September 8, 2024

9.80 ಕೋಟಿ ರೂ. ವೆಚ್ಚದ ಅರಣ್ಯ ಭವನ ಕಟ್ಟಡ ನಿರ್ಮಾಣಕ್ಕೆ ಚಾಲನೆ

0
9.80 ಕೋಟಿ ರೂ. ವೆಚ್ಚದ ಅರಣ್ಯ ಭವನ ಕಟ್ಟಡ ನಿರ್ಮಾಣಕ್ಕೆ ಚಾಲನೆ

9.80 ಕೋಟಿ ರೂ. ವೆಚ್ಚದ ಅರಣ್ಯ ಭವನ ಕಟ್ಟಡ ನಿರ್ಮಾಣಕ್ಕೆ ಚಾಲನೆ

ಚಿಕ್ಕಮಗಳೂರು: ನಗರದಲ್ಲಿ ೯.೮೦ ಕೋಟಿ ರೂ. ವೆಚ್ಚದ ಅರಣ್ಯ ಭವನ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಚ್.ಡಿ.ತಮ್ಮಯ್ಯ ಶನಿವಾರ ಚಾಲನೆ ನೀಡಿದರು.

ಹಿಂದೆ ಇದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಹೇಳೇ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.

ಈ ವೇಳೇ ಶಾಸಕ ಎಚ್.ಡಿ.ತಮ್ಮಯ್ಯ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಕೆಲವು ಅಭಿವೃದ್ಧಿ ಕಾರ್ಯಗಳು ಕುಂಟಿತವಾಗಿದೆ. ಚುನಾವಣಾ ಪೂರ್ವದಲ್ಲಿ ನಮ್ಮ ಪಕ್ಷ ೫ ಗ್ಯಾರಂಟಿಗಳನ್ನ ಘೋಷಿಸಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ತಕ್ಷಣ ೫ ರಲ್ಲಿ ೪ ಭಾಗ್ಯಗಳನ್ನು ಕೇವಲ ೧೦೦ ದಿನದಲ್ಲಿ ಜಾರಿಗೆ ತಂದಿರುವುದರಿಂದ ಅಭಿವೃದ್ಧಿ ಕುಂಟಿತವಾಗಿತ್ತು ಎಂದರು.

ಇದೀಗ ೭ ಕೋಟಿ ರೂ. ವೆಚ್ಚದಲ್ಲಿ ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕಾಮಗಾರಿಗಳು ನಡೆಯುತ್ತಿದೆ. ಇದೀಗ ಸುಮಾರು ೯ ಕೋಟಿ ರೂ. ವೆಚ್ಚದ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಹಾಸ್ಟೆಲ್ ಕಟ್ಟಡಕ್ಕೆ ೪ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಫುಟ್‌ಬಾಲ್ ಇಂಡೋರ್ ಸ್ಟೇಡಿಯಂಗೆ ೪ ಕೋಟಿ ಕಾಮಗಾರಿಗೆ ಮಂಜೂರಾತಿ ಕೊಟ್ಟು ೧ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಲ್ಯಾಣ ನಗರದಲ್ಲಿ ಒಳಾಂಗಣ ಕ್ರೀಡಾಂಗಣದ ಮುಂದುವರಿದ ಕಾಮಗಾರಿಗೆ ೧.೫ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಎಲ್ಲಾ ಉಪ ಕಚೇರಿಗಳು ಈ ಕಟ್ಟಡಕ್ಕೆ ಬರಲಿದೆ. ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗುತ್ತದೆ. ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ನಿರ್ಮಾಣ ಕಾರ್ಯ ಪ್ರಾರಂಭವಾಗಿತ್ತು. ಆದರೆ ಅನುದಾನ ಬಿಡುಗಡೆ ಆಗಿರಲಿಲ್ಲ ಎಂದರು.
ರಾಜಕಾರಣ ಹರಿಯುವ ನೀರಿದ್ದಂತೆ ಯಾವ ಕಾಲದಲ್ಲಿ ಯಾವ ಸರ್ಕಾರ ಇರುತ್ತೋ ಆ ಸರ್ಕಾರ ಕೆಲಸ ಮಾಡುತ್ತದೆ. ಹಿಂದಿದ್ದವರಾದರೂ ಸರಿ, ನಾವಾದರೂ ಸರಿ ನಮ್ಮ ಮನೆ ಹಣ ತಂದು ಕೆಲಸ ಮಾಡುವುದಿಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ಈ ಕಾರ್ಯ ಮಾಡಿದ್ದೆಂಬುದನ್ನು ಒಂದಷ್ಟು ಜನ ಮನಗಾಣಬೇಕು. ನಾವು ಮಾಡಿದ್ದು, ನಾವು ಮಾಡಿದ್ದು ಎಂದು ನಾವು ಹೇಳಿಕೊಳ್ಳುವುದಿಲ್ಲ ಎಂದರು.

ಹಿಂದಿದ್ದವರಿಗೆ ಜನ ಜವಾಬ್ದಾರಿ ಕೊಟ್ಟಿದ್ದರು ಅದನ್ನು ಅವರು ನಿಭಾಯಿಸಿದ್ದಾರೆ. ಈಗ ನಮಗೆ ಕೊಟ್ಟಿದ್ದಾರೆ. ನಾವು ಆ ಕೆಲಸವನ್ನು ಮಾಡುತ್ತಿದ್ದೇವೆ. ಯಾರ್‍ಯಾರ ಸೇವೆ ಏನು ಎನ್ನುವುದನ್ನು ದೇವರು ಮತ್ತು ಜನ ಅವರ ಖಾತೆಗೆ ಹಾಕುತ್ತಾರೆ. ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಗುರಿ ಮುಟ್ಟಿಸುತ್ತೇನೆ. ಒಳ್ಳೆ ಕೆಲಸಕ್ಕೆ ಎಲ್ಲರೂ ಸಹಕಾರ ಕೊಡಲಿ ಎಂದರು.

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಎಸಿಎಫ್ ಮೋಹನ್, ಆರ್‌ಎಫ್‌ಓ ಆನಂದ್, ಪಿ.ಡ್ಲೂ.ಡಿ ಇಲಾಖೆ ಶ್ರೀಧರ್, ಸಹಾಯಕ ಕಾರ್ಯಪಾಲಕರಾದ ಗವಿರಂಗಪ್ಪ, ಗುತ್ತಿಗೆದಾರ ರವಿಶಂಕರ್ ಇತರರು ಇದ್ದರು.

Aranya Bhavan construction started

About Author

Leave a Reply

Your email address will not be published. Required fields are marked *

You may have missed