September 20, 2024

ಜಾತ್ಯತೀತ ಸಿದ್ದಾಂತ ಒಪ್ಪಿ ಬರುವ ಜೆಡಿಎಸ್ ಮುಖಂಡರು ಕಾರ್ಯಕರ್ತರಿಗೆ ಕಾಂಗ್ರೆಸ್ ಬಾಗಿಲು ತೆರೆದಿದೆ

0
ಕೆಪಿಸಿಸಿ ವಕ್ತಾರ ಹೆಚ್.ಹೆಚ್ ದೇವರಾಜ್ ಪತ್ರಿಕಾಗೋಷ್ಠಿ

ಕೆಪಿಸಿಸಿ ವಕ್ತಾರ ಹೆಚ್.ಹೆಚ್ ದೇವರಾಜ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಜಾತ್ಯಾತೀತ ಸಿದ್ದಾಂತದ ಸಮಾಜವಾದ ಪರಿಕಲ್ಪನೆಯಲ್ಲಿ ಹುಟ್ಟಿ ಬಂದ ಜೆಡಿಎಸ್ ಪಕ್ಷವು ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸಲು ಹೊರಟಿರುವುದು ದುರ್ದೈವದ ಸಂಗತಿಯಾಗಿದೆ ಜಾತ್ಯಾತೀತ ಸಿದ್ದಾಂತವನ್ನು ಒಪ್ಪಿಕೊಂಡಿರುವವರು ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ಪಕ್ಷದ ಬಾಗಿಲು ತೆರೆದಿದ್ದು ಪಕ್ಷಕ್ಕೆ ಸೇರ್ಪಡೆಮಾಡಿಕೊಳ್ಳಲಾಗುವುದೆಂದು ಕೆಪಿಸಿಸಿ ವಕ್ತಾರ ಹೆಚ್.ಹೆಚ್ ದೇವರಾಜ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು ಜೆಡಿಎಸ್ ನವರು ಬಿಜೆಪಿ ಜೊತೆಗೆ ಹೊರಟಿರುವುದು ವಿ?ಧದಸಂಗತಿ ಜಯಪ್ರಕಾಶ್‌ನಾರಾಯಣರವರ ನೇತೃತ್ವದಲ್ಲಿ ಸಮಾಜವಾದ ಸಿದ್ಧಾಂತದೊಂದಿಗೆ ಸ್ಥಾಪನೆ ಗೊಂಡ ಪಕ್ಷವು ಈಗ ರಾಜಕೀಯ ಉದ್ದೇಶದಿಂದ ಕೋಮುವಾದಿ ಪಕ್ಷದೊಂದಿಗೆ ಹೋಗುತ್ತಿರುವುದು ಈ ರಾಜ್ಯದ ದುರಂತ ಎಂದು ಆರೋಪಿಸಿದರು.

ಜಾತ್ಯಾತೀತ ಜನತಾದಳದಲ್ಲಿ ಅನೇಕ ನಾಯಕರು ಕಾರ್ಯಕರ್ತರು ಪ್ರಗತಿ ಪರ ನಿಲುವಿನ ಜಾತ್ಯಾತೀತ ಸಿದ್ದಾಂತ ಹೊಂದಿದವರಿದ್ದಾರೆ ಅಂತಹ ಅನೇಕ ಮುಖಂಡರುಗಳು ಕಾರ್ಯಕರ್ತರಿಗೆ ಜೆಡಿಎಸ್ ನಲ್ಲಿ ಮುಂದುವರೆಯುವುದು ಇ?ವಿಲ್ಲದೆ ಇರಿಸುಮುರಿಸಿನಲ್ಲಿದ್ದಾರೆ ಅಂತಹ ನಾಯಕರುಗಳಿಗೆ ಕಾಂಗ್ರೆಸ್ ಪಕ್ಷದ ಬಾಗಿಲು ತೆರೆದಿದೆ ಜಾತ್ಯಾತೀತ ನಿಲುವಿನೊಂದಿಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವವರಿಗೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದೆಂದು ಆಹ್ವಾನ ನೀಡಿದರು.

ಈಗ ಜೆಡಿಎಸ್ ತೆಗೆದುಕೊಂಡಿರುವ ನಿರ್ಧಾರದಿಂದ ಎಲ್ಲಾ ಮುಖವಾಡ ಕಳಚಿ ಕೋಮುವಾದಿ ಶಕ್ತಿಗಳೊಂದಿಗೆ ಸೇರಿರುವುದು ಜೆಡಿಎಸ್ ಬಿಜೆಪಿಯ ಪ್ರೀತಿ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರುಗಳ ಹೇಳಿಕೆ ನಿಜವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಬಾಬಾಬುಡನ್ ಗಿರಿ, ದತ್ತಪೀಠ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈಗ ಬಿಜೆಪಿ ಜೊತೆ ಸೇರಿ ಚುನಾವಣೆ ಎದುರಿಸುವುದು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿರುವಂತೆಯೇ ಇಡೀ ರಾಜ್ಯದ ಸ್ಥಿತಿ ಇದು, ರಾಜಕೀಯ ಒತ್ತಾಸೆಗಾಗಿ ಮಾಡಿಕೊಂಡಿರುವ ಹೊಂದಾಣಿಕೆಯಿಂದ ಬಹುಪಾಲು ಕಾರ್ಯಕರ್ತರಿಗೆ ಬೇಸರವಾಗಿದೆ ಎಂದು ಹೇಳಿದರು.

ಹಿಂದುತ್ವವಾದಿ ಚೈತ್ರ ಕುಂದಾಪುರ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ದೇವರಾಜ್ ಈ ಹಗರಣದಲ್ಲಿ ಅನೇಕ ಬಿಜೆಪಿ ನಾಯಕರುಗಳು ಭಾಗಿಯಾಗಿದ್ದಾರೆ ಚೈತ್ರ ಒಬ್ಬಳೇ ಈ ಪ್ರಕರಣದ ಆರೋಪಿಯಲ್ಲ ಅನೇಕ ನಾಯಕರ ಪಾತ್ರವಿದ್ದು ಸಮಗ್ರವಾಗಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಇತ್ತೀಚೆಗೆ ಶಾಸಕ ಎಚ್.ಡಿ ತಮ್ಮಯ್ಯ ಅವರು ನೈರುತ್ಯ ಶಿಕ್ಷಕರ ವಿಧಾನ ಪರಿ?ತ್ ಚುನಾವಣೆಯಲ್ಲಿ ಎಸ್ ಎಲ್ ಭೋಜೇಗೌಡರನ್ನು ಬೆಂಬಲಿಸುವಂತೆ ಹೇಳಿಕೆ ನೀಡಿದ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು ವಿಧಾನ ಪರಿ?ತ್ ಅಥವಾ ಯಾವುದೇ ಚುನಾವಣೆಯಲ್ಲಿ ಶಾಸಕರ ಅಭಿಪ್ರಾಯ ಅಂತಿಮವಲ್ಲ ಪಕ್ಷದಲ್ಲಿ ತನ್ನದೇ ಆದ ವ್ಯವಸ್ಥೆ ಇರುತ್ತದೆ ಪಕ್ಷದ ನಿರ್ಣಯವೇ ಅಂತಿಮ ತೀರ್ಮಾನವಾಗುತ್ತದೆ ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೋಜೇಗೌಡರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವಾಗಲಿ ಅಥವಾ ಯಾವುದೇ ಮುಖಂಡರುಗಳಾಗಲಿ, ಬೋಜೇಗೌಡರ ಬೆಂಬಲ ಕೇಳಿರಲಿಲ್ಲ ಬೋಜೇಗೌಡರೇ ಸ್ವಯಂ ಘೋ?ಣೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು ಎಂದು ಸ್ಪಷ್ಠಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಡಿ ರಮೇಶ್ ಕೆ.ಪಿಸಿ.ಸಿ. ಸಂಯೋಜಕ ಹಿರೇಮಗಳೂರು ರಾಮಚಂದ್ರ, ಮುಖಂಡರಾದ ಪ್ರಕಾಶ್, ಶಾಂತ್‌ಕುಮಾರ್ ಇದ್ದರು.

JD(S) leaders have opened the doors of Congress for workers

 

About Author

Leave a Reply

Your email address will not be published. Required fields are marked *