September 19, 2024

’ಜೈ ಭೀಮ್’ ವ್ಯಾಯಾಮ ಶಾಲೆ ಎಂದು ನಾಮಕರಣ ಮಾಡಲು ಸರ್ವಾನುಮತದಿಂದ ತೀರ್ಮಾನ

0
ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆ

ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆ

ಚಿಕ್ಕಮಗಳೂರು:  ಹಲವು ದಿನಗಳಿಂದ ಜಿಜ್ಞಾಸೆಗೆ ಕಾರಣವಾಗಿದ್ದ ನಗರಸಭೆ ವ್ಯಾಯಾಮ ಶಾಲೆಗೆ ಹೆಸರಿಡುವ ವಿಚಾರದಲ್ಲಿ ಇಂದು ನಗರ ಸಭೆಯಲ್ಲಿ ಅಂತಿಮ ನಿರ್ಣಯ ಕೈಕೊಂಡು ’ಜೈ ಭೀಮ್’ ವ್ಯಾಯಾಮ ಶಾಲೆ ಎಂದು ನಾಮಕರಣ ಮಾಡಲು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ.

ಇಂದು ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಜೈ ಭೀಮ್ ಹೆಸರಿಡುವ ಕುರಿತು ಸರ್ವಾನುಮತದ ನಿರ್ಣಯ ಅಂಗೀಕರಿಸಿ ಶಿಫಾರಸ್ಸು ಮಾಡಲು ತೀರ್ಮಾನಿಸಲಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಹಿರಿಯ ಸದಸ್ಯ ಟಿ.ರಾಜಶೇಖರ್ ಅವರು ವಿ?ಯ ಪ್ರಸ್ತಾಪಿಸಿ ನಗರಸಭೆಯ ಎಸ್‌ಸಿ, ಎಸ್‌ಟಿ ಅನುದಾನದಲ್ಲಿ ಆರಂಭಿಸಲಾಗುತ್ತಿರುವ ವ್ಯಾಯಾಮ ಶಾಲೆಗೆ ’ಜೈ ಭೀಮ್’ ವ್ಯಾಯಾಮ ಶಾಲೆ ಎಂದು ಹೆಸರಿಡುವ ಬಗ್ಗೆ ದಲಿತ ಸಂಘಟನೆಗಳ ಒತ್ತಾಯವಿದ್ದು, ಈ ವಿ?ಯದಲ್ಲಿ ವಿವಾದಕ್ಕೆ ಆಸ್ಪದ ಕೊಡಬಾರದು. ಜೈ ಭೀಮ್ ಎಂಬ ಹೆಸರಿಟ್ಟರೆ ಅಂಬೇಡ್ಕರ್ ರವರಿಗೆ ಗೌರವಿಸಿದಂತಾಗುತ್ತದೆ ಇದರಲ್ಲಿ ಯಾರದೇ ಆಕ್ಷೇಪ ಇರಬಾರದು ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಸಭೆ ಗಮನಕ್ಕೆ ತಂದರು.

ಈ ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಮುನೀರ್ ಅಹಮದ್‌ರವರು ಟಿ.ರಾಜಶೇಖರ್ ರವರ ಪ್ರಸ್ತಾಪವನ್ನು ಅನುಮೋದಿಸಿ ಈ ವಿ?ಯ ಪ್ರಸ್ತಾಪಿಸಿದ್ದಕ್ಕಾಗಿ ಎಲ್ಲಾ ಸದಸ್ಯರುಗಳಿಗೆ ಅಭಿನಂದಿಸಿದರಲ್ಲದೆ ಜೈ ಭೀಮ್ ಹೆಸರಿಡುವಂತೆ ಎಲ್ಲಾ ಸದಸ್ಯರು ಬೆಂಬಲ ನೀಡುವಂತೆ ಮನವಿ ಮಾಡಿದರು.
ಮುನೀರ್ ಅಹಮದ್‌ರವರ ಮನವಿಗೆ ಧ್ವನಿ ಮತದ ಮೂಲಕ ಬೆಂಬಲ ವ್ಯಕ್ತಪಡಿಸಿದ ಮೇರೆಗೆ ಅಜಾದ್‌ಪಾರ್ಕ್ ವಾಣಿಜ್ಯ ಸಂಕೀರ್ಣದಲ್ಲಿ ಆರಂಭಿಸಲಾಗುತ್ತಿರುವ ವ್ಯಾಯಾಮ ಶಾಲೆಗೆ ಜೈ ಭೀಮ್ ವ್ಯಾಯಾಮ ಶಾಲೆ ಎಂಬ ನಾಮಕರಣ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸರ್ವಾನು ಮತದ ನಿರ್ಣಯ ಕೈಗೊಳ್ಳಲಾಯಿತು.

ಈ ನಿರ್ಣಯ ಕೈಗೊಳ್ಳುತ್ತಿದ್ದಂತೆ ಜೆಡಿಎಸ್ ಸದಸ್ಯ ಎ.ಸಿ ಕುಮಾರಗೌಡ ಮಾತನಾಡಿ ಜೈ ಭೀಮ್ ವ್ಯಾಯಾಮ ಶಾಲೆ ಎಂದು ನಿರ್ಣಯ ಕೈಗೊಂಡ ಸಭಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿದರಲ್ಲದೆ ಇದು ದಲಿತ ಸಂಘಟನೆಗಳ ಹೋರಾಟಕ್ಕೆ ಸಂದ ಜಯ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.

ಇದೇ ಅಜೆಂಡದಲ್ಲಿ ಕತ್ರಿಮಾರಮ್ಮ ದೇವಸ್ಥಾನದ ಬಳಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣಕ್ಕೆ ರಾ?ಪತಿ ದ್ರೌಪದಿ ಮುರ್ಮು ಅವರ ಹೆಸರಿಡಬೇಕೆಂದು ಬಿಜೆಪಿ ಸದಸ್ಯರಾದ ಟಿ.ರಾಜಶೇಖರ್, ಮಧುಕುಮಾರ್ ರಾಜ್ ಅರಸ್, ಇನ್ನಿತರರು ಸಭಾಧ್ಯಕ್ಷರನ್ನು ಕೋರಿಕೊಂಡಾಗ ಈ ಚರ್ಚೆಯಲ್ಲಿ ಮಧ್ಯಪ್ರವೇಶಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ಲಕ್ಷ್ಮಣ್ ಅವರು ಈ ವಿ?ಯದಲ್ಲಿ ಸಮಗ್ರವಾಗಿ ಚರ್ಚಿಸಿ ಸಾರ್ವಜನಿಕರ ಅಭಿಪ್ರಾಯ ಪಡೆದು ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಹೇಳಿದಾಗ ಎಲ್ಲಾ ಸದಸ್ಯರು ಬೆಂಬಲಿಸಿ, ಈ ವಿ?ಯಕ್ಕೆ ತೆರೆ ಎಳೆಯಲಾಯಿತು.

ಅಮೃತ್ ಯೋಜನೆಯಲ್ಲಿ ನೀರು ಸರಬರಾಜು ಮಾಡುವ ಮೊದಲ ಹಂತದ ನಿರ್ವಹಣಾ ವೆಚ್ಚವಾದ ೮.೬೦ ಕೋಟಿ ರೂ ಹಣವನ್ನು ಒಳಚರಂಡಿ ಮಂಡಳಿ ಇಲಾಖೆಗೆ ಪಾವತಿಸುವ ಬಗ್ಗೆ ಚರ್ಚೆ ಆರಂಭವಾದಾಗ ಬಿಜೆಪಿ ಸದಸ್ಯರುಗಳು ಆಕ್ಷೇಪ ವ್ಯಕ್ತಪಡಿಸಿ ಇನ್ನೂ ಕೂಡ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕೆಂದರು.

ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಇಂಜಿನಿಯರ್ ದೀಪ ಅವರು ಸರ್ಕಾರದ ನಿರ್ದೇಶನದಂತೆ ಹಣ ಪಾವತಿಸುವಂತೆ ಸಭೆಗೆ ಮಾಹಿತಿ ನೀಡಿದರು.

ಅಧಿಕಾರಿ ನೀಡಿದ ಮಾಹಿತಿಗೆ ಪ್ರತಿಕ್ರಿಯಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರುಗಳು ಹಣ ಪಾವತಿ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದಾಗ ಹಿರಿಯ ಸದಸ್ಯ ಲಕ್ಷ್ಮಣ್ ಮಾತನಾಡಿ ನಗರಸಭೆಯಲ್ಲಿನ ಅನುದಾನದ ಲಭ್ಯತೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವಂತೆ ಸಲಹೆ ನೀಡಿದಾಗ ಸಭೆ ಅನುಮೋದನೆ ನೀಡಿತು.

ಇನ್ನೊಂದು ಪ್ರಮುಖ ವಿ?ಯವಾದ ಮಹಾನಗರ ಪಾಲಿಕೆಯನ್ನಾಗಿ ಮೇಲ್ ದರ್ಜೆಗೇರಿಸುವ ಬಗ್ಗೆ ಸದಸ್ಯರುಗಳ ಪ್ರಸ್ತಾಪಕ್ಕೆ ವಿವರಣೆ ನೀಡಿದ ಪೌರಾಯುಕ್ತ ಬಿ.ಸಿ ಬಸವರಾಜ್ ಅವರು ೩ ಲಕ್ಷ ಜನ ಸಂಖ್ಯೆ ಇದ್ದರೆ ನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಬಹುದು. ಇಲ್ಲದಿದ್ದರೆ ಅರ್ಹತೆ ಬರುವುದಿಲ್ಲ ಎಂದು ಹೇಳಿದಾಗ ಈ ವಿ?ಯ ಕೈ ಬಿಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ವರಸಿದ್ದಿ ವೇಣುಗೋಪಾಲ್ ಅವರು ಮಾತನಾಡಿ, ವಿವಾದ ಇಲ್ಲದೇ ನಿರ್ಣಯ ಅಂಗೀಕರಿಸಿದ ಬಗ್ಗೆ ಎಲ್ಲಾ ಸದಸ್ಯರಿಗೆ ಅಭಿನಂದಿಸಿದರು. ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ ಉಪಸ್ಥಿತರಿದ್ದರು.

‘Jai Bheem’ Exercise School

About Author

Leave a Reply

Your email address will not be published. Required fields are marked *

You may have missed