September 20, 2024
ಶ್ರೀ ವಿಜಯಪುರ ದುರ್ಗ ಸೇವಾಸಮಿತಿಯಿಂದ ಸುದ್ದಿಗೋಷ್ಠಿ

ಶ್ರೀ ವಿಜಯಪುರ ದುರ್ಗ ಸೇವಾಸಮಿತಿಯಿಂದ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಶ್ರೀ ವಿಜಯಪುರ ದುರ್ಗ ಸೇವಾಸಮಿತಿ, ನಂದಿಟ್ರಸ್ಟ್ ವತಿಯಿಂದ ೨೯ನೇ ವರ್ಷದ ಶ್ರೀ ದುರ್ಗಾ ಮಾತೆಯ ಶರನ್ನವರಾತ್ರಿ ಅಂಗವಾಗಿ ಅ.೨೧ ರಂದು ಅಂತರ್ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಮಿತಿ ಗೌರವ ಅಧ್ಯಕ್ಷ ಅನಿಲ್‌ಕುಮಾರ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿಮ, ಈ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳು ಆಗಮಿಸುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಹಾಗೂ ನಗರದ ವಿಜಯಪುರದಲ್ಲಿ ನಡೆಯಲಿರುವ ಶರನ್ನವ ರಾತ್ರಿ ಮಹೋತ್ಸವದಲ್ಲಿ ಭಕ್ತಾಧಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಅಂತರ್ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ೧೫ ಸಾವಿರ ರೂ ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ೧೦ ಸಾವಿರ ರೂ ಹಾಗೂ ತೃತೀಯ ಬಹುಮಾನ ೫ ಸಾವಿರ ರೂ ನಗದು ಮತ್ತು ಟ್ರೋಫಿ ನೀಡಲಾಗುವುದೆಂದು ಮಾಹಿತಿ ನೀಡಿದರು.

ಅ.೨೨ರಂದು ಭಾನುವಾರ ಚಂಡಿಕಾ ಹೋಮ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿದ್ದು, ಅ.೨೪ ರಂದು ಮಂಗಳವಾರ ಸಂಜೆ ೪ ಗಂಟೆಗೆ ಶ್ರೀ ದುರ್ಗಾಮಾತೆಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಮಂಗಳವಾದ್ಯದೊಂದಿಗೆ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಿ, ಶ್ರೀಮಾತೆಯನ್ನು ಇಂದಾವರ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಹೇಳಿದರು.

ಅದೇ ದಿನ ರಾತ್ರಿ ೧೦ ಗಂಟೆಗೆ ಶ್ರೀ ದುರ್ಗಾ ಮಂಟಪದ ಮುಂಭಾಗದಲ್ಲಿ ಅಸುರ ದಹನ ಮಹಿಷಾಸುರ ಸಂಹಾರ ನಡೆಯಲಿದೆ ಎಂದು ಅವರು ನಂದಿಟ್ರಸ್ಟ್ ಹಲವಾರು ಸಮಾಜಮುಖಿ ಕಾರ್ಯಗಳನ್ನು ಆಯೋಜಿಸುತ್ತಿದ್ದು, ಯುವಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದೇಹದಾರ್ಢ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಹೆಸರು ನೊಂದಾಯಿಸಲು ಕಿರಣ್‌ಕುಮಾರ್ ೬೩೬೧೫೬೮೯೪೮ ಹಾಗೂ ಧನಂಜಯಕುಮಾರ್ ೭೭೯೫೫೦೭೬೧೦ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಉಮೇಶ್ ಸಿ.ಎನ್, ಈಶ್ವರ್, ಆದರ್ಶ್, ವಿವೇಕ್, ರಂಜಿತ್ ಮತ್ತಿತರರಿದ್ದರು.

Press conference by Sri Vijayapur Durga Seva Samiti

About Author

Leave a Reply

Your email address will not be published. Required fields are marked *