September 20, 2024

ಅ. 31ಕ್ಕೆ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಭೆ

0
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೋಳಿ ಸುದ್ದಿಗೋಷ್ಠಿ

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೋಳಿ ಸುದ್ದಿಗೋಷ್ಠಿ

ಚಿಕ್ಕಮಗಳೂರು ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಕರಾವಳಿ- ಮಲೆನಾಡು ಜನ ಪರ ಒಕ್ಕೂಟ ಹುಟ್ಟು ಹಾಕಲಾಗಿದ್ದು, ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಅ. ೩೧ ರಂದು ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಽರ್ ಕುಮಾರ್ ಮುರೋಳಿ ಅವರು ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಲೆನಾಡು ಜನಪರ ಒಕ್ಕೂಟ ಸ್ಥಾಪನೆ ಮಾಡಿ, ಅದರಿಂದ ಜನರ ಸಮಸ್ಯೆಗಳ ನಿವಾರಣೆಗೆ ಅನೇಕ ಹೋರಾಟ ನಡೆಸಲಾಗಿತ್ತು. ಇದನ್ನು ಈಗ ವಿಸ್ತರಣೆ ಮಾಡುವ ದೃಷ್ಟಿಯಿಂದ ಕರಾವಳಿ ಹಾಗೂ ಮಲೆನಾಡು ಪ್ರದೇಶ ಒಳಗೊಂಡ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗದ ಜನರ, ಕೂಲಿ ಕಾರ್ಮಿಕರ, ಬೆಳೆಗಾರರ ಸಮಸ್ಯೆ ಬಗೆಹರಿಸಲು ಒಕ್ಕೂಟ ಹುಟ್ಟು ಹಾಕಲಾಗಿದೆ ಎಂದರು.

ಎಲ್ಲ ಜಿಲ್ಲೆಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ೨೦೦ ಕುಟುಂಬಗಳಿಗೆ ನಿವೇಶನ ಒದಗಿಸಲು ಕ್ರಮವಾಗಬೇಕಾಗಿದೆ. ಕರಾವಳಿ ಭಾಗದ ಮೀನುಗಾರರು, ಸಾರಿಗೆ ವಾಹನ ಚಾಲಕರು, ಕೂಲಿ ಕಾರ್ಮಿಕರ ಸಮಸ್ಯೆ ಅರಿತಿದ್ದೇವೆ. ಧಾರವಾಡ, ಕಲಬುರಗಿ ಯಲ್ಲಿ ಹೈಕೋರ್ಟ್ ಪೀಠವಿದ್ದು, ಮಲೆನಾಡು ಹಾಗೂ ಕರಾವಳಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಭಾಗದಲ್ಲಿ ಹೈಕೋರ್ಟ್ ಪೀಠದ ಅವಶ್ಯಕತೆಯಿದೆ ಎಂದರು.

ಜನರ ಬದುಕು, ಭಾವನೆ ಪ್ರಶ್ನೆ ಬಂದಾಗ, ಬದುಕು ರೂಪಿಸಿಕೊಳ್ಳುವುದು ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಒಕ್ಕೂಟದ ಸಭೆಗೆ ರೈತರು, ನಿವೃತ್ತ ಪ್ರಾಧ್ಯಾಪಕರು, ವಕೀಲರು, ಸರ್ವ ಪಕ್ಷ ಹಾಗೂ ಸಂಘಟನೆಯ ಪ್ರಜವಂತ ಮುಖಂಡರು ಭಾಗವಹಿಸಲಿದ್ದು, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶ್ರಮಿಸಲಾಗುವುದು ಎಂದು ಹೇಳಿದರು.

ಕೆಲವು ಸಮಸ್ಯೆಗಳ ಪರಿಹಾರಕ್ಕೆ ಏಕ ಧ್ವನಿಯ ಅವಶ್ಯಕತೆ ಇರುವುದರಿಂದ, ಹೋರಾಟಕ್ಕೆ ಅನುಕೂಲವಾಗಲಿದೆ. ಈ ಪ್ರದೇಶವನ್ನು ಕೃಷಿ ವಿಶೇಷ ವಲಯವನ್ನಾಗಿ ಘೋಷಿಸಬೇಕು, ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮ ನೀತಿ ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ, ನವೀನ್ ಕರುವಾನೆ, ದುರ್ಗಾಚಾರ್, ಪೂರ್ಣೇಶ್ ಮೈಲಿಮನೆ ಉಪಸ್ಥಿತರಿದ್ದರು.

A. Meeting to find suitable solutions to people’s problems on 31st

About Author

Leave a Reply

Your email address will not be published. Required fields are marked *