September 20, 2024

ಜಿಲ್ಲಾಮಟ್ಟದ ಜನತಾದರ್ಶನ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಅನಾವರಣ

0
ಜಿಲ್ಲಾಮಟ್ಟದ ಜನತಾದರ್ಶನ ಕಾರ್ಯಕ್ರಮ

ಜಿಲ್ಲಾಮಟ್ಟದ ಜನತಾದರ್ಶನ ಕಾರ್ಯಕ್ರಮ

ಚಿಕ್ಕಮಗಳೂರು: ಬೆಟ್ಟದಷ್ಟು ಬಗೆಹರಿಯದ ಭೂಮಿ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಸುರಿಯುವ ಮೂಲಕ ಕಂದಾಯ ಇಲಾಖೆಯ ವೈಫಲ್ಯವನ್ನು ಅನಾವರಣ ಮಾಡಿದ ಪ್ರಸಂಗ ಇಂದು ನಡೆದ ಜಿಲ್ಲಾಮಟ್ಟದ ಜನತಾದರ್ಶನ ಕಾರ್ಯಕ್ರಮದಲ್ಲಿ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿಯ ಮೊಟ್ಟ ಮೊದಲ ಜಿಲ್ಲಾಮಟ್ಟದ ಜನತಾದರ್ಶನ ಕಾರ್ಯಕ್ರಮ ಇಂದು ನಡೆದು ಜಿಲ್ಲೆಯ ಸಮಸ್ಯೆಗಳ ಅನಾವರಣಗೊಳಿಸಲಾಯಿತು.

ಉಸ್ತುವಾರಿ ಸಚಿವ ಕೆ.ಜಿ ಜಾರ್ಜ್ ಹಾಗೂ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಇವರುಗಳ ಸಮಕ್ಷಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಾರ್ವಜನಿಕರಿಂದ ತಮ್ಮ ಕುಂದುಕೊರತೆಗಳು ಹಾಗೂ ಅಹವಾಲುಗಳನ್ನು ಕೇಳಲು ನಗರದ ರತ್ನಗಿರಿ ರಸ್ತೆಯಲ್ಲಿರುವ ಕೆ.ಇ.ಬಿ ನೌಕರರ ಭವನದಲ್ಲಿ ಮೊದಲ ಜನತಾದರ್ಶನ ಕಾರ್ಯಕ್ರಮವನ್ನು ವ್ಯವಸ್ಥೆ ಗೊಳಿಸಲಾಗಿತ್ತು.

ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರು ನೂಕುನುಗ್ಗಲಿನಿಂದ ಸೇರಿದ್ದರಾದರೂ ಬಹುಪಾಲು ಬೆಟ್ಟದ? ಸಮಸ್ಯೆಗಳು ಭೂಮಿಗೆ ಸಂಬಂಧಪಟ್ಟವುಗಳಾಗಿದ್ದು, ಬಗೆಹರಿಸಲಾಗದ ಪರಿಸ್ಥಿತಿಯಲ್ಲಿದ್ದು, ಬೃಹದಾಕಾರವಾಗಿ ಇರುವ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ಸಿಗದೆ ಅರ್ಜಿದಾರರು ನಿರಾಸೆಯಿಂದ ವಾಪಾಸ್ ತೆರಳಿದ ಘಟನೆಯು ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆ ಮಲ್ಲೇನಹಳ್ಳಿಯ ಸುನಿಲ್‌ಕುಮಾರ್ ಎಂಬುವವರು ತಾವು ಮಾಡಿಕೊಂಡಿರುವ ಬಗರ್ ಹುಕುಂ ಸಾಗುವಳಿ ಜಮೀನನ್ನು ಸಕ್ರಮಗೊಳಿಸಿಕೊಳ್ಳಲು ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿದರಲ್ಲದೆ ಶ್ರೀಮಂತರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ, ಬಡವರಿಗೆ ಮಾತ್ರ ತೊಂದರೆ ಆಗುತ್ತಿದೆ ಎಂದು ದೂರುಗಳ ಸುರಿಮಳೆಗರೆದರು.

ಕೊಪ್ಪ, ಶೃಂಗೇರಿ, ಎನ್.ಆರ್ ಪುರ, ಕಡೂರು ಭಾಗದ ದಲಿತ ಸಂಘಟನೆಗಳ ಮುಖಂಡರುಗಳು ಪ್ರತ್ಯೇಕ ಅರ್ಜಿಗಳೊಂದಿಗೆ ನಿವೇಶನ ಸಮಸ್ಯೆ, ಭೂ ಮಂಜೂರಾತಿ, ಅಕ್ರಮ-ಸಕ್ರಮ ಕಾರ್ಯಕ್ರಮ ಸೇರಿದಂತೆ ಸಮುದಾಯ ಭವನಗಳಿಗೆ ಜಮೀನು ಮಂಜೂರಾತಿ, ಸ್ಮಶಾನಗಳ ಕೊರತೆ, ಶ್ರೀಮಂತರಿಂದ ಬಡವರ ಭೂಮಿ ಅತಿಕ್ರಮ ಹಾಗೂ ಅರಣ್ಯ ಇಲಾಖೆಯ ಕಿರುಕುಳದ ಬಗ್ಗೆ ಸಾಲು-ಸಾಲುಗಟ್ಟಲೆ ಕುಂದುಕೊರತೆಗಳನ್ನು ಹೇಳಿಕೊಂಡರು.

ಬಹುಪಾಲು ಸಮಸ್ಯೆಗಳು ಭೂಮಿಗೆ ಸಂಬಂಧಿಸಿದ್ದು ಹಾಗೂ ದಲಿತ ಸಮೂಹದ ಸಮಸ್ಯೆಗಳೇ ಹೆಚ್ಚಾಗಿದ್ದು ಅನೇಕ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ಕಂದಾಯ ಇಲಾಖೆ ವಿಫಲವಾಗಿರುವುದು ಜನತಾದರ್ಶನ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಗೊಂದಲಗಳಿಂದ ಈ ಸಮಸ್ಯೆಗಳನ್ನು ಬಗೆಹರಿಸಲು ಅಡೆಯಚಣೆಯಾಗಿದೆ ಎಂದು ತಿಳಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ವಿವರಣೆ ನೀಡಿ, ಜಂಟಿ ಸರ್ವೆ ನಡೆಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು ಸದ್ಯದಲ್ಲೇ ಜಂಟಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಮಸ್ಯೆ ಬಗೆಹರಿಸಲು ಪ್ರಮುಖ ಕಾರ್ಯಕ್ರಮವಾಗಿರುವ ಅರಣ್ಯ ಸಟ್ಲ್‌ಮೆಂಟ್ ಅಧಿಕಾರಿಯ ಕಚೇರಿ ಕಡೂರಿನಲ್ಲಿದ್ದು ಯಾವಾಗಲೂ ಆ ಅಧಿಕಾರಿ ಕಚೇರಿಯಲ್ಲಿ ಇರುವುದಿಲ್ಲ. ಅನೇಕ ಕಡತಗಳು ಬಾಕಿ ಉಳಿದಿದ್ದು ಇದರಿಂದ ರೈತರಿಗೆ ತೊಂದರೆ ಆಗುತ್ತಿದೆ ಕಡೂರಿನಲ್ಲಿರುವ ಎಫ್.ಎಸ್.ಓ ಕಚೇರಿಯನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಬೇಕೆಂದು ಶಾಸಕ ಎಚ್.ಡಿ ತಮ್ಮಯ್ಯ ಸೇರಿದಂತೆ ಅರ್ಜಿದಾರರು ಮನವಿ ಮಾಡಿದರು.

ಈ ಬಗ್ಗೆ ವಿವರಣೆ ಕೇಳಿದ ಉಸ್ತುವಾರಿ ಸಚಿವರು ಫಾರೆಸ್ಟ್ ಸಟ್ಲ್‌ಮೆಂಟ್ ಅಧಿಕಾರಿ ಬಗ್ಗೆ ವಿಚಾರಿಸಿದಾಗ ಆ ಅಧಿಕಾರಿ ಗೈರು ಹಾಜರಾಗಿದ್ದು, ಸಭೆಗೆ ಬರುತ್ತಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದಾಗ ಆಸಮಾಧಾನಗೊಂಡ ಜಿಲ್ಲಾ ಉಸ್ತುವಾರಿ ಸಚಿವರು ಅವರನ್ನು ನಾವು ಕಾಯುವ? ದೊಡ್ಡವರೆಂದು ನನಗೆ ಗೊತ್ತಿಲ್ಲ ಎಂದು ತಮ್ಮ ಸಿಟ್ಟನ್ನು ಹೊರ ಹಾಕಿದರು.

ಜಿಲ್ಲೆಯ ಬಹುದೊಡ್ಡ ಸಮಸ್ಯೆಯಾಗಿರುವ ಕಸ್ತೂರಿರಂಗನ್ ವರದಿ ಹಾಗೂ ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶ ಘೋ?ಣೆಯಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಸಂಪೂರ್ಣವಾಗಿ ವಿವರಿಸಿದ ಹೋರಾಟ ಸಮಿತಿ ಸಂಚಾಲಕ ಎಸ್.ವಿಜಯ್‌ಕುಮಾರ್ ಈ ವರದಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ಸಾಮಾನ್ಯ ಜನರು ಹಾಗೂ ಜನವಸತಿ ಪ್ರದೇಶಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಸಿಪಿಐ ಮುಖಂಡರಾದ ರಾಧಾಸುಂದರೇಶ್ ಅವರು ಜಿಲ್ಲೆಯ ಎಲ್ಲಿ ಲಕ್ಷಾಂತರ ಮಂದಿ ನಿವೇಶದ ರಹಿತರದ್ದು ಅಂತವರಿಗೆ ವಸತಿ ಕಲ್ಪಿಸುವಂತೆ ಮನವಿ ಸಲ್ಲಿಸಿದರು.

ರೈತ ಸಂಘದ ಪದಾಧಿಕಾರಿಗಳು ಮಳೆಯ ಕೊರತೆಯಿಂದ ಬರಗಾಲ ಸ್ಥತಿಯಲ್ಲಿ ಸಂಕ?ದಲ್ಲಿರುವ ರೈತರಿಗೆ ಸಾಲ ಮನ್ನಾ ಸೇರಿದಂತೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಇನ್ನುಳಿದಂತೆ ಅಂಗನವಾಡಿ, ರಸ್ತೆ ಒತ್ತುವರಿ, ಸರ್ವೇ ಇಲಾಖೆ ವಿಳಂಬ ಸೇರಿದಂತೆ ಅನೇಕರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ತೋಡಿಕೊಂಡಿದ್ದು, ಯಾವುದೇ ಅಹವಾಲಿಗೆ ಸ್ಥಳದಲ್ಲಿ ಪರಿಹರಿಸುವ ವ್ಯವಸ್ಥೆ ಇರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಉಸ್ತುವಾರಿ ಕಾರ್ಯದರ್ಶಿ ಸೂಚನೆ ನೀಡುತ್ತಿದ್ದು ಸಾಮಾನ್ಯವಾಗಿದ್ದರೆ, ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆಗಳ ಪರಿಹಾರಕ್ಕೆ ಜಂಟಿ ಸರ್ವೆ ಆಗದ ಹೊರತು ಪರಿಹಾರ ಸಾಧ್ಯವಿಲ್ಲವೆಂದು ಅಹವಾಲುದಾರರಿಗೆ ತಿಳಿಸಿದರಲ್ಲದೆ ಸಧ್ಯದಲ್ಲಿಯೇ ಜಂಟಿ ಸರ್ವೆಗೆ ಚಾಲನೆ ನೀಡುವುದಾಗಿ ಸ್ಪ?ಪಡಿಸಲಾಯಿತು.

ಈ ಮಧ್ಯೆ ಬೀಕನಹಳ್ಳಿಯ ಮಲ್ಲುಂಡಪ್ಪ ಎಂಬುವವರು ತಮ್ಮ ಜಮೀನನ್ನು ಆಗಿನ ಶಾಸಕ ಸಿ.ಟಿ ರವಿ ಬೆಂಬಲಿಗರು ಬಲವಂತವಾಗಿ ವಶಪಡಿಸಿಕೊಂಡ ಪರಿಣಾಮ ಈಗ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿರುವುದಾಗಿ ತಮ್ಮ ಅಳಲನ್ನು ತೋಡಿಕೊಂಡ ಅವರು ತಾವು ಒತ್ತುವರಿ ಮಾಡಿಕೊಂಡಿದ್ದ ಸ್ವಲ್ಪ ಜಮೀನನ್ನಾದರೂ ಬಿಡಿಸಿಕೊಡುವಂತೆ ಕೇಳಿಕೊಂಡಾಗ ರಾಜೇಂದ್ರಕುಮಾರ್ ಕಟಾರಿಯಾ ಅವರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‌ರವರಿಗೆ ಸೂಚನೆ ನೀಡಿದರು.

District Level Janatadarshan Programme

About Author

Leave a Reply

Your email address will not be published. Required fields are marked *