September 20, 2024

ತರಕಾರಿ ವರ್ತಕರ ಸಂಘದ ನೂತನ ಅಧ್ಯಕ್ಷ ಎಂ.ಕೆ.ವೇದಾನಂದಮೂರ್ತಿ ಆಯ್ಕೆ

0
ತರಕಾರಿ ವರ್ತಕರ ಸಂಘದ ನೂತನ ಅಧ್ಯಕ್ಷ ಎಂ.ಕೆ.ವೇದಾನಂದಮೂರ್ತಿ ಆಯ್ಕೆ

ತರಕಾರಿ ವರ್ತಕರ ಸಂಘದ ನೂತನ ಅಧ್ಯಕ್ಷ ಎಂ.ಕೆ.ವೇದಾನಂದಮೂರ್ತಿ ಆಯ್ಕೆ

ಚಿಕ್ಕಮಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಥಮ ಆದ್ಯತೆ ನೀಡುವುದಾಗಿ ಎಪಿಎಂಸಿ ವರ್ತಕರ ಸಂಘದ ನೂತನ ಅಧ್ಯಕ್ಷ ಎಂ.ಕೆ ವೆಜಿಟಬಲ್ಸ್‌ನ ಎಂ,ಕೆ ವೇದಾನಂದಮೂರ್ತಿ ಭರವಸೆ ನೀಡಿದರು.

ಅವರು ಇಂದು ಎಪಿಎಂಸಿ ಯಲ್ಲಿ ನೂತನವಾಗಿ ಸ್ಥಾಪನೆಗೊಂಡ ವರ್ತಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ಎಪಿಎಂಸಿಯಲ್ಲಿ ಹೋಟೆಲ್ ಇಲ್ಲದೆ ರೈತರು ಮತ್ತು ವರ್ತಕರಿಗೆ ತುಂಬಾ ತೊಂದರೆಯಾಗುತ್ತಿದೆ, ಈ ಸಂಬಂಧ ಶಾಸಕರಿಗೆ ಮನವಿ ನೀಡಿ, ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸುವಂತೆ ಒತ್ತಾಯಿಸಲಾಗುವುದೆಂದು ಹೇಳಿದರು.

ಎಪಿಎಂಸಿ ಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದ ಅವರು ರೈತರು ಮತ್ತು ತರಕಾರಿ ವರ್ತಕರೊಂದಿಗೆ ಒಳ್ಳೆಯ ಸಂಬಂಧ ವೃದ್ಧಿಸುವುದರ ಜೊತೆಗೆ ರೈತರಿಗೆ ತೊಂದರೆಯಾಗದಂತೆ ಎಚ್ಚರ ವಹಿಸುತ್ತೇವೆ, ವರ್ತಕರೂ ಸಹ ರೈತರೊಂದಿಗೆ ಸೌಹಾರ್ಧತೆಯಿಂದ ನಡೆದುಕೊಳ್ಳಬೇಕೆಂಬ ದೃಷ್ಠಿಯಿಂದ ಸಂಘವನ್ನು ಸ್ಥಾಪನೆ ಮಾಡಲಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಚೇತನ್ ಸಿ.ಎಸ್ ಮಾತನಾಡಿ ವರ್ತಕರ ಕಷ್ಟ ಸುಖಗಳಿಗೆ ಭಾಗಿಯಾಗಲು ಒಬ್ಬ ಮೇಟಿ ಬೇಕಿತ್ತು, ಅದು ಇಂದು ಸಂಘ ಸ್ಥಾಪನೆ ಮಾಡುವ ಮೂಲಕ ತೀರ್ಮಾನ ಆಗಿದೆ ಎಂದು ತಿಳಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬಹಳಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಇತ್ಯರ್ಥಪಡಿಸಲು ನೂತನ ಅಧ್ಯಕ್ಷರ ನೇತೃತ್ವದಲ್ಲಿ ಪ್ರಯತ್ನ ಮಾಡಲಾಗುವುದು ವರ್ತಕರನ್ನು ಬೇರೆ ರೀತಿ ನೋಡುವ ಪರಿಪಾಠ ಇದ್ದು, ಇದನ್ನು ದೂರವಾಗಿಸುವುದರ ಜೊತೆಗೆ ವರ್ತಕರನ್ನು ಗೌರವದಿಂದ ಕಾಣುವಂತಾಗಬೇಕು ಎಂದರು.

ಸಂಘದ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತೇವೆ ಎಂದ ಅವರು ರೈತರು ಮತ್ತು ವರ್ತಕರ ಮಧ್ಯೆ ಸಂಘಟನೆ ಸೇತುವೆಯಾಗಿ ಸ್ಪಂದಿಸಿ ಕೆಲಸ ಮಾಡುತ್ತದೆ. ಮುಂದಿನ ದಿನಗಳಲ್ಲಿ ಸಮಸ್ಯೆಗಳ ನಿವಾರಣೆಗೆ ಆದ್ಯತೆ ಮೇಲೆ ಕರ್ತವ್ಯ ನಿರ್ವಹಿಸಿ ಸಂಘಕ್ಕೆ ಒಳ್ಳೆ ಹೆಸರು ತರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಪರವಾನಗಿ ಪಡೆದ ವರ್ತಕರನ್ನು ಸಂಘದ ಸದಸ್ಯರನ್ನಾಗಿ ಮಾಡಿಕೊಂಡು ಎಲ್ಲರಿಗೂ ಗುರುತಿನ ಚೀಟಿ ವಿತರಿಸುತ್ತೇವೆ. ಈ ಮೂಲಕ ಆರೋಗ್ಯ, ವಿಮೆ ಮುಂತಾದ ವರ್ತಕರ ಸiಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಹೇಳಿದರು.

ಉಪಾಧ್ಯಕ್ಷ ಎಂ.ಎಸ್ ನಾಗರಾಜ್ ಮಾತನಾಡಿ, ರೈತರಿಗೆ ನೆರವಾಗುವುದರ ಜೊತೆಗೆ ವರ್ತಕರ ಸಮಸ್ಯೆಗಳಿಗೆ ಸ್ಪಂದಿಸಿ ಕ್ರಿಯಾಶೀಲ ಚಟುವಟಿಕೆ ಮಾಡುವ ಮೂಲಕ ಸಂಘ ಸ್ಥಾಪನೆ ಮಾಡುವ ಉದ್ದೇಶ ಹೊಂದಲಾಗಿತ್ತು ಎಂದರು.

ಎಪಿಎಂಸಿ ಯಲ್ಲಿ ನೂರಾರು ಕೋಟಿ ವಹಿವಾಟು ನಡೆಸುವ ವರ್ತಕರಿಗೆ ನೆರವಾಗಲು ಇಂದು ಸಂಘವನ್ನು ಸ್ಥಾಪನೆ ಮಾಡಲಾಗಿದೆ. ಇದುವರೆಗೆ ವರ್ತಕರಿಗೆ ಸಂಘಟಿತ ವಲಯ ಇರಲಿಲ್ಲ. ಅಸಂಘಟಿತರಾಗಿ ವಹಿವಾಟು ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಖಜಾಂಚಿ ಉಮೇಶ್ ಮಾತನಾಡಿ ಸಂಘ ಸ್ಥಾಪನೆ ಮಾಡುವ ಮೂಲಕ ವರ್ತಕರ ಕುಂದುಕೊರತೆಗಳ ಬಗ್ಗೆ ಬೆಳಕು ಚೆಲ್ಲಲು ಅವಕಾಶವಾಗಿದೆ. ಇದರಲ್ಲಿ ಸಂಘ ಸ್ಥಾಪನೆ ಮೊದಲ ಹೆಜ್ಜೆ ಎನ್ನುವುದಕ್ಕಿಂತ ಕ್ರಾಂತಿಕಾರಿ ಬದಲಾವಣೆಗಳನ್ನು ವರ್ತಕರಲ್ಲಿ ಮೂಡಿಸುವ ಆಶಾ ಭಾವನೆಯನ್ನು ಸಂಘ ಮೂಡಿಸುತ್ತದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

ತರಕಾರಿ ವರ್ತಕರ ಸಂಘದ ಉಪಾಧ್ಯಕ್ಷರಾಗಿ ರವಿಕುಮಾರ್.ಡಿ.ಪಿ, ಪರಮೇಶ್.ಎನ್.ಎಂ, ಸಹಕಾರ್ಯದರ್ಶಿ ಪ್ರವೀಣ್‌ಕುಮಾರ್.ಎಂ.ಕೆ, ನಿರ್ದೇಶಕರುಗಳಾದ ಅಜೀಜ್, ಮನಸೂರ್, ಮಂಜುನಾಥ್.ಸಿ.ಎಂ, ಹರೀಶ್,ಡಿ.ಎಂ, ಹರೀಶ್.ಡಿ.ಎಚ್, ರಾಜು.ಡಿ.ಪಿ, ರೇವಣ್ಣ.ಕೆ, ಚಂದನ.ಸಿ.ಎಸ್ ಇವರುಗಳನ್ನು ಆಯ್ಕೆ ಮಾಡಲಾಗಿದೆ.

MK Vedanandamurthy has been elected as the new president of Vegetable Traders Association

About Author

Leave a Reply

Your email address will not be published. Required fields are marked *