September 16, 2024

ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಗೆ ಬಹಳ ಮಹತ್ವವಿದೆ

0
ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಹೃದಯಘಾತ ಪುನಶ್ಚೇತನ ಹಾಗೂ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯ ಕ್ರಮ

ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಹೃದಯಘಾತ ಪುನಶ್ಚೇತನ ಹಾಗೂ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯ ಕ್ರಮ

ಚಿಕ್ಕಮಗಳೂರು:  ಅಪಘಾತ ಅಥವಾ ಇನ್ಯಾವುದೇ ತುರ್ತು ಸಂದರ್ಭಗಳಲ್ಲಿ ಸ್ಥಳದಲ್ಲಿ ರುವ ವ್ಯಕ್ತಿಗಳು ಪ್ರಥಮ ಚಿಕಿತ್ಸೆ ಒದಗಿಸಿದರೆ ಗಾಯಳುಗಳು ಪ್ರಾಣಾಪಾಯದಿಂದ ಪಾರಾಗಬಹುದು ಎಂದು ರೆಡ್ ಕ್ರಾಸ್ ಸಂಸ್ಥೆಯ ಆರೋಗ್ಯ ಸಮಿತಿ ಅಧ್ಯಕ್ಷ ಡಾ|| ಕೆ.ಸುಂದರಗೌಡ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಭಾರತೀಯ ರೆಡ್‌ಕ್ರಾಸ್, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹೃದಯಘಾತ ಪುನಶ್ಚೇತನ ಹಾಗೂ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯ ಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ರೆಡ್‌ಕ್ರಾಸ್ ಸಂಸ್ಥೆಯ ಪಿತಾಮಹ ಹೆನ್ರಿ ಡೋನೋಟ್ ಅವರು ೧೮೬೩ರ ಯುದ್ಧಭೂಮಿ ಸಮಯದಲ್ಲಿ ಸೈನಿ ಕರು ಸಾವನ್ನಪ್ಪಿರುವುದು ಕಂಡು ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಪ್ರಥಮ ಚಿಕಿತ್ಸೆ ವ್ಯವ ಸ್ಥೆಯನ್ನು ಕಲ್ಪಿಸಿದ್ದು ಅಂದಿನಿಂದ ಇಂದಿಗೂ ಸುಮಾರು ೧೯೦ಕ್ಕೂ ಹೆಚ್ಚು ದೇಶಗಳಲ್ಲಿ ಈ ಬಗ್ಗೆ ಅರಿವು ಮೂಡಿ ಸಲು ರೆಡ್‌ಕ್ರಾಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಪ್ರಪಂಚದಲ್ಲಿ ೧೬ ಸಾವಿರಕ್ಕೂ ಹೆಚ್ಚು ಮಂದಿ ಅಪಘಾತ, ಹೃದಯಾಘಾತ, ಉಸಿರಾಟ ಸಮಸ್ಯೆ ಹಾಗೂ ಮೂಳೆ ಮುರಿತದಿಂದ ಪ್ರಥಮ ಚಿಕಿತ್ಸೆ ದೊರೆಯದೇ ಸಾವಪ್ಪುತ್ತಿದ್ದಾರೆ, ಇದನ್ನು ನಿವಾರಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದ್ದು ಇಂತಹ ಘಟನೆಗಳನ್ನು ತಪ್ಪಿಸಲು ಸ್ಥಳೀಯರು ಮುಂಚಿತವಾಗಿ ಪ್ರಥಮ ಚಿಕಿತ್ಸೆ ಒದಗಿಸಿದರೆ ಶೇ.೭೦ ರಷ್ಟು ಮಂದಿಯ ಪ್ರಾಣ ಉಳಿಸಬಹುದು ಎಂದು ಹೇಳಿದರು.

ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೃದಯಘಾತ ಪುನಶ್ಚೇತನ ಹಾಗೂ ಪ್ರಥಮ ಚಿಕಿತ್ಸೆ ಕಲಿಕೆ ಬಗ್ಗೆ ರೆಡ್‌ಕ್ರಾಸ್ ಕಾರಾಗೃಹ ಸೇರಿದಂತೆ ಹಲವಾರು ಕಡೆಗಳಲ್ಲಿ ತರಬೇತಿ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾ ಗುತ್ತಿದ್ದು ಪ್ರತಿಯೊಬ್ಬರು ಕಲಿಕೆಗೆ ಮುಂದಾದರೆ ಸ್ಥಳೀಯವಾಗಿ ಜನಸಾಮಾನ್ಯರ ಪ್ರಾಣ ರಕ್ಷಿಸಬಹುದು ಎಂದು ಸಲಹೆ ಮಾಡಿದರು.

ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ರಸೂಲ್‌ಖಾನ್ ಮಾತನಾಡಿ ಕಾರಾಬಂಧಿಗಳು ಸಿಕ್ಕಿರುವಂತಹ ತರ ಬೇತಿ ಅವಕಾಶವನ್ನು ಪಡೆದುಕೊಂಡು ಬಿಡುಗಡೆ ಬಳಿಕ ಆಪತ್ತಿನ ಸಂದರ್ಭದಲ್ಲಿರುವ ವ್ಯಕ್ತಿಗಳಿಗೆ ಪ್ರಥಮ ಚಿಕಿತ್ಸೆ ನೀಡಿದರೆ ಬಹಳಷ್ಟು ಉಪಯೋಗವಾಗುವ ಜೊತೆಗೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದಂತಾಗುತ್ತದೆ ಎಂದರು.

ಈಗಾಗಲೇ ನೂರಾರು ವರ್ಷಗಳಿಂದ ಸ್ಥಾಪಿತವಾಗಿರುವ ರೆಡ್‌ಕ್ರಾಸ್ ಸಂಸ್ಥೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿ ಜನತೆಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಅದಲ್ಲದೇ ಕೊರೋನಾ, ರಕ್ತನಿಧಿ ಅಥವಾ ಪ್ರವಾಹ ಸಂದರ್ಭ ಗಳಲ್ಲಿ ಜನತೆಗೆ ಅನುಕೂಲವಾಗುವ ಸವಲತ್ತು ಒದಗಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಕಾರಾಬಂಧಿಗಳು ಬಿಡುಗಡೆ ಬಳಿಕ ಮನ ಪರಿವರ್ತನೆಗೊಂಡು ಸಾಮಾಜಿಕ ಕಾರ್ಯದಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈಲರ್ ಎಂ.ಕೆ.ನೆಲಧರಿ ವಹಿಸಿದ್ದರು. ಇದೇ ವೇಳೆ ಡಾ|| ಜುಬೇರ್‌ರವರು ಕೊಡುಗೆ ನೀಡಿದ ಪ್ರಥಮ ಚಿಕಿತ್ಸೆಯ ಐದು ಮೆಡಿಕಲ್ ಕಿಟ್‌ಗಳನ್ನು ರೆಡ್‌ಕ್ರಾಸ್ ಸಂಸ್ಥೆ ಪದಾಧಿಕಾರಿಗಳು ಕಾರಾ ಬಂಧಿಗಳಿಗೆ ವಿತರಿಸಿದರು. ಬಳಿಕ ಡಾ|| ಕೆ.ಸುಂದರಗೌಡ ಹೃದಯಘಾತ ಪುನಶ್ಚೇತನ ಮತ್ತು ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಾಕ್ಷಿಕೆ ಮೂಲಕ ವಿವರಿಸಿದರು.

ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಆರ್.ಶ್ರೀನಿವಾಸ್, ಸಹಾಯಕ ಜೈಲರ್ ಲಕ್ಕೇಗೌಡ, ಮಾನಸಿಕ ಆಪ್ತ ಸಮಾಲೋಚಕಿ ಆಶಾ, ಶಿಕ್ಷಕ ರಾಜಕುಮಾರ್ ಮತ್ತಿತರರು ಹಾಜರಿದ್ದರು.

Cardiac resuscitation and first aid training program

About Author

Leave a Reply

Your email address will not be published. Required fields are marked *