September 20, 2024

ನೈರುತ್ಯ ಶಿಕ್ಷಕರ, ಪದವೀಧರ ಕ್ಷೇತ್ರದ ಚುನಾವಣೆಗೆ ಹೆಸರು ನೋಂದಾಯಿಸಲು ನವೆಂಬರ್.6 ಕೊನೆಯ ದಿನ

0
ಜಿಲ್ಲಾಧಿಕಾರಿ ಮೀನಾ ನಾಗರಾಜ ಸುದ್ದಿಗೋಷ್ಠಿ

ಜಿಲ್ಲಾಧಿಕಾರಿ ಮೀನಾ ನಾಗರಾಜ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆಗಳು ನಡೆದಿದ್ದು ಅಧಿಕೃತ ನಮೂನೆಯಲ್ಲಿ ಮತದಾರರ ಹೆಸರನ್ನು ನೋಂದಾವಣೆ ಮಾಡಲು ನ.೬ ರಂದು ಕೊನೆಯ ದಿನವಾಗಿದ್ದು. ಈ ಅವಧಿಯಲ್ಲಿ ಅರ್ಹತೆ ಇರುವ ಶಿಕ್ಷಕರು ಮತ್ತು ಪದವೀಧರರು ತಮ್ಮ ಹೆಸರುಗಳನ್ನು ನೋಂದಾವಣೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ ತಿಳಿಸಿದರು.

ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಅವರು ನೈರುತ್ಯ ಮತ್ತು ಶಿಕ್ಷಕ ಪದವೀಧರ ಕ್ಷೇತ್ರದ ಚುನಾಯಿತ ಅವಧಿ ೨೦೨೪ರ ಜೂನ್ ೨೧ಕ್ಕೆ ಮುಕ್ತಾಯವಾಗಲಿದ್ದು ಈ ಅವಧಿಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಎಸ್.ಎಲ್.ಬೋಜೆ ಗೌಡರು ಸದಸ್ಯರಾಗಿ ಮುಂದುವರೆದಿದ್ದು ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ ಎಂದರು.

ಈ ಜಿಲ್ಲೆಯ ವ್ಯಾಪ್ತಿಗೆ ಬರುವ ನೈರುತ್ಯ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆಸುವ ಸಲುವಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಚುನಾವಣಾ ಆಯೋಗದ ನಿರ್ದೇಶನದಂತೆ ಇದೇ ಸೆಪ್ಟೆಂಬರ್ ೩೦ಕ್ಕೆ ಮತದಾರರ ನೋಂದಣಿಗೆ ಸಾರ್ವಜನಿಕ ಅಧಿಸೂಚನೆ ನೀಡುವುದು ಅಕ್ಟೋಬರ್ ೧೬ರಂದು ಪ್ರಕಟಣೆ ಹೊರಡಿಸುವುದು ಇದೇ ಅಕ್ಟೋಬರ್ ೨೫ರಂದು ಎರಡನೇ ಮರು ಪ್ರಕಟಣೆ ಹೊರಡಿಸಿ ನವೆಂಬರ್ ೬ರಂದು ನಿಗದಿತ ನಮೂನೆಯಲ್ಲಿ ಹೆಸರು ನೋಂದಾವಣೆಗೆ ಸೇರಿಸಲು ಕೊನೆಯ ದಿನಾಂಕವಾಗಿರುತ್ತದೆ ಎಂದು ಹೇಳಿದರು.

ಚುನಾವಣಾ ಆಯೋಗ ನಿಗಧಿಪಡಿಸಿರುವಂತೆ ಪದವೀಧರ ಕ್ಷೇತ್ರಕ್ಕೆ ಹೆಸರು ನೋಂದಾವಣೆ ಮಾಡಲು ನಮೂನೆ ೧೮ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನೋಂದಾವಣೆ ಮಾಡಲು ನಮೂನೆ ೧೯ನ್ನು ನಿಗದಿ ಪಡಿಸಿದ್ದು ಆಯೋಗ ಆರಂಭಿಸಿರುವ ನೋಂದಣಿ ವೆಬ್ ಸೈಟ್‌ನಲ್ಲಿ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು ನಿಗದಿಪಡಿಸಿರುವ ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸಬೇಕೆಂದು ತಿಳಿಸಿದರು.

ಪದವೀಧರ ಕ್ಷೇತ್ರಕ್ಕೆ ನೋಂದಾಯಿಸಿಕೊಳ್ಳಲು ಭಾರತದಲ್ಲಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯಗಳಿಂದ ಅಂಗೀಕರಿಸಲ್ಪಟ್ಟ ಮೂರು ವ?ದ ಪದವಿಗಳನ್ನು ಪೂರ್ಣಗೊಳಿಸಿ ಅಂತಿಮ ಪದವಿ ಧೃಡೀಕರಣ ಪತ್ರ ಹೊಂದಿರಬೇಕು ಎಂದರು.

ಶಿಕ್ಷಕರ ಕ್ಷೇತ್ರಕ್ಕೆ ನೋಂದಾವಣೆ ಮಾಡಿಕೊಳ್ಳಲು ಕನಿ? ಹೈಸ್ಕೂಲ್ ಹಂತದಿಂದ ಮೇಲ್ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಕಾಯಂ ಆಗಿ ನೇಮಕ ಮಾಡಿಕೊಂಡು ಶಿಕ್ಷಕರು ಮಾತ್ರ ಅರ್ಹತೆ ಪಡೆದಿರುತ್ತಾರೆ. ಹಂಗಾಮಿಯಾಗಿ ಅತಿಥಿ ಶಿಕ್ಷಕರಾಗಿ ಅಥವಾ ಇನ್ನುವುದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ಅವಕಾಶವಿಲ್ಲ ಕಾಯಂ ನೇಮಕಾತಿ ಹೊಂದಿದ ಶಿಕ್ಷಕರಿಗೆ ಮಾತ್ರ ಮತದಾನಕ್ಕೆ ಅವಕಾಶವಿದೆ ಎಂದು ಹೇಳಿದರು.

ನಿವೃತ್ತಿ ನಂತರ ಮತದಾರರ ಪಟ್ಟಿಯಲ್ಲಿ ನೋಂದಾವಣೆ ಮಾಡಿಕೊಳ್ಳಲು ಅವಕಾಶವಿದೆಯೇ ಎಂಬ ಬಗ್ಗೆ ಗಮನ ಸೆಳೆದಾಗ ಈ ಬಗ್ಗೆ ಚುನಾವಣಾ ಆಯೋಗದಿಂದ ನಿರ್ದೇಶನ ನೀಡಿರುವುದರಿಂದ ಈ ಸಂಬಂಧ ವಿವರಣೆ ಪಡೆದು ಸಾರ್ವಜನಿಕವಾಗಿ ಪ್ರಕಟಿಸುವುದಾಗಿ ತಿಳಿಸಿದರು.
ಅರ್ಜಿದಾರರು ತಮ್ಮ ಹೆಸರನ್ನು ನೋಂದಾವಣೆ ಮಾಡುವಾಗ ಅಂಗಿಕೃತ ಸಂಸ್ಥೆಯಿಂದ ಪಡೆದಿರುವ ದಾಖಲೆಗಳನ್ನು ಹಾಜರುಪಡಿಸಬೇಕು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಭಾರತೀಯ ಪಾಸ್ಪೋರ್ಟ್ ಚಾಲನಾ ಪರವಾಗಿ ಬ್ಯಾಂಕ್ ಖಾತೆ ಪಾಸ್ ಬುಕ್ ಇವುಗಳ ಯಾವುದಾದರೂ ಒಂದನ್ನು ಹಾಜರುಪಡಿಸಲು ಲಗತಿಸಬೇಕೆಂದು ಹೇಳಿದರು.

ಚುನಾವಣಾ ಆಯೋಗ ನಿಗಧಿಪಡಿಸಿರುವ ವೆಬ್ ಸೈಟ್ ಜಿoಡಿms ಜಿoಡಿ ಡಿegisಣಡಿಚಿಣioಟಿ e-ಖoಟಟs ಈ ವೆಬ್ ಸೈಟ್ ಮೂಲಕ ಅರ್ಜಿ ನಮೂನೆಗಳನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಆಯ ಶಿಕ್ಷಣ ಸಂಸ್ಥೆಗಳ ಮೂಲಕ ಅಥವಾ ನೇರವಾಗಿ ನಿಗದಿಪಡಿಸಿದ್ದ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ ಸೇರ್ಪಡೆಗೆ ಅವಕಾಶವಿರುವುದಿಲ್ಲ ಅರ್ಜಿಯಲ್ಲಿ ಮೊಬೈಲ್ ಸಂಖ್ಯೆ ನಮೂದಿಸುವುದು ಕಡ್ಡಾಯವಿಲ್ಲದಿದ್ದರೂ ಮಾಹಿತಿಯನ್ನು ವಿನಿಮಯಕ್ಕೆ ಮೊಬೈಲ್ ಸಂಖ್ಯೆ ನಮೂದಿಸುವಂತೆ ಸೂಚನೆ ನೀಡಲಾಗಿದೆ ಎಂದರು.

South West Graduate and Teacher Constituency Election

About Author

Leave a Reply

Your email address will not be published. Required fields are marked *