September 8, 2024

ಬಿಜೆಪಿಯಿಂದ ನಗರಸಭೆ ಅದ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅಮಾನತು

0
ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಸುದ್ದಿಗೋಷ್ಠಿ

ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಪಕ್ಷದ ಆದೇಶವನ್ನು ಉಲ್ಲಂಘಿಸಿ ನಗರಸಭೆ ಅದ್ಯಕ್ಷ ಸ್ಥಾನದಲ್ಲಿ ಮುಂದುವರಿದಿರುವ ವರಸಿದ್ಧಿ ವೇಣುಗೋಪಾಲ್ ಅವರನ್ನು ಬಿಜೆಪಿಯಿಂದ ಅಮಾನತುಪಡಿಸಲಾಗಿದೆ.

ಪಕ್ಷದ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದು, ನಗರಸಭೆ ಅಧ್ಯಕ್ಷರ ಅವಧಿ ಹಂಚಿಕೆ ವಿಚಾರದಲ್ಲಿ ಪಕ್ಷದ ನಾಯಕರು ಹಾಗೂ ಕೋರ್‌ಕಮಿಟಿ ತೀರ್ಮಾನವನ್ನು ಉಲ್ಲಂಘಿಸಿದ್ದಲ್ಲದೆ, ಅಧ್ಯಕ್ಷ ಸ್ಥಾನಕ್ಕೆ ನೀಡಲಾಗಿದ್ದ ರಾಜೀನಾಮೆಯನ್ನು ಕೊನೇ ಘಳಿಗೆಯಲ್ಲಿ ಹಿಂದಕ್ಕೆ ಪಡೆದು ಪಕ್ಷವನ್ನು ಮುಗುರುಕ್ಕೀಡುಮಾಡಿದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇಂದಿನಿಂದ ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧ ಇರುವುದಿಲ್ಲ. ಎಂದು ಅವರು ತಿಳಿಸಿದರು.

ಸಾರ್ವಜನಿಕವಾಗಿಯೂ ಹಲವಾರು ಸಂದರ್ಭಗಳಲ್ಲಿ ಪಕ್ಷವನ್ನ ಇಕ್ಕಟ್ಟಿಗೆ ಸಿಕ್ಕಿಸಿ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಬಿಜೆಪಿ ಅಂಬೇಡ್ಕರ್ ಬಗ್ಗೆ ಅಪಾರವಾದ ಶ್ರದ್ಧೆ, ಗೌರವವನ್ನು ಇಟ್ಟುಕೊಂಡಿದೆ. ಅನಾವಶ್ಯಕವಾಗಿ ಪಕ್ಷದ ಹಿರಿಯ ನಾಯಕರ ಜೊತೆ ಚರ್ಚಿಸದೆ ನಗರದ ಜಿಮ್ ವೊಂದಕ್ಕೆ ಹೆಸರಿಡುವ ವಿಚಾರದಲ್ಲಿ ವಿವಾದ ಉಂಟು ಮಾಡಿದರು. ಆದರೆ ಪಕ್ಷದ ಎಲ್ಲಾ ಸದಸ್ಯರು ಜೈ ಭೀಮ್ ಹೆಸರಿಡಬೇಕು ಎಂದು ನಿರ್ಣಯಿಸಿದರು. ಈ ರೀತಿ ಟ್ರೇಡ್ ಲೈಸೆನ್ಸ್ ತೆರಿಗೆ ಹೆಚ್ಚುಗೊಳಿಸುವ ವಿಚಾರ, ತಳ್ಳುವ ಗಾಡಿ ವ್ಯಾಪಾರಸ್ಥರಿಗೆ ತೊಂದರೆ ನೀಡಿದ್ದಿರಬಹುದು, ಹೀಗೆ ಪಕ್ಷಕ್ಕೆ ಮುಜುಗುರವನ್ನು ಉಂಟುಮಾಡುವ ಹಲವು ಸಂದರ್ಭಗಳನ್ನು ನಿರ್ಮಾಣ ಮಾಡಿದ್ದರು ಎಂದು ತಿಳಿಸಿದರು.

ಸಾರ್ವಜನಿಕವಾಗಿ ಕೆಲವು ಸಂಘ ಸಂಸ್ಥೆಗಳು ನಗರಸಭೆಗೆ ಬಂದ ಸಂದರ್ಭದಲ್ಲೂ ಗೌರವ ನೀಡುತ್ತಿರಲಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ಹಲವಾರು ಬಾರಿ ಅವರ ಗಮನಕ್ಕೆ ತಂದರೂ ಅದನ್ನು ಸರಿಪಡಿಸುವುದಾಗಲಿ, ಮತ್ತು ಮಾನ್ಯತೆ ಕೊಡುವುದನ್ನಾಗಲಿ ಮಾಡಲಿಲ್ಲ. ಈ ಎಲ್ಲಾ ಕಾರಣಕ್ಕೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದರು.

ಈ ವಿಚಾರಗಳನ್ನು ರಾಜ್ಯ ಘಟಕಕ್ಕೆ ಕಳಿಸುತ್ತೇವೆ. ಅಲ್ಲಿ ಪ್ರತ್ಯೇಕ ಶಿಸ್ತು ಸಮಿತಿ ಇದೆ. ಅಲ್ಲಿ ನಿರ್ಣಯ ತೆಗೆದುಕೊಂಡ ನಂತರ ನಂತರ ಪಕ್ಷದಿಂದ ಉಚ್ಛಾಟಿಸುವಂತಹ ಕ್ರಮವನ್ನೂ ಕೈಗೊಳ್ಳಬಹುದು ಎಂದರು.

ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಭೆಗೆ ಜಿಲ್ಲಾಧಿಕಾರಿಗಳು ದಿನಾಂಕ ನಿಗಧಿಪಡಿಸಬೇಕು. ಅವಿಶ್ವಾಸಕ್ಕೆ ಜಯ ಸಿಗುತ್ತದೆ ಎನ್ನುವ ವಿಶ್ವಾಸ ನಮಗಿದೆ ಎಂದು ಬಿಜೆಪಿ ನಗರಸಭೆ ಸದಸ್ಯ ಟಿ.ರಾಜಶೇಖರ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಅವಿಶ್ವಾಸ ಗೆಲ್ಲಲು ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಬೇಕಾಗುತ್ತದೆ. ಆ ಪ್ರಕಾರ ೨೬ ಸದಸ್ಯರ ಸಹಮತ ಅಗತ್ಯವಿದೆ. ಈಗಾಗಲೇ ೨೧ ಜನರು ಸಹಿ ಹಾಕಿ ಕೊಟ್ಟಿದ್ದಾರೆ. ಇನ್ನೂ ಕಾಂಗ್ರೆಸ್‌ನ ಐದಾರು ಮಂದಿ ಅಸಮಾಧಾನ ಇರುವವರು ನಾವು ಅವಿಶ್ವಾಸದ ಪರ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ. ಈ ನಡುವೆ ಅವರ ಪಕ್ಷದ ಒತ್ತಡವೂ ಇದೆ ಎನ್ನಲಾಗುತ್ತಿದೆ. ಅವಿಶ್ವಾಸ ಸಭೆ ನಡೆದ ನಂತರ ಎಲ್ಲವೂ ಸ್ಪಷ್ಟವಾಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಾಧ್ಯಮ ವಕ್ತಾರರಾದ ಕವಿತಾ ಶೇಖರ್, ನಗರಸಭೆ ಉಪಾಧ್ಯಕ್ಷ ಚನ್ನಕೇಶವ, ಮಾಜಿ ಅಧ್ಯಕ್ಷ ಪುಷ್ಪರಾಜ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್ ಇದ್ದರು.

Municipal Council President Varasidhi Venugopal suspended by BJP

About Author

Leave a Reply

Your email address will not be published. Required fields are marked *

You may have missed