September 20, 2024

ಹಸುಗಳ ಆರೋಗ್ಯ ಸರಿ ಇದ್ದರೆ ಉತ್ತಮ ಗುಣಮಟ್ಟದ ಹಾಲನ್ನು ಪಡೆಯಲು ಸಾಧ್ಯ

0
ಕಾಲು-ಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ

ಕಾಲು-ಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ

ಚಿಕ್ಕಮಗಳೂರು: ಹಸುಗಳ ಆರೋಗ್ಯ ಸರಿ ಇದ್ದರೆ ಉತ್ತಮ ಗುಣಮಟ್ಟದ ಹಾಲನ್ನು ಪಡೆಯಲು ಸಾಧ್ಯ ಈ ನಿಟ್ಟಿನಲ್ಲಿ ರೈತರು ಪಶುಸಂಗೋಪನೆ ಇಲಾಖೆಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕ ಸ್ವಾಬಲಂಬಿಗಳಾಗಬೇಕು ಎಂದು ಶಾಸಕ ಎಚ್.ಡಿ ತಮ್ಮಯ್ಯ ಕರೆ ನೀಡಿದರು.

ಅವರು ಇಂದು ಬೀಕನಹಳ್ಳಿ ಗ್ರಾಮದಲ್ಲಿ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಆಯೋಜಿಸಿದ್ದ ಕಾಲು-ಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಯಾವುದೇ ರೋಗ ಜಾನುವಾರುಗಳಿಗೆ ತಗಲುವ ಮುನ್ನ ಮುಂಜಾಗ್ರತಾ ಕ್ರಮವಾಗಿ ಅಗತ್ಯವಿರುವ ಲಸಿಕೆ ಹಾಕಿಸುವುದು ತುಂಬಾ ಉಪಯುಕ್ತವಾಗಿದೆ ಕಾಯಿಲೆ ಬರುವ ಮುನ್ನ ಸರ್ಕಾರ ಸಂಬಂಧಪಟ್ಟ ಇಲಾಖೆ ಮೂಲಕ ಲಿಸಿಕೆ ಹಾಕಲು ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ ಎಂದರು.

ಭಾರತದಲ್ಲಿ ಶೇ.೭೦ರ? ರೈತರು ಕೃಷಿಯನ್ನು ಅವಲಂಭಿಸಿದ್ದಾರೆ ಉಪಕಸುಬುಗಳಾಗಿ ಹೈನುಗಾರಿಕೆ, ಕೋಳಿ, ಕುರಿ, ಹಂದಿ ಸಾಗಾಣಿಕೆ ಮಾಡುವ ಮೂಲಕ ಆರ್ಥಿಕ ಪ್ರಗತಿಯಾಗಬೇಕಿದೆ. ಹೈನುಗಾರಿಕೆಯಿಂದ ಹೆಚ್ಚು ಹಾಲು ಉತ್ಪಾದನೆ ಆಗುತ್ತಿದ್ದು ಪ್ರತ್ಯೇಕ ಹಾಲಿನ ಒಕ್ಕೂಟವನ್ನು ಜಿಲ್ಲೆಗೆ ತೆರೆಯುವಂತೆ ಸದನದಲ್ಲಿ ವಿ?ಯ ಪ್ರಸ್ತಾಪಿಸಿದ್ದು ಸಧ್ಯದಲ್ಲೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ ಜೊತೆಗೆ ಉಪಕಸುಬುಗಳನ್ನು ಕೈಗೊಳ್ಳಲು ಈಗಿನ ಪರಿಸ್ಥಿತಿಯಲ್ಲಿ ಎಲ್ಲಾ ದರಗಳು ಹೆಚ್ಚಾಗಿರುವುದರಿಂದ ಪಶು ಸಂಗೋಪನೆ ಕ? ಸಾಧ್ಯವಾಗಿದೆ. ರೈತರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸರ್ಕಾರಿ ಉದ್ಯೋಗಕ್ಕೆ ಕಳುಹಿಸುತ್ತಿದ್ದಾರೆ ಕೇವಲ ನೌಕರರಿಗೆ ವಿದ್ಯಾಭ್ಯಾಸ ಮಾಡದೆ ಬದುಕಿಗಾಗಿ ಶಿಕ್ಷಣ ಪಡೆಯಬೇಕು ಇತ್ತೀಚಿಗೆ ಉಪಕಸುಬುಗಳು ಬಹಳಷ್ಟಿದ್ದು ಎಲ್ಲರೂ ಇದರಲ್ಲಿ ತೊಡಗಿಸಿಕೊಂಡು ಪ್ರಯೋಜನಪಡೆಯುವುದು ಬಹಳ ಮುಖ್ಯ ಎಂದು ಹೇಳಿದರು.

ಗ್ರಾ.ಪಂ ಸದಸ್ಯ ಎಚ್.ಪಿ ಮಂಜೇಗೌಡ ಮಾತನಾಡಿ ಈ ದೇಶದ ಬೆನ್ನೆಲುಬಾಗಿರುವ ರೈತರಿಗೆ ಬೆನ್ನೆಲುಬಾಗಿ ಆರ್ಥಿಕ ಸುಧಾರಣೆಗೆ ಜಾನುವಾರುಗಳು ಮುಖ್ಯ ಇದರಿಂದ ಹಾಲು ಗೊಬ್ಬರವನ್ನು ನೀಡುತ್ತಿರುವ ಹಸುಗಳ ಆರೋಗ್ಯ ಕಾಪಾಡುವುದು ಅತಿ ಮುಖ್ಯ ರೋಗ ಮುಕ್ತ ಲಸಿಕೆ ಹಾಕುತ್ತಿರುವುದು ಪ್ರಶಂಸನೀಯ ಎಂದರು.

ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ|| ಮೋಹನ್ ಮಾತನಾಡಿ ಮೂರು ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಇಂದಿನಿಂದ ಅ.೨೫ ರವರೆಗೆ ಪ್ರತಿ ಮನೆಗಳಿಗೆ ಹೋಗಿ ಕಾಲು-ಬಾಯಿ ಜ್ವರಕ್ಕೆ ಲಸಿಕೆ ನೀಡುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಜಾನುವಾರುಗಳಿಗೆ ಈಗ ಪ್ರಾರಂಭಿಸಿರುವ ಲಸಿಕೆ ಅಭಿಯಾನ ಪೋಲಿಯೋ ಮಾದರಿಯಲ್ಲಿ ಕ್ರಾಂತಿಯಾದಾಗ ಮಾತ್ರ ಈ ಕಾಲು-ಬಾಯಿ ರೋಗವನ್ನು ೨೦೩೦ರ ವೇಳೆಗೆ ಮುಕ್ತವಾಗಿಸಲು ಗುರಿ ಹೊಂದಲಾಗಿದೆ. ಇದಕ್ಕೆ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.

ಸರ್ಕಾರ ಜಾನುವಾರುಗಳ ಆರೋಗ್ಯ ಕಾಪಾಡಲು ಈಗಾಗಲೇ ಪಶುಸಂಜೀವಿನಿ ವಾಹನವನ್ನು ಖಾಸಗಿಯವರ ಸಹಭಾಗಿತ್ವದೊಂದಿಗೆ ನಿರ್ವಹಣೆ ಮಾಡಲು ಸೂಚಿಸಿದ್ದು, ಓರ್ವ ವೈದ್ಯ ಮತ್ತು ಬೇಕಾದ ಚಿಕಿತ್ಸಾ ಪರಿಕರಗಳು ಈ ವಾಹನದಲ್ಲಿದ್ದು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡುವರು ಈ ಬಗ್ಗೆ ಜನಜಾಗೃತಿ ಮೂಡಿಸಿ ಅರಿವು ಮೂಡಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿದಿನೇಶ್ ವಹಿಸಿದ್ದರು. ಉಪಾಧ್ಯಕ್ಷೆ ಲೀಲಾವತಿಪುಟ್ಟೇಗೌಡ, ಸದಸ್ಯರುಗಳಾದ ವಿಜಯ್‌ಕುಮಾರ್, ಯೋಗೀಶ್, ಮಂಜುಳಾಶಿವಣ್ಣ, ಗ್ರಾಮಸ್ಥರಾದ ಮರಿಯಪ್ಪ, ನಂಜುಂಡಪ್ಪ, ಪಶು ವೈದ್ಯರುಗಳಾದ ಡಾ|| ನಾಗರಾಜ್, ಡಾ|| ಹೇಮಂತ್ ಉಪಸ್ಥಿತರಿದ್ದರು.

Launch of foot and mouth disease vaccination campaign

About Author

Leave a Reply

Your email address will not be published. Required fields are marked *