September 8, 2024

ಜಿಲ್ಲೆಯನ್ನು 2025ನೇ ವೇಳೆಗೆ ಕ್ಷಯರೋಗ ಮುಕ್ತ ಮಾಡಲು ಗುರಿ

0
ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಚಿಕ್ಕಮಗಳೂರು: ಜಿಲ್ಲೆಯನ್ನು ೨೦೨೫ನೇ ವೇಳೆಗೆ ಕ್ಷಯರೋಗ ಮುಕ್ತ ಮಾಡಲು ಗುರಿ ಹೊಂದಲಾಗಿದ್ದು ಈ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಅಶ್ವಥ್ ಬಾಬು ತಿಳಿಸಿದರು.

ಅವರು ಇಂದು ಪ್ರಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು.

ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಯೋಜನೆ ಅಡಿ ಇಲಾಖೆ ಸಿಬ್ಬಂದಿ ತಾಲೂಕುವಾರು ತಪಾಸಣೆ ನಡೆಸಿ ಜಿಲ್ಲೆಯಲ್ಲಿ ಒಟ್ಟು ೪೩೯ ಮಂದಿ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಚಿಕ್ಕಮಗಳೂರಿನಲ್ಲಿ ೧೪೪, ಕಡೂರು ೧೨೨, ತರೀಕೆರೆ, ಅಜ್ಜಂಪುರ ಸೇರಿ ೭೭, ಮೂಡಿಗೆರೆ, ಕಳಸ ೩೮, ಕೊಪ್ಪ ೨೨, ಎನ್.ಆರ್.ಪುರ ೩೦ ಹಾಗೂ ಶೃಂಗೇರಿಯಲ್ಲಿ ೬ ಕ್ಷಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಎಚ್.ಐ.ವಿ ಸೋಂಕಿತ ೨,೩೧೫ ರೋಗಿಗಳಿದ್ದು ಎಆರ್‌ಟಿ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ ಆಪ್ತ ಸಮಾಲೋಚನೆ ನಡೆಸಿ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ೭೨೮, ತರೀಕೆರೆ ೪೪೨, ಕಡೂರು ೬೩೦, ಮೂಡಿಗೆರೆ ೨೩೭, ಎನ್.ಆರ್ ಪುರ ೧೦೬, ಕೊಪ್ಪ ೧೩೬, ಶೃಂಗೇರಿ ೩೬, ಎಚ್.ಐ.ವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ರಾಷ್ಟ್ರೀಯ ತಂಬಾಕು ನಿಯಂತ್ರಣ ಅನು?ನ ೨೦೦೩ ರಿಂದ ಜಾರಿಯಲ್ಲಿದ್ದು ಈ ಬಗ್ಗೆ ಶಿಕ್ಷಣ ಸಂಸ್ಥೆಗಳಲ್ಲಿ ತಂಬಾಕು ಸೇವನೆಯಿಂದಾಗುವ ದು?ರಿಣಾಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸಲಾಗುತ್ತಿದೆ ಎಂದರು.

೧೮ ವ?ದೊಳಗಿನ ವ್ಯಕ್ತಿಗಳಿಗೆ ತಂಬಾಕು ಮಾರಾಟ ಮಾಡುವಂತಿಲ್ಲ ಶಿಕ್ಷಣ ಸಂಸ್ಥೆಗಳ ೧೦೦ ಮೀಟರ್ ಅಂತರ ಒಳಗೆ ಬೀಡಿ, ಸಿಗರೇಟ್ ,ಗುಟ್ಕಾ ಮುಂತಾದ ತಂಬಾಕು ಮಾರಾಟ ಮಾಡಲು ಅವಕಾಶ ಇಲ್ಲ ಗ್ರಾಮದಲ್ಲಿ ತಂಬಾಕು ಸೇವನೆ ಮಾಡದಂತೆ ಮನವೊಲಿಸಿ ಬಿಡಿಸುವ ಕುರಿತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗ್ರಾಮಗಳಲ್ಲಿ ತಂಬಾಕು ಮಾರಾಟ ನಿ?ಧ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ತಂಬಾಕು ಬೆಳೆಯುತ್ತಿರುವ ರೈತರ ಮನವೊಲಿಸಿ ಪರ್ಯಾಯ ಬೆಳೆಯನ್ನು ಬೆಳೆದು ಆರ್ಥಿಕ ಅಭಿವೃದ್ಧಿ ಹೊಂದಲು ಉತ್ತೇಜನ ನೀಡಲಾಗುತ್ತಿದೆ ಜಿಲ್ಲೆಯಲ್ಲಿ ಶೇಕಡ ೧೦೦ರ? ತಂಬಾಕು ನಿ?ಧಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಆಯು?ನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪ್ರತಿ ಸದಸ್ಯರಿಗೆ ೫ ಲಕ್ಷ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ೨ ಲಕ್ಷ ರೂ ಆರೋಗ್ಯ ವಿಮೆ ಜಾರಿಯಲ್ಲಿದ್ದು ಪಡಿತರ ಚೀಟಿ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ಬಾಪೂಜಿ ಸೇವಾ ಕೇಂದ್ರ, ಗ್ರಾಮ ೧ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ ಎಂದರು.

ರಸ್ತೆ ಅಪಘಾತ, ಹೃದಯಘಾತ ಮುಂತಾದ ತೊಂದರೆಗಳಿಗೆ ಒಳಗಾದವರು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು ಈಗಾಗಲೇ ೧೦ ಲಕ್ಷ ಕಾರ್ಡ್ ವಿತರಣೆಗೆ ಗುರಿ ಹೊಂದಿದ್ದು ೭ ಲಕ್ಷ ಕಾರ್ಡ್ ವಿತರಿಸಲಾಗಿದೆ ನಗರದಲ್ಲಿ ಆಶ್ರಯ ಆಸ್ಪತ್ರೆ ಕೆ.ಆರ್.ಎಸ್ ಆಸ್ಪತ್ರೆಯಲ್ಲಿ ಆಯು?ನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡುದಾರರಿಗೆ ಚಿಕಿತ್ಸೆ ದೊರೆಯಲಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಅಕ್ಟೋಬರ್ ೧೦ರ ವರೆಗೆ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದ್ದು ೧೮೭ ಡೆಂಗ್ಯೂ ಪ್ರಕರಣ, ಚಿಕನ್ ಗುನ್ಯಾ ೧ ಚಿಕ್ಕಮಗಳೂರು, ಮೂಡಿಗೆರೆ, ಕಡೂರಿನಲ್ಲಿ ಮಲೇರಿಯಾ ತಲಾ ಒಂದು ಪ್ರಕರಣ ಪತ್ತೆಯಾಗಿದ್ದು ಯಾವುದೇ ಸಾವುಗಳು ಆಗಿರುವ ವರದಿ ಆಗಿಲ್ಲ ಎಂದು ಸ್ಪ? ಪಡಿಸಿದರು.

ಪ್ರತಿ ವ? ಆರೋಗ್ಯ ಇಲಾಖೆ ಸೇವೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಲಭ್ಯವಾಗಬೇಕೆಂಬ ದೃಷ್ಟಿಯಿಂದ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಆರ್.ಸಿ.ಎಚ್ ಕಾರ್ಯಕ್ರಮದಡಿ ತಾಯಿ ಮಗು ಆರೋಗ್ಯಕ್ಕೆ ಸಂಬಂಧಿಸಿದ ೩೬ ವಿವಿಧ ರೀತಿಯಲ್ಲಿ ದಾಖಲಿಸಲಾಗುತ್ತಿದೆ ಎಂದು ಹೇಳಿದರು

ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪುರು?ರಿಗೆ ನೋಸ್ಕಾಲ್ ವ್ಯಾಸಟ್ಕಮಿ ಸಂತಾನ, ಶಸ್ತ್ರ ಚಿಕಿತ್ಸೆ ಮಹಿಳೆಯರಿಗೆ ಉದರ ದರ್ಶಕ ಹರಣ ಶಸ್ತ್ರ ಚಿಕಿತ್ಸೆ, ಟ್ಯೂ ಬೆಕ್ಟಮಿ ಅಂತರ ವಿಧಾನ ಪಿಪಿಐಯುಸಿಡಿ, ಐ.ಯು.ಸಿ.ಡಿ ಮಹಿಳೆಯರಿಗೆ ನುಂಗುವ ಮಾತ್ರೆ ಮಾಲಾ ಎನ್ ಛಾಯಾ ಮಾತ್ರೆ ವಾರಕ್ಕೊಮ್ಮೆ ಮೂರು ತಿಂಗಳಿಗೊಮ್ಮೆ ಅಂತರ ಚುಚ್ಚುಮದ್ದು ಪುರು?ರಿಗೆ ನಿರೋಧ್ ನೀಡಲಾಗುವುದು ಎಂದರು.

ಕಾರ್ಯಕ್ರಮವನ್ನು ಪ್ರಸ್ ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ||ಶಶಿಕಲಾ, ಡಾ||ಬಾಲಕೃ?, ಡಾ|| ಭರತ್ ಕುಮಾರ್, ಡಾ|| ಸೀಮಾ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ ಲಲಿತಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ ಉಪಸ್ಥಿತರಿದ್ದರು.

A program to create awareness about health department programs

About Author

Leave a Reply

Your email address will not be published. Required fields are marked *

You may have missed