September 8, 2024

ನೂತನ ಆರ್.ಟಿ.ಓ. ಅಧಿಕಾರಿ ರಾಕೇಶ್‌ಕುಮಾರ್‌ಗೆ ಕರವೇ ಅಭಿನಂದನೆ

0
ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಯಾಗಿ ಆರ್.ರಾಕೇಶ್‌ಕುಮಾರ್ ಅವರು ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ವತಿಯಿಂದ ಮುಖಂಡರುಗಳು ಕಚೇರಿಗೆ ತೆರಳಿ ಗುರುವಾರ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು.

ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಯಾಗಿ ಆರ್.ರಾಕೇಶ್‌ಕುಮಾರ್ ಅವರು ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ವತಿಯಿಂದ ಮುಖಂಡರುಗಳು ಕಚೇರಿಗೆ ತೆರಳಿ ಗುರುವಾರ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು.

ಚಿಕ್ಕಮಗಳೂರು: ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಯಾಗಿ ಆರ್.ರಾಕೇಶ್‌ಕುಮಾರ್ ಅವರು ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ವತಿಯಿಂದ ಮುಖಂಡರುಗಳು ಕಚೇರಿಗೆ ತೆರಳಿ ಗುರುವಾರ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ನೂರುಲ್ಲಾಖಾನ್ ಮಾತನಾಡಿ ಸೆ.೦೪ ರಂದು ಕರವೆ (ಶಿವರಾಮೇಗೌಡ) ಬಣದಿಂದ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಲಂಚದ ಹಾವಳಿ ತಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಪರಿಣಾಮ ಆರ್.ಟಿ.ಓ. ಅಧಿಕಾರಿ ಮಧುರಾರವರನ್ನು ಸಕಲೇಶಪುರಕ್ಕೆ ಪನೀಷ್‌ಮೆಂಟ್ ಡ್ಯೂಟಿ ನೀಡಿ ವರ್ಗಹಿಸಿದೆ ಎಂದರು.

ಸಾಗರದಿಂದ ನೂತನ ಆರ್.ಟಿ.ಓ ಅಧಿಕಾರಿಯಾಗಿ ರಾಕೇಶ್ ರವರು ಅಧಿಕಾರ ಸ್ವೀಕರಿಸಿದ್ದು ಭ್ರಷ್ಠಾಚಾರ ನಿರ್ಮೂಲನದ ಭಾಗವಾಗಿ ಕರವೆ ಹೋರಾಟಕ್ಕೆ ಸರ್ಕಾರ ಬೆಂಬಲಿಸಿ ನೂತನ ಅಧಿಕಾರಿಯನ್ನು ನೇಮಕ ಮಾಡಿರುವುದನ್ನು ಸ್ವಾಗತಿಸಿದರು. ಕರವೆ ಪದದಾಧಿಕಾರಿಗಳು ನೂತನ ಆರ್.ಟಿ.ಓ ರಾಕೇಶ್ ಅವರಿಗೆ ಸ್ವಾಗತಕೋರಿ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ನಡೆದಿರುವ ಭ್ರಷ್ಠಾಚಾರಗಳು ಮುಂದೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ಆರ್.ಟಿ.ಓ. ಅಧಿಕಾರಿ ಆರ್.ರಾಕೇಶ್‌ಕುಮಾರ್ ಸಾರಿಗೆ ಇಲಾಖೆಯ ಸಂಬಂಧಿಸಿದ ಕೆಲಸಗಳಿಗೆ ಮೊದಲು ಮಧ್ಯವರ್ತಿಗಳನ್ನು ಭೇಟಿ ಮಾಡದೆ ನೇರವಾಗಿ ಸಿಬ್ಬಂದಿಯನ್ನು ಭೇಟಿ ಮಾಡಿ ಅವರು ಸ್ಫಂದಿಸದಿದ್ದರೆ ತಮ್ಮನ್ನು ಭೇಟಿ ಮಾಡಿದರೆ ತಕ್ಷಣ ವಾಹನ ಮಾಲಿಕರ ಸಮಸ್ಯೆಗಳಿಗೆ ಸ್ಫಂದಿಸುತ್ತೆನೆ ಆರ್.ಟಿ.ಓ ಕಛೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿತ್ತು ಈಗ ನಿಯಂತ್ರಣ ಮಾಡಿದೇವೆ ಮುಂದುವರೆದರೆ ಸಿಬ್ಬಂಧಿಗಳು ಲಂಚಕ್ಕೆ ಬೇಡಿಕೆ ಇಡದೆ ಕೆಲಸ ಮಾಡಬೇಕೆಂದು ಎಚ್ಚರಿಸಿದರು.

ದಿನದ ೨೪ ಗಂಟೆಯು ತಮ್ಮ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸಾರ್ವಜನಿಕರು ಸಂಪರ್ಕಿಸಿದರೆ ತಮ್ಮ ಕೆಲಸಗಳನ್ನು ಸರ್ಕಾರಿ ಆದೇಶದನ್ವಯ ಮಾಡಿಕೊಡಲು ಬದ್ದವಾಗಿದ್ದು ಇದಕ್ಕೆ ಸಾರ್ವಜನಿಕರ ಸಹಕರಿಸಬೇಕೆಂದು ಮನವಿ ಮಾಡಿದರು.

ವಾಹನಗಳ ನಂಬರ್ ಪ್ಲೇಟ್ ಬದಲಾವಣೆಗೆ ಈಗಾಗಲೆ ಆದೇಶವಾಗಿದ್ದು ವಾಹನ ಮಾಲಿಕರು ನಿಗಧಿತ ಅವಧಿಯೊಳಗೆ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಿಕೊಂಡು ಇಲಾಖೆಯೊಂದಿಗೆ ಸಹಕರಿಸಬೇಕು ನಂಬರ್ ಪ್ಲೇಟ್ ಬದಲಾವಣೆ ಕಳ್ಳತನ, ರಸ್ತೆ ಅಪಘಾತಗಳು, ಕೊಲೆ ಪ್ರಕರಣಗಳು ಮಾಹಿತಿ ಪೂರಕವಾಗಿ ಲಭ್ಯವಾಗಲು ಸಹಕಾರವಾಗುತ್ತದೆ ಎಂದರು.

ಚಿಕ್ಕಮಗಳೂರು ಪ್ರವಾಸಿ ತಾಣಗಳ ಜಿಲ್ಲೆಯಾಗಿದ್ದು ದತ್ತಪೀಠ ಮಾರ್ಗದಲ್ಲಿ ಹಳೇ ಜೀಪುಗಳಲ್ಲಿ ಪ್ರವಾಸಿಗರನ್ನು ತುಂಬಿಕೊಂಡು ಸಂಚರಿಸುತ್ತಿವೆ ಈ ಕುರಿತು ಪ್ರಶ್ನೆಸಿದಾಗ ಹಳೇ ಖಾಸಗಿ ವಾಹನಗಳನ್ನು ಗುಜರಿಗೆ ಹಾಕುವಂತಹ ಯಾವುದೇ ಆದೇಶವನ್ನು ಸರ್ಕಾರ ನೀಡಿಲ್ಲ, ಶಾಲಾ ವಾಹನ, ಸಾರಿಗೆ ಬಸ್‌ಗಳು ಮತ್ತು ಸರ್ಕಾರಿ ಇಲಾಖೆ ವಾಹನಗಳಿಗೆ ಅನ್ವಯವಾಗುವಂತೆ ಸರ್ಕಾರ ಆದೇಶ ನೀಡಿದೆ ಎಂದು ಹೇಳಿದರು.

ಹಳೇ ವಾಹನಗಳಿಗೆ ಮಾತ್ರ ನಂಬರ್ ಪ್ಲೇಟ್ ಬದಲಿಸಲು ಸೂಚನೆ ನೀಡಿದ್ದು ಹೊಸವಾಹನಗಳಲ್ಲಿ ಈಗಾಗಲೇ ನೂತನ ವ್ಯವಸ್ಥೆಯಲ್ಲಿಯೇ ನಂಬರ್ ಪ್ಲೇಟ್‌ಗಳು ಬದಲಾಗಿ ಬರುತ್ತಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಉಪಾಧ್ಯಕ್ಷ ಶರತ್, ಯುವಘಟಕದ ಅಧ್ಯಕ್ಷ ಮಂಜುನಾಥ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ರಕ್ಷಿತ್, ಆಟೋ ಸಂಘದ ನಗರಾಧ್ಯಕ್ಷ ಈಶ್ವರ್, ಸಿಂದಿಗೆರೆ ಅಧ್ಯಕ್ಷ ಯೋಗೀಶ್, ಮುಖಂಡರುಗಳಾದ ಅಶ್ವತ್, ನಟರಾಜ್, ರಮೇಶ್, ಪ್ರಶಾಮತ್, ದಿಕ್ಷಿತ್, ಪುನೀತ್, ಪವನ್, ದಿಲೀಪ್, ವರುಣ್ ಮತ್ತಿತರರು ಹಾಜರಿದ್ದರು.

New RTO Congratulations to Officer Rakesh Kumar

About Author

Leave a Reply

Your email address will not be published. Required fields are marked *

You may have missed