September 20, 2024

ಪದವೀಧರರ ಪತ್ತಿನ ಸಹಕಾರ ಸಂಘಕ್ಕೆ 13 ಲಕ್ಷ ರೂ. ನಿವ್ವಳ ಲಾಭ

0
ಪದವೀಧರರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ೨೦೨೨-೨೩ನೇ ಸಾಲಿನ ಸರ್ವಸದಸ್ಯರ ಸಭೆ

ಪದವೀಧರರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ೨೦೨೨-೨೩ನೇ ಸಾಲಿನ ಸರ್ವಸದಸ್ಯರ ಸಭೆ

ಚಿಕ್ಕಮಗಳೂರು: ಪದವೀಧರರ ಪತ್ತಿನ ಸಹಕಾರ ಸಂಘಕ್ಕೆ ಪ್ರಸ್ತುತ ವರ್ಷ ೧೩.೯೪ ಲಕ್ಷ ನಿವ್ವಳ ಲಾಭ ಗಳಿಸುವ ಮೂಲಕ ಸಂಘವು ಆರ್ಥಿಕವಾಗಿ ಸದೃಢವಾಗಿದೆ ಎಂದು ಸಂಘದ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್‌ಕುಮಾರ್ ಹೇಳಿದರು.

ನಗರದ ಬಸವನಹಳ್ಳಿ ಸಮೀಪ ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ೨೦೨೨-೨೩ನೇ ಸಾಲಿನ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ೧೩.೯೪ ಲಕ್ಷ ನಿವ್ವಳ ಲಾಭ ಗಳಿಸಿ ಶೇ.೧೦ ರಿವಿಡೆಂಟ್‌ನ್ನು ಸದಸ್ಯರಿಗೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

ಸಂಘವು ಪ್ರಾರಂಭವಾಗಿ ಎರಡು ದಶಕ ಕಳೆದಿದೆ. ಅಂದಿನಿಂದ ಇಂದಿವರೆಗೂ ೨೧೫೪ ಸದಸ್ಯರನ್ನು ಒಳಗೊಂ ಡಿದ್ದು ೯.೧೪ ಕೋಟಿ ಸಾಲ ವಿತರಿಸಿದೆ. ಜೊತೆಗೆ ೬೬ ಲಕ್ಷ ಷೇರು ಹಣವನ್ನು ಹೊಂದಿದ್ದು ೧೩ ಕೋಟಿ ಠೇವಣಿ ಸಂಗ್ರಹಿಸುವ ಮೂಲಕ ೩೭ ಕೋಟಿ ರೂ. ವ್ಯವಹಾರವನ್ನು ನಡೆಸಿ ಪ್ರಸ್ತುತ ವರ್ಷ ೧೩.೯೪ ಲಕ್ಷ ರೂ. ನಿವ್ವಳ ಲಾಭ ವನ್ನು ಗಳಿಸಿಕೊಂಡಿದೆ ಎಂದರು.

ಕಳೆದ ಎರಡು ವರ್ಷಗಳಲ್ಲಿ ಸಂಘವು ಸುಸಜ್ಜಿತವಾಗಿ ಸ್ವಂತ ಕಟ್ಟಡವನ್ನು ಹೊಂದಿದೆ. ಸಹಕಾರ ಸಂಘಕ್ಕೆ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಲಿಪ್ಟ್ ಅಳವಡಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಸಂಘದ ಮಾಜಿ ಅಧ್ಯಕ್ಷ ಬಿ.ಸಿ.ಲೋಕಪ್ಪಗೌಡ ಮಾತನಾಡಿ ಸಂಘದ ಸದಸ್ಯರು ಹೆಚ್ಚಿನ ವ್ಯವಹಾರ ಮಾಡು ವುದರ ಮೂಲಕ ಸಂಘವನ್ನು ಅಭಿವೃಧ್ದಿಪಥದತ್ತ ಕೊಂಡೊಯ್ಯುತ್ತಿರುವುದು ಸ್ವಾಗತಾರ್ಹ. ಇದೇ ರೀತಿ ಮುಂದಿನ ದಿನಗಳಲ್ಲೂ ಸಂಪೂರ್ಣ ಬೆಂಬಲ ನೀಡುವ ಮೂಲಕ ಜಿಲ್ಲಾ ಸಂಘವು ರಾಜ್ಯಮಟ್ಟದಲ್ಲಿ ಹೆಸರು ಗಳಿಸುವಂ ತಾಗಲಿ ಎಂದು ಶುಭ ಕೋರಿದರು.

ಇದೇ ವೇಳೆ ವ್ಯವಸ್ಥಾಪಕ ಸಿ.ಎಂ.ನಾರಾಯಣಸ್ವಾಮಿ ೨೦೨೨-೨೩ನೇ ಸಾಲಿನ ವರದಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೆ.ವೆಂಕಟೇಶ್ ಪೈ, ಯು.ಟಿ.ನಾಗರಾಜು, ಎಂ.ಸಿ.ಶಿವಾನಂದ ಸ್ವಾಮಿ, ಬಿ.ಟಿ.ಗೋಪಾಲಗೌಡ, ಬಿ.ಹೆಚ್.ಶಂಕರ್, ಗಂಗೇಗೌಡ, ಡಿ.ಬಿ.ದೀಪಕ್, ಎಂ.ಎಸ್.ಉಮೇಶ್‌ಕುಮಾರ್, ಬಿ.ಎಸ್. ಪ್ರಶಾಂತ್, ಶ್ರೀಮತಿ ಅನುಪಮ, ಗೀತಾ ಉಪಸ್ಥಿತರಿದ್ದರು.

ಶ್ರೀಮತಿ ಪ್ರಾರ್ಥನಾ ಪ್ರಾರ್ಥಿಸಿದರು. ನಿರ್ದೇಶಕ ಎಂ.ಸಿ.ಶಿವಾನಂದಸ್ವಾಮಿ ನಿರೂಪಿಸಿದರು. ಸಿ.ಆರ್.ಪ್ರೇಮ್ ಕುಮಾರ್ ಸ್ವಾಗತಿಸಿದರು. ಹೆಚ್.ಆರ್.ಮರಳಪ್ಪ ವಂದಿಸಿದರು.

Co-operative Society of Graduates

About Author

Leave a Reply

Your email address will not be published. Required fields are marked *