September 20, 2024

ಬಿಜೆಪಿ ಜನ ವಿರೋಧಿ ನೀತಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯ

0
ನಗರದ ಕುವೆಂಪು ಕಲಾಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ನಗರದ ಕುವೆಂಪು ಕಲಾಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಚಿಕ್ಕಮಗಳೂರು: ಬಹಾಳ ವ?ಗಳ ಕಾಲ ನಾನಾ ಕಾರಣಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದಿರುವ ಜನ ಈ ಭಾರಿ ಮತ ನೀಡಿದ್ದಾರೆ ಬಡವರು ನಿರೀಕ್ಷೆ ಮೀರಿ ಮತ ನೀಡಿದ್ದು ಅದಕ್ಕೆ ಪೂರಕವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎಲ್ ಶಂಕರ್ ಹೇಳಿದರು.

ಅವರು ನಗರದ ಕುವೆಂಪು ಕಲಾಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಗೆಲ್ಲುವ ಬಗ್ಗೆ ರಾಜ್ಯ ಮತ್ತು ರಾ? ನಾಯಕರು ಮೂಗು ಮುರಿಯುವ ಕಾಲ ಇತ್ತು ಈ ಭಾರಿಯ ಚುನಾವಣೆಯಲ್ಲಿ ೫ ಕ್ಕೆ ೫ ಸ್ಥಾನ ಗೆಲ್ಲಿಸುವ ಮೂಲಕ ವಿಶೇ? ಗೌರವ ತಂದು ಕೊಟ್ಟಿರುವ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಅದರಲ್ಲೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿಲ್ಲ ಬಿಜೆಪಿ ಶಾಸಕ ಆಳವಾಗಿ ಬೇರು ಬಿಟ್ಟಿದ್ದಾರೆ ಎಂದು ನಾಯಕರೇ ಹೇಳುತ್ತಿದ್ದರು ೧೯-೨೦ ವ?ಗಳ ಕಾಲ ಶಾಸಕರ ಮನೆಯನ್ನೇ ನೋಡದೆ ಇರುವ ಸಾವಿರಾರು ಕಾರ್ಯಕರ್ತರು ಗಟ್ಟಿ ನಿರ್ಧಾರ ಮಾಡಿ ಎಲ್ಲಾ ರೀತಿಯ ಬೆದರಿಕೆ, ಆಮಿ?, ಅಧಿಕಾರ ಶಾಹಿಯ ಒತ್ತಡಗಳನ್ನು ತಡೆದು ಈ ಭಾರಿ ಗೆಲ್ಲುವ ತಂದು ಕೊಟ್ಟವರಿಗೆ ಕೆಪಿಸಿಸಿ ಪರವಾಗಿ ಅಭಿನಂದಿಸುತ್ತೇನೆ ಎಂದರು.

ಭೂಮಿಕೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುತ್ತೇವೆ ಎಂಬುದು ಇರಲಿಲ್ಲ ೬೦ ವ? ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಬರುವ ಸಾಂವಿಧಾನಿಕ ಸಂಸ್ಥೆಗಳನ್ನು ಚುನಾವಣಾ ರಾಜಕಾರಣಕ್ಕೆ ಬಳಸಿರುವ ಉದಾಹರಣೆ ಇಲ್ಲ ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಹೇಳಿದರು

ಆದರೆ ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದೆ ಪ್ರಧಾನಿಯವರು ಒಂದು ಚುನಾವಣೆಗೆ ಹೆಚ್ಚು ಸಮಯ ನೀಡಿದ ಮೊದಲಿಗರಾಗಿದ್ದಾರೆ ಈ ಕುರಿತು ಸಿ.ಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೋಡೆತ್ತಿನರೀತಿ ಕೆಲಸ ಮಾಡಿ ಬಿಜೆಪಿ ಜನ ವಿರೋಧಿ ನೀತಿಗಳನ್ನು ಜನರಿಗೆ ಮನಮುಟ್ಟುವಂತೆ ಮಾಡಿದ ಪರಿಣಾಮ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದರು.

ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಹಾಗೂ ಬೆಲೆ ಏರಿಕೆ ಸರಿದೂಗಿಸಲು ೫ ಗ್ಯಾರಂಟಿ ಯೋಜನೆಗಳನ್ನು ಘೋ?ಣೆ ಮಾಡಿ ಗೃಹಲಕ್ಷ್ಮಿ ಯೋಜನೆ ಹಣವನ್ನು ನೇರವಾಗಿ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡುತ್ತಿದೆ ಬಡತನದಲ್ಲಿರುವವರಿಗೆ ಮಾತ್ರ ಯೋಜನೆಗಳು ತಲುಪಬೇಕೆಂದು ಸರ್ಕಾರ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.

ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ ಮೊದಲ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಮಾಡಿದ್ದು ಈಗ ಕಾರ್ಯಕರ್ತರಿಗೆ ಗೌರವ ಮತ್ತು ಸಮಸ್ಯೆಗೆ ಸ್ಪಂದಿಸುವ ಕೆಲಸ ಇನ್ನು ಮುಂದೆ ಆಗುತ್ತದೆ ಕಾರ್ಯಕರ್ತರು ಅಹವಾಲು ಸ್ವೀಕರಿಸಿದ್ದು ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ನಿರ್ವಹಿಸಲು ಬದ್ಧ ಎಂದರು.

ಕಾಂಗ್ರೆಸ್ ಪಕ್ಷದ ಗೌರವ ಹೆಚ್ಚಾಗಬೇಕಾದರೆ ರಾ?ಮಟ್ಟದಲ್ಲಿ ಗೆಲ್ಲಬೇಕು ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸುತ್ತಿದ್ದು ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕೆಂದು ಕರೆ ನೀಡಿದರು.

ತಿಂಗಳಲ್ಲಿ ಎರಡು ದಿನ ಪ್ರತಿ ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿದ್ದು ಸಮಸ್ಯೆ ಆಲಿಸುವ ಕೆಲಸ ಮಾಡುತ್ತೇವೆ ಸಧ್ಯದಲ್ಲೇ ಸಖರಾಯಪಟ್ಟಣದಲ್ಲಿ ಶಾಸಕರ ಜನಸ್ಪಂದನ ಕಚೇರಿ ತೆರೆದು ಪ್ರತಿ ೨ ಮಂಗಳವಾರ ತಾವು ಸಹ ಇದ್ದು ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ತಾವು ಶಾಸಕರಾದ ನಂತರ ಆಡಳಿತದಲ್ಲಿ ಚುರುಕು ಮುಟ್ಟಿಸಲು ಚಾಟಿ ಬೀಸಿದ್ದೇನೆ ಚಿಕ್ಕಮಗಳೂರು ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|| ಕೆ.ಪಿ ಅಂಶುಮಂತ್ ಮಾತನಾಡಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಂಘಟಿತ ಹೋರಾಟ ಫಲವಾಗಿ ಜಿಲ್ಲೆಯ ೫ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಪ್ರತಿ ಭೂತ್‌ನಲ್ಲಿ ಕಾರ್ಯಕರ್ತರು ತಳಮಟ್ಟದಲ್ಲಿ ಗಟ್ಟಿಯಾಗಿ ನಿಂತು ಸಂಘಟನೆ ಮಾಡಿದ ಪರಿಣಾಮ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದಿಸಿದರು.

ಶಾಸಕ ಹೆಚ್.ಡಿ ತಮ್ಮಯ್ಯ ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಕೊಟ್ಟ ಭರವಸೆಯಂತೆ ಹಾಗೂ ಕಾರ್ಯಕರ್ತರು, ಮುಖಂಡರಿಗೆ ನೀಡಿದ ವಾಗ್ದಾನದಂತೆ ಕೆಲಸ ಮಾಡುತಿದ್ದಾರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂಪರ್ಕದಲ್ಲಿದ್ದು ಸಾರ್ವಜನಿಕರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ವಿಧಾನ ಪರಿ?ತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಎಐಸಿಸಿ ಕಾರ್ಯದರ್ಶಿ ಬಿ.ಎಂ ಸಂದೀಪ್ ಮಾಜಿ ಅಧ್ಯಕ್ಷ ಎಂ.ಎಲ್ ಮೂರ್ತಿ ಎಚ್ .ಎಚ್ ದೇವರಾಜ್ ಎ.ಎನ್ ಮಹೇಶ್ ರೇಖಾಹುಲಿಯಪ್ಪಗೌಡ, ಸಯದ್‌ಹನೀಫ್, ನಯಾಜ್‌ಅಹಮದ್, ರೂಬಿನ್‌ಮೊಸೆಸ್, ಮಹಡಿಮನೆ ಸತೀಶ್, ಹೆಚ್.ಪಿ ಮಂಜೇಗೌಡ ಹಾಗೂ ನಗರಸಭೆ ಸದಸ್ಯರುಗಳಾದ ಲಕ್ಷ್ಮಣ್, ಶಾದಬ್ ಆಲಂಖಾನ್, ಲಕ್ಷ್ಮಣ್, ಇಂದಿರಾ ಶಂಕರ್ ಮತ್ತಿತರರಿದ್ದರು.

Congress government can come to power in the state due to BJP’s anti-people policy

About Author

Leave a Reply

Your email address will not be published. Required fields are marked *