September 20, 2024

ತೊಂದರೆ ನೀಡುವ ಅಧಿಕಾರಿಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ

0
ತಾಲೂಕು ಪಂಚಾಯಿತಿಯ ಡಾ. ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಕಂದಾಯ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ

ತಾಲೂಕು ಪಂಚಾಯಿತಿಯ ಡಾ. ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಕಂದಾಯ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ

ಚಿಕ್ಕಮಗಳೂರು: ಚಿಕ್ಕಮಗಳೂರು ಉಪವಿಭಾಗ ವ್ಯಾಪ್ತಿಗೆ ಬರುವ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಆಶ್ರಯ ಮತ್ತು ಸ್ಮಶಾನಕ್ಕೆ ಭೂಮಿ ಮೀಸಲು ಇಡಬೇಕೆಂಬ ಬಗ್ಗೆ ಬಹಳ ವ?ಗಳಿಂದ ಬೇಡಿಕೆ ಇದ್ದು ಈ ಕುರಿತು ನೂರು ಎಕ್ಕರೆ ಭೂಮಿಯನ್ನು ಸಿದ್ಧಪಡಿಸಿ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಎಚ್.ಡಿ ರಾಜೇಶ್ ತಿಳಿಸಿದರು.

ಅವರು ಇಂದು ಇಲ್ಲಿನ ತಾಲೂಕು ಪಂಚಾಯಿತಿಯ ಡಾ. ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಕಂದಾಯ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಭೂಮಿ ಮೀಸಲಿಡಲು ಇನ್ನು ಹಲವಾರು ಕ್ರಮಗಳಾಗಬೇಕಿದೆ ಜಂಟಿ ಸರ್ವೆ ಅಗತ್ಯವಿದೆ ಅರಣ್ಯ ಮತ್ತು ಗೋಮಾಳ ಒಟ್ಟಿಗೆ ಒಂದೇ ಸರ್ವೇ ನಂಬರ್‌ನಲ್ಲಿ ಇದ್ದ ಪರಿಣಾಮ ಈ ಕಾರ್ಯಕ್ಕೆ ಹಡ್ಡಿಯಾಗಿತ್ತು ಈ ತೊಡಕುಗಳನ್ನು ನಿವಾರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲಾಗಿದೆ ಎಂದರು.

ಜಂಟಿ ಸರ್ವೆ ಮಾಡಲು ಮತ್ತು ಸಮಿತಿ ರಚಿಸಲು ಸರ್ಕಾರಕ್ಕೆ ಅನುಮತಿಗಾಗಿ ಕಳಿಸಲಾಗಿದೆ ಸದಸ್ಯರು ಇಂದು ನಡೆದ ಸಭೆಯಲ್ಲಿ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ ಎಸ್ಸಿ.ಎಸ್ಟಿ. ಜನಾಂಗದವರಿಗೆ ಜಮೀನು ನೀಡಿಲ್ಲ, ಪಕ್ಕ ಪೋಡಿ ಯಾಗಿಲ್ಲ ಎಂಬಿತ್ಯಾದಿಗಳ ಕುರಿತು ತಿಳಿಸಿದ್ದು ಈ ಬಗ್ಗೆ ಕ್ರಮ ವಹಿಸುವಂತೆ ತಹಶೀಲ್ದಾರ್‌ರಿಗೆ ಸೂಚನೆ ನೀಡಿದ್ದೇನೆ ಎಂದರು.

ಕೆಲವು ಭಾಗದಲ್ಲಿ ಸ್ಮಶಾನ ಭೂಮಿ ಒತ್ತುವರಿಯಾಗಿದೆ ಎಂಬ ದೂರಗಳಿದ್ದು ಈ ಕುರಿತು ತೆರವುಗೊಳಿಸಲು ಆದೇಶಿಸಲಾಗಿದೆ ಕೆರೆ ಒತ್ತುವರಿ ಆಗಿದ್ದು ಗುಡ್ಡೆ ತೋಟ ಗ್ರಾಮ ಪಂಚಾಯಿತಿ ಸರ್ವೆ ನಂ.೪೪ರಲ್ಲಿ ೧೭ ಕುಟುಂಬಗಳಿದ್ದು ೨.೧೦ ಎಕ್ಕರೆ ಜಮೀನನ್ನು ಅಭಿವೃದ್ಧಿಪಡಿಸಿ ನೀಡಲು ಸೂಚನೆ ನೀಡುವುದಾಗಿ ವಿವರಿಸಿದರು.

ಕಾರ್ಲೆ ಗ್ರಾಮದಲ್ಲಿ ೨೦ ಕುಟುಂಬಗಳು ವಾಸವಿದ್ದು ರಸ್ತೆ ವಿದ್ಯುತ್ ಸಂಪರ್ಕ ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯ ಕಲ್ಪಿಸುವ ಸುಮಾರು ೪ ಕೋಟಿ ರೂ. ವೆಚ್ಚವಾಗಲಿದೆ ಈ ಬಗ್ಗೆ ತಾಪಂ, ಜಿಪಂ, ಶಾಸಕರ ಅನುದಾನ ಲಭ್ಯವಾಗದಿದ್ದರೆ ಸರ್ಕಾರಕ್ಕೆ ವಿಶೇಷ ಅನುಧಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಚಿಕ್ಕಮಗಳೂರು ಉಪವಿಭಾಗ ಮಟ್ಟದಲ್ಲಿ ಯಾವುದೇ ರೀತಿಯ ತೊಂದರೆಗಳಾಗದಂತೆ ಹಾಗೂ ದಲಿತ ಸಮುದಾಯದ ನಾಗರೀಕರು ಯಾವುದೇ ತೊಂದರೆ ಇದ್ದರೆ ನೇರವಾಗಿ ನಮ್ಮ ಕಛೇರಿಗೆ ಬಂದು ಸಮಸ್ಯೆ ಹೇಳಿಕೊಳ್ಳಲು ಮುಕ್ತ ಅವಕಾಶವಿದೆ ವಾಟ್ಸಪ್, ದೂರವಾಣಿ ಮೂಲಕವು ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಸರ್ಕಾರದ ಅನುದಾನದಿಂದ ಕೈಗೊಳ್ಳುವ ಸೌಲಭ್ಯಗಳನ್ನು ನೀಡುವಾಗ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ದೂರು ಬಂದರೆ ಅಂತಹ ಅಧಿಕಾರಿಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಅವರು ಫಲಾನುಭವಿಗಳು ಅರ್ಹರಿದ್ದರೆ ಸೌಲಭ್ಯಗಳನ್ನು ಖಂಡಿತ ಕೊಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಇಲಾಖೆ ಸಹಾಯಕ ನಿದೇಶಕರಾದ ಎಚ್.ಡಿ.ರೇವಣ್ಣ, ತಾ.ಪಂ ಕಾರ್ಯ ನಿರ್ವಹಣ ಅಧಿಕಾರಿ ತಾರನಾಥ್ ಉಪಸ್ಥಿತರಿದ್ದರು.

Revenue Sub-Division Level Awareness and Stewardship Committee Meeting

About Author

Leave a Reply

Your email address will not be published. Required fields are marked *