ಈ ಆಡಳಿತ ಮಂಡಳಿ ಬಂದ ನಂತರ ಸಮಾಜದ ಕನಿ? ವ್ಯಕ್ತಿಗೂ ಸೌಲಭ್ಯ ಸಿಗುವ ಹಾಗೆ ತಾರತಮ್ಯ ತೋರದೆ ರೂ.೯೧ ಕೋಟಿ ಹೊಸ ಸಾಲವನ್ನು ನೀಡಿದ್ದು ೨೦೧೯-೨೦ ರಲ್ಲಿ ಶೇ. ೬.೩೪ ಇದ್ದ ಎನ್ ಪಿ ಎ ಪ್ರಮಾಣ ೨೦೨೨-೨೩ ರಲ್ಲಿ ಶೇ.೩.೧೬ ರಷ್ಟಿರುತ್ತದೆ. ಶಾಸನ ಬದ್ಧ ಲೆಕ್ಕ ಪರಿಶೋಧನೆ ಹಾಗೂ ನಬಾರ್ಡ್ ನಡೆಸಿದ ತಪಾಸಣೆಯಲ್ಲಿ ಬ್ಯಾಂಕು ಸತತವಾಗಿ ಎ ವರ್ಗೀಕೃತ ಶ್ರೇಣಿಯನ್ನು ಪಡೆದಿದೆ ಎಂಬ ಅಂಶವನ್ನು ತಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತೇನೆ ಎಂದರು.

ನಿಮ್ಮೆಲ್ಲರ ಹಾರೈಕೆಗಳಿಂದ ಭವ್ಯವಾದ ಆಡಳಿತ ಕಟ್ಟಡವನ್ನು ನಿರ್ಮಿಸಲು ತೀರ್ಮಾನಿಸಿ ಕೆಲಸ ಪ್ರಾರಂಭಿಸಿದ್ದು ಕೆಲಸ ಪ್ರಗತಿಯಲ್ಲಿದೆ ಕೆಲವೇ ತಿಂಗಳುಗಳಲ್ಲಿ ಸಾರ್ವಜನಿಕ ಸೇವೆಗೆ ಸಮರ್ಪಣೆಗೊಳ್ಳಲಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಜಾರಿಗೊಳಿಸಿದ ಎಲ್ಲ ಯೋಜನೆಗಳನ್ನು ಜಾರಿಗೊಳಿಸಿ ಜಿಲ್ಲೆಯ ಎಲ್ಲಾ ರೈತರನ್ನು ಮುಟ್ಟುವ ಪ್ರಯತ್ನ ಮಾಡಲಾಗಿದ್ದು ಇಂದಿನ ಬ್ಯಾಂಕಿನ ಏಳಿಗೆಗೆ ಕಾರಣರಾದಂತಹ ನಿಮ್ಮಂತಹ ಸಹಕಾರಿಗಳ ಸಹಕಾರವನ್ನು ಮುಂದೆಯೂ ಕೋರುತ್ತ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಅಗತ್ಯ ಸಹಕಾರ ನೀಡಿದ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರುಗಳನ್ನು ನಬಾರ್ಡ್ ಅಧಿಕಾರಿಗಳನ್ನು ಅಪೆಕ್ಸ್ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನು ಸಹಕಾರ ಇಲಾಖೆಯ ಅಧಿಕಾರಿಗಳನ್ನು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಅಧಿಕಾರಿಗಳನ್ನು ಆಂತರಿಕ ಲೆಕ್ಕ ಪರಿಶೋಧನ ಕಾರ್ಯಗಳನ್ನು ಬ್ಯಾಂಕಿನ ಶಾಸನಬದ್ಧ ಲೆಕ್ಕಪರಿಶೋಧನ ಅಧಿಕಾರಿಗಳನ್ನು ಬ್ಯಾಂಕಿನ ಸಿಬ್ಬಂದಿ ವರ್ಗದವರನ್ನು ಹಾಗೂ ತಮ್ಮೆಲ್ಲರನ್ನು ಈ ಮೂಲಕ ಅಭಿನಂದಿಸುತ್ತಾ ಇದೇ ರೀತಿ ನಿಮ್ಮೆಲ್ಲರ ಸಹಕಾರ ಮುಂದೆಯೂ ಇರಲಿ ಎಂದು ಮನವಿ ಮಾಡಿದರು.

ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಟಿ.ಎಲ್ ರಮೇಶ್ ಸ್ವಾಗತಿಸಿದರು ವೇದಿಕೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರುಗಳಾದ ಕೆ.ಆರ್ ಆನಂದಪ್ಪ, ಎಚ್.ಬಿ ಶಿವಣ್ಣ, ಎಸ್.ಬಿ ರಾಮಪ್ಪ, ಡಿ.ಸಿ ಶಂಕ್ರಪ್ಪ, ಸಂದೀಪ್ ಕುಮಾರ್, ಎಂ.ಪರಮೇಶ್ವರಪ್ಪ, ಗಿರೀಶ್‌ಚೌಹಾಣ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಪ್ರಭಾರ)ಜಿ ತಿಮ್ಮಪ್ಪ ಉಪಸ್ಥಿತರಿದ್ದರು.

DCC Bank All Members Meeting

About Author

Leave a Reply

Your email address will not be published. Required fields are marked *