September 20, 2024

ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷರ ರಾಜೀನಾಮೆ ಹೈಡ್ರಾಮಾ

0
 ವರಸಿದ್ದಿ ವೇಣುಗೋಪಾಲ್

 ವರಸಿದ್ದಿ ವೇಣುಗೋಪಾಲ್

ಚಿಕ್ಕಮಗಳೂರು: ನಗರಸಭೆಯಲ್ಲಿ ಅಧ್ಯಕ್ಷರ ರಾಜೀನಾಮೆ ಪ್ರಕ್ರಿಯೆ ಹೈಡ್ರಾಮಾ ಸಾಕ್ಷಿ ಆಗುತ್ತಿದೆ. ಮಾಜಿ ಸಚಿವ ಸಿ.ಟಿ.ರವಿಗೆ ಅಪ್ತ ವರಸಿದ್ದಿ ವೇಣುಗೋಪಾಲ್  ಕೈಕೊಟ್ರಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಎರಡನೇ ಬಾರಿಯೂ ರಾಜೀನಾಮೆ ನೀಡಿ ವಾಪಸ್ ಪಡದಿರುವ ಅಧ್ಯಕ್ಷ  ವರಸಿದ್ದಿ ವೇಣುಗೋಪಾಲ್ ನಡೆಗೆ ಜಿಲ್ಲಾ ಬಿಜೆಪಿ ಕೆಂಡಮಂಡಲವಾಗಿದೆ.  ಕೊಟ್ಟ ಮಾತು ಮರೆತು 2 ಬಾರಿ ರಾಜೀನಾಮೆ ನೀಡಿ ಇನ್ನೇನು ಅಂಗೀಕಾರವಾಗುವಷ್ಟರಲ್ಲಿ ವಾಪಸ್ ಪಡೆದು ನಾಪತ್ತೆಯಾಗಿದ್ದಾರೆ. ಇದು ಬಿಜೆಪಿ ನಗರಸಭೆ ಸದಸ್ಯರ ಕಣ್ಣನ್ನ ಕೆಂಪಾಗಿಸಿದ್ದು. ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.

ಆವತ್ತು ಮೊದಲ ಬಾರಿಗೆ ಅಧಿಕಾರ ಹಿಡಿದ ವೇಣುಗೋಪಾಲ್ 30 ತಿಂಗಳ ಬಳಿಕ ರಾಜೀನಾಮೆ ನೀಡಬೇಕಿತ್ತು. ಆದ್ರೆ, ಈಗ ವೇಣುಗೋಪಾಲ್ ರಾಜೀನಾಮೆ ನೀಡದೆ ಆಟವಾಡಿಸ್ತಿದ್ದಾರೆ. ರಾಜೀನಾಮೆ ನೀಡೋದು. ವಾಪಸ್ ಪಡೆಯೋದು. ಹೀಗೆ ಅಧ್ಯಕ್ಷರಗಾದಿಗಾಗಿ ಹೈಡ್ರಾಮ ಮಾಡ್ತಿದ್ದಾರೆ. ಇದು ಬಿಜೆಪಿ ಸದಸ್ಯರ ಕಣ್ಣನ್ನ ಕೆಂಪಾಗಿಸಿದ್ದು ಮಾತು ತಪ್ಪಿದ ಅಧ್ಯಕ್ಷರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಸಭೆ ಮೇಲೆ ಸಭೆ ಮಾಡಿದ್ದಾರೆ. ಅಧ್ಯಕ್ಷರು ಕೊಟ್ಟ ಮಾತನ್ನ ಉಳಿಸಿಕೊಳ್ಳದಿದ್ದರೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳೋದಕ್ಕೂ ಸಿದ್ಧವಿದೆ ಅಂತಾರೆ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ.

ಬಿಜೆಪಿಗರ ಈ ಹೈಡ್ರಾಮದ ಆಟ ಇದೇ ಮೊದಲೇನಲ್ಲ. 2016ರಲ್ಲಿ ಮದುವೆಯಾದ ತಕ್ಷಣ ಚಿಕ್ಕ ವಯಸ್ಸಿಗೆ ಜಿಪಂ ಅಧ್ಯಕ್ಷೆಯಾಗಿದ್ದ ಚೈತ್ರ ಮಾಲತೇಶ್ ಕೂಡ ಅಧಿಕಾರದ ಅವಧಿ ಮುಗಿಯುತ್ತಿದ್ದಂತೆ ಬಿಜೆಪಿಗೆ ಕಾನೂನಿನ ಪಾಠ ಹೇಳಿದ್ರು. ತದನಂತರ ಮತ್ತದೇ ಜಿಪಂ ಅಧ್ಯಕ್ಷೆಯಾದ ಸುಜಾತ ಕೃಷ್ಣಪ್ಪ ಕೂಡ ಬಿಜೆಪಿ ವರಿಷ್ಠರಿಗೆ ಸೆಡ್ಡು ಹೊಡೆದು ರಾಜೀನಾಮೆ ನೀಡಿಲ್ಲ ಅಂತ ತೊಡೆ ತಟ್ಟಿದ್ರು. ಆಮೇಲೆ ಇಬ್ಬರನ್ನೂ ಪಕ್ಷದಿಂದ ಉಚ್ಛಾಟನೆ ಮಾಡಿದ್ರು.

ಇದೀಗ, ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಕೂಡ ಅದೇ ದಾರಿಯಲ್ಲಿದ್ದು ಎರಡು ಬಾರಿ ರಾಜೀನಾಮೆ ನೀಡಿ ಅಂಗೀರಕಾರವಾಗುವ ಸಮಯದಲ್ಲಿ ರಾಜೀನಾಮೆ ನೀಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಟ್ರಿಪ್ ಹೋಗಿದ್ದಾರೆ. ಇದು ವೇಣು ಬಳಿಕ ಅಧ್ಯಕ್ಷರಾಗಬೇಕಿದ್ದ ಮಧು ಹಾಗೂ ರಾಜು ಎಂಬ ಸದಸ್ಯರನ್ನ ರೊಚ್ಚಿಗೆಬ್ಬಿಸಿದೆ. ಸಿ.ಟಿ.ರವಿ ಎದುರಿಗೆ ನಡೆದಿದ್ದ ಒಪ್ಪಂದದ ಪ್ರಕಾರವೂ ರವಿ ಆಪ್ತ ನಡೆದುಕೊಳ್ಳದಿರೋದರದನ್ನ ನೋಡಿದ್ರೆ ಬಿಜೆಪಿಯನ್ನ ಒಡೆದು ಆಳುವ ನೀತಿಗೆ ಕಾಂಗ್ರೆಸ್ಸಿಗರೇ ವೇಣು ಬೆನ್ನಿಗೆ ನಿಂತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಆದ್ರೆ, ಬಿಜೆಪಿ ನೋಟಿಸ್ ನೀಡೋದಕ್ಕೆ ಸಿದ್ಧವಾಗಿದ್ದು ರಾಜೀನಾಮೆ ನೀಡದಿದ್ದರೆ ಶಿಸ್ತು ಕ್ರಮ ಗ್ಯಾರಂಟಿ ಎಂಬಂತಾಗಿದೆ.

ಒಟ್ಟಾರೆ, ವೇಣುಗೋಪಾಲ್ ಯಾವ ಕಾರಣಕ್ಕೆ ರಾಜೀನಾಮೆ ನೀಡಲು ಹಿಂದೇಟು ಹಾಕ್ತಿದ್ದಾರೋ ಗೊತ್ತಿಲ್ಲ. ಈ ಮಧ್ಯೆ ವೇಣು ಸಿ.ಟಿ.ರವಿಗೆ ಕೈಕೊಟ್ಟು ಕೈ ಹಿಡಿಯುತ್ತಾರೆಂಬ ಸುದ್ದಿಯೂ ಚಾಲ್ತಿಯಲ್ಲಿದೆ. ಆದ್ರೆ, 20 ವರ್ಷ ಬಿಜೆಪಿಗಾಗಿ ದುಡಿದ ವೇಣುಗೋಪಾಲ್ ಸಿ.ಟಿ.ರವಿ ಸೋತ ಕೂಡಲೇ ಅವರ ಎದುರಿಗೆ ಆದ ಒಪ್ಪಂದದ ಬಗ್ಗೆಯೂ ಈ ರೀತಿ ಹೈಡ್ರಾಮ ಮಾಡುತ್ತಿದ್ದಾರೆ ಅಂದ್ರೆ ಹೊಸ ರಾಜಕೀಯದ ಗಾಳಿ ಅಂತ ಬಿಜೆಪಿಗರೇ ಮಾತನಾಡುತ್ತಿದ್ದಾರೆ. ಆದ್ರೆ, ಟ್ರಿಪ್ ಹೋಗಿರೋ ವೇಣುಗೋಪಾಲ್ ಬಂದು ಉತ್ತರ ಕೊಡ್ತೀನಿ ಅಂತ ಫೆಸ್ಬುಕ್ ಬರ್ಕೊಂಡಿದ್ದಾರೆ. ಬಂದ್ ಮೇಲೆ ರಾಜೀನಾಮೆ ನೀಡ್ತಾರೋ ಅಥವ ಮತ್ತಿನ್ಯಾವ ದಾಳ ಉರುಳಿಸುತ್ತಾರೋ ಕಾದುನೋಡ್ಬೇಕು.

President’s resignation is a hydra in Chikmagalur Municipal Council

About Author

Leave a Reply

Your email address will not be published. Required fields are marked *