September 20, 2024

ಅ.19 ಕ್ಕೆ ವಿದ್ಯುತ್ ಲೋಡ್ ಶೆಡ್ಡಿಂಗ್ ನಿಲ್ಲಿಸಲು ಆಗ್ರಹಿಸಿ ರೈತ ಸಂಘ ಪ್ರತಿಭಟನೆ

0

????????????????????????????????????

ಚಿಕ್ಕಮಗಳೂರು:  ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ಆಗ್ರಹಿಸಿ ಹಾಗೂ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದನ್ನು ಖಂಡಿಸಿ ಅ.೧೯ ರಂದು ಗುರುವಾರ ಇಲ್ಲಿನ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆಯಾಗಿರುವುದರಿಂದ ಮುಂಗಾರು ಮತ್ತು ಹಿಂಗಾರು ಎರಡು ಹಂಗಾಮಿನಲ್ಲೂ ರೈತರು ಬೆಳೆಯನ್ನು ಬೆಳೆಯಲಾಗದ ಪರಿಸ್ಥಿತಿ ಉಂಟಾಗಿದೆ ಎಂದರು.

ಅಕಾಲಿಕ ಮಳೆಯಿಂದ ಮುಂಗಾರು ಬೆಳೆಗಳಾದ ಆಲೂಗಡ್ಡೆ, ಟಮೋಟೊ, ಮೆಣಸಿನ ಕಾಯಿ, ಬೀನ್ಸ್ ಸೇರಿದಂತೆ ಯಾವುದೇ ತರಕಾರಿ ಬೆಳೆಗಳು ರೈತರಿಗೆ ಲಾಭ ತಂದು ಕೊಟ್ಟಿಲ್ಲ ಭತ್ತದ ಸಸಿಗಳು ಮಡಿಯಲ್ಲೇ ಒಣಗಿ ಹೋಗಿವೆ ರಾಗಿ ಮೊಳಕೆಯಲ್ಲೇ ಮುರುಟಿದೆ, ಜೋಳದ ತೆನೆ ಕಾಳು ಗಟ್ಟದೆ ಒಣಗಿ ನಿಂತಿದೆ, ಹಾಕಿದ ಬೀಜ ಗೊಬ್ಬರ ಔ?ಧಿ ಬೇಸಾಯ ಕಳೆ ಸೇರಿದಂತೆ ಎಲ್ಲಾ ಖರ್ಚು ರೈತನ ತಲೆಯ ಮೇಲೆ ಬಂದು ಕುಳಿತಿದೆ ತೆಂಗು, ಅಡಿಕೆ, ಕಾಫಿ, ಮೆಣಸು, ಏಲಕ್ಕಿಯಂತಹ ಬೆಳೆಗಳು ಮಳೆಯ ಅಭಾವದಿಂದ ಸೊರಗಿ ನಿಂತಿವೆ ಎಂದು ಹೇಳಿದರು.

ಮಲೆನಾಡಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ನೀರಿಗೆ ಅಹಾಕಾರ ಎದುರಾಗುವ ಪರಿಸ್ಥಿತಿ ತಲೆದೋರಿದೆ ತುಂಗ, ಭದ್ರಾ, ಯಗಚಿ, ಹೇಮಾವತಿ ನದಿಗಳ ನೀರಿನ ಮೂಲಗಳು ಬತ್ತುತ್ತಿವೆ ಇದೇ ರೀತಿ ಮುಂದುವರೆದರೆ ಕೆಲವೇ ದಿನಗಳಲ್ಲಿ ಮಲೆನಾಡಿಗೂ ಕುಡಿಯುವ ನೀರಿಗೆ ತೊಂದರೆಯಾಗಲಿದೆ ಬಯಲು ಪ್ರದೇಶದಲ್ಲಿಯ ಕೆರೆಕಟ್ಟೆಗಳು ಬರೆದಾಗುತ್ತಿವೆ ಅಂತರ್ಜಲ ಮಟ್ಟ ಕುಸಿಯುತ್ತಿದೆ ದನ ಕರುಗಳಿಗೆ ಮೇವು ನೀರಿಗೆ ತೊಂದರೆಯಾಗುವ ಸ್ಥಿತಿ ಎದುರಾಗಿದೆ ಎಂದರು.

ವಿದ್ಯುತ್ ಕಣ್ಣಮುಚ್ಚಾಲೆಯಿಂದ ಅಂತರ್ಜಲ ಬಳಕೆ ಮಾಡಿಕೊಂಡು ಕೊಳವೆಬಾವಿ ಮುಖಾಂತರ ನೀರಾವರಿ ಕಲ್ಪಿಸಿ ಕೊಂಡು ಅಲ್ಪಸ್ವಲ್ಪ ದನ ಕರುಗಳಿಗೆ ಮೇವು ದಂತಹ ಸಂಕ?ಕ್ಕೆ ರೈತರು ಗುರಿಯಾಗಿದ್ದಾರೆ ಎಂದರು.

ಈಗಾಗಲೇ ಹಿಂಗಾರಿನಲ್ಲಿಯೂ ಮಳೆ ವಿಫಲವಾದ ಕಾರಣ ಹಿಂಗಾರಿ, ಮುಂಗಾರಿನ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಮಳೆ ಬಂದರೆ ಕೆರೆಕಟ್ಟೆಗಳಿಗೆ ಅಲ್ಪಸ್ವಲ್ಪ ನೀರಾಗಬಹುದು ಆದರೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಿಲ್ಲ ಇಂತಹ ಸಂದರ್ಭದಲ್ಲಿ ಸರ್ಕಾರ ಸಂಪೂರ್ಣ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಸಮರೋಪಾದಿಯಲ್ಲಿ ಬರ ನಿರ್ವಹಣೆಗೆ ಕಾರ್ಯಕ್ರಮ ರೂಪಿಸುವಂತೆ ಆಗ್ರಹಿಸಿದರು.

ಕೂಡಲೆ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ವೈಜ್ಞಾನಿಕವಾಗಿ ಬೆಳೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದ ಅವರು ರೈತರ ಸಾಲ ವಸೂಲಾತಿ ನಿಲ್ಲಿಸಿ ಸಾಲ ಮನ್ನಾ ಮಾಡಬೇಕು ಬೆಳೆ ವಿಮೆ ಮಾಡಿರುವ ರೈತರಿಗೆ ಬೆಳೆ ವಿಮೆ ಶೀಘ್ರ ವಿತರಿಸಬೇಕು ಬರ ಪರಿಹಾರ ಕಾಮಗಾರಿಗಳ ಮೂಲಕ ಕೃಷಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವಂತೆ ಒತ್ತಾಯಿಸಿದರು.

ವಿದ್ಯುತ್ ಕಣ್ಣ ಮುಚ್ಚಾಲೆ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಸರಬರಾಜಾಗದೆ ಕೊಳವೆ ಬಾವಿಗಳ ಮುಖಾಂತರ ನೀರಾವರಿ ಮಾಡಿಕೊಂಡಿರುವ ರೈತರಿಗೆ ತುಂಬಾ ನ?ವಾಗುತ್ತಿದೆ ವಿದ್ಯುತ್ ಲೋಡ್ ಶೆಡ್ಡಿಂಗ್ ಪರಿಣಾಮದಿಂದ ರೈತರು ಹೈರಾಣಾಗಿದ್ದಾರೆ. ರೈತರಿಗೆ ಹಗಲು ಹೊತ್ತಿನಲ್ಲಿ ೮ಗಂಟೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿದರು.

ರೈತರು ಈಗಾಗಲೆ ಸಂಕ?ದ ಪರಿಸ್ಥಿತಿಯಲ್ಲಿದ್ದು ರೈತರ ನೆರವಿಗೆ ಧಾವಿಸಬೇಕಾದ ಸರ್ಕಾರ ಸೆ. ೨೨ರ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳುವ ರೈತರಿಗೆ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಬೇಕು ಎಂಬ ನಿಯಮ ಜಾರಿಗೆ ತಂದಿರುವುದು ರಾಜ್ಯ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದರು.

ಒಂದು ಸ್ಥಾವರಕ್ಕೆ ಸಂಪರ್ಕ ಕಲ್ಪಿಸಿಕೊಳ್ಳಲು ಸುಮಾರು ೮ ರಿಂದ ೧೦ ಲಕ್ಷದವರೆಗೆ ಹಣ ಖರ್ಚು ಮಾಡಿ ಕಂಬ, ವೈರು, ವಿದ್ಯುತ್ ಪರಿವರ್ತಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ, ಕೂಡಲೇ ಈ ನಿಯಮಗಳಿಗೆ ತಿದ್ದು ಪಡಿಮಾಡಿ ಹಿಂದಿನಂತೆಯೇ ಸರ್ಕಾರವೇ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಎಂ.ಬಿ ಚಂದ್ರಶೇಖರ್, ಬಸವರಾಜು, ಶಿವಣ್ಣ ಲೋಕೇಶ್, ದಯಾನಂದ್, ಎಚ್.ಡಿ ಉಮೇಶ್ ಉಪಸ್ಥಿತರಿದ್ದರು.

Farmers union protest demanding to stop electricity load shedding on A.19

 

About Author

Leave a Reply

Your email address will not be published. Required fields are marked *