September 20, 2024

ತೆರಿಗೆ ಪಾವತಿಸದ ನಾಗರೀಕರ ಮೂಲಭೂತ ಸೌಕರ್ಯ ಕಡಿತ

0
ನಗರದ ಮಾರ್ಕೆಟ್ ರಸ್ತೆಯಲ್ಲಿ ನಗರಸಭೆಯಿಂದ ನೀಡಲಾಗಿರುವ ಮಳಿಗೆಗಳ ಬಾಡಿಗೆ ವಸೂಲಿ

ನಗರದ ಮಾರ್ಕೆಟ್ ರಸ್ತೆಯಲ್ಲಿ ನಗರಸಭೆಯಿಂದ ನೀಡಲಾಗಿರುವ ಮಳಿಗೆಗಳ ಬಾಡಿಗೆ ವಸೂಲಿ

ಚಿಕ್ಕಮಗಳೂರು: ನಿಗಧಿತ ಅವಧಿಯಲ್ಲಿ ತೆರಿಗೆ ಪಾವತಿಸದ ನಾಗರೀಕರಿಗೆ ನಗರಸಭೆಯಿಂದ ಕಲ್ಪಿಸಲಾಗಿರುವ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸುವುದಾಗಿ ಪೌರಾಯುಕ್ತ ಬಿ.ಸಿ ಬಸವರಾಜ್ ಅಂತಿಮ ಎಚ್ಚರಿಕೆ ನೀಡಿದರು.

ಅವರು ಇಂದು ನಗರದ ಮಾರ್ಕೆಟ್ ರಸ್ತೆಯಲ್ಲಿ ನಗರಸಭೆಯಿಂದ ನೀಡಲಾಗಿರುವ ಮಳಿಗೆಗಳ ಬಾಡಿಗೆ ವಸೂಲಿಗೆ ನಿರತರಾಗಿದ್ದು, ಈ ಸಂದರ್ಭದಲ್ಲಿ ಬಾಕಿ ಉಳಿಸಿಕೊಂಡಿದ್ದ ವರ್ತಕರಿಗೆ ನೋಟೀಸ್ ಜಾರಿ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಅ.೪ ರಿಂದ ೧೨ ರವರೆಗೆ ಸಾರ್ವಜನಿಕರು ಆಸ್ತಿ ತೆರಿಗೆ ಪಾವತಿಸುವಂತೆ ನಗರಸಭೆಯಿಂದ ತಮಟೆ ಆಂದೋಲನ ನಡೆಸಿದ್ದು, ಈ ಅವಧಿಯಲ್ಲಿ ನಾಗರೀಕರು ತೆರಿಗೆ ಪಾವತಿಸದ ಕಾರಣ ಅಂತಿಮವಾಗಿ ಎಚ್ಚರಿಕೆ ನೀಡಲಾಗಿದೆ ಎಂದರು.

ಸಾರ್ವಜನಿಕರು ಮತ್ತು ವರ್ತಕರು ನಗರಸಭೆಯೊಂದಿಗೆ ಸ್ಪಂದಿಸದಿದ್ದ ಕಾರಣ ಈಗಾಗಲೇ ೧೩ ಮಳಿಗೆಗಳಿಗೆ ಬೀಗ ಹಾಕಲಾಗಿದೆ, ಮಳೆಗೆ ಪಡೆದಿರುವ ವರ್ತಕರು ೪ ಲಕ್ಷ ರೂಗಳವರೆಗೆ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದು, ವಸೂಲಿಗೆ ತೆರಳಿದಾಗ ಉಡಾಫೆಯಿಂದ ವರ್ತಿಸಿ ನಾಳೆ ಕೊಡುತ್ತೇನೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಹೇಳಿದರು.

ಮನೆ ಕಂದಾಯ, ನಲ್ಲಿ ಕಂದಾಯ, ಟ್ರೇಡ್ ಪರವಾನಗಿ ಪಡೆದಿರುವ ನಾಗರೀಕರು ಕೂಡಲೇ ನಗರ ಸಭೆಗೆ ಬಂದು ತೆರಿಗೆ ಪಾವತಿಸುವಂತೆ ಮನವಿ ಮಾಡಿದ ಅವರು ಇಲ್ಲದಿದ್ದರೆ ಮಳಿಗೆಗಳಿಗೆ ಬೇಕಾ ಹಾಕುವುದರ ಜೊತೆಗೆ ಜಪ್ತಿ ವಾರೆಂಟ್ ಜಾರಿ ಮಾಡುವ ಮೂಲಕ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಲು ನಗರಸಭೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ನಾಗರೀಕರು ಇದಕ್ಕೆ ಅವಕಾಶ ಕೊಡದಂತೆ ತಕ್ಷಣ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಪಾವತಿಸಿ ನಗರಸಭೆಯೊಂದಿಗೆ ಸಹಕರಿಸಬೇಕೆಂದು ವಿನಂತಿಸಿದ ಬಸವರಾಜ್ ಕೆ.ಎಂ ರಸ್ತೆಯಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ಈಗ ನಗರಸಭೆಗೆ ಹಸ್ತಾಂತರಿಸಿದ್ದು, ಬಾಡಿಗೆ ನಿಗಧಿ ಮಾಡಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಲಾಗಿದೆ, ಬಂದ ತಕ್ಷಣ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಎಂ.ಜಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ಮಳಿಗೆಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಈಗಾಗಲೇ ಈ ಮಳಿಗೆಗಳನ್ನು ವರ್ತಕರಿಗೆ ನೀಡಲು ಹರಾಜು ಪ್ರಕ್ರಿಯೆ ನಡೆಸಲಾಗಿದ್ದು ಕಾಮಗಾರಿ ಪೂರ್ಣಗೊಂಡ ಬಳಿಕ ಬಾಡಿಗೆ ನಿಗಧಿ ಮಾಡಿ ಸಂಬಂಧಿಸಿದ ವರ್ತಕರಿಗೆ ಬಿಟ್ಟುಕೊಡುವುದಾಗಿ ಭರವಸೆ ನೀಡಿದರು.

ಮನೆ ನಿವೇಶನಕ್ಕೆ ಸಂಬಂಧಿಸಿದ ಆಸ್ತಿ ತೆರಿಗೆ ೫.೫೦ ಕೋಟಿ ರೂ ನಲ್ಲಿ ಕಂದಾಯ,೫ ಕೋಟಿ ರೂ ಉದ್ದಿಮೆ ಪರವಾನಗಿ ಟ್ರೇಡರ್‍ಸ್ ೨.೫೦ ಕೋಟಿ ರೂ ಸಹಿತ ಸುಮಾರು ೧೨ ಕೋಟಿ ರೂ ನಗರಸಭೆಗೆ ಆದಾಯ ತೆರಿಗೆಯಿಂದ ಬರಬೇಕಾಗಿದ್ದು ಬಾಕಿ ಇದೆ, ವ?ದ ಮಧ್ಯಭಾಗದಲ್ಲಿ ಈಗ ಇರುವುದರಿಂದ ಅತಿ ಶೀಘ್ರದಲ್ಲಿ ಕಂದಾಯ ಪಾವತಿಸಲು ನಾಗರೀಕರು ಮುಂದಾಗಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಕಂದಾಯ ವಿಭಾಗದ ಸಿಬ್ಬಂದಿಗಳಾದ ಶಿವಾನಂದ, ರಮೇಶ್‌ನಾಯ್ಡು ಮತ್ತಿತರರು ಇದ್ದg

Collection of rent for shops provided by the Municipal Corporation on Market Road in the city

About Author

Leave a Reply

Your email address will not be published. Required fields are marked *