September 8, 2024

ಜಿಲ್ಲೆಯಲ್ಲಿ ಸಮಾಜ ಸೇವೆ ಮಾಡುವಲ್ಲಿ ಚಿಕ್ಕಮಗಳೂರು ಮುಂಚೂಣಿ

0
ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ.ಮೆಲ್ವಿನ್ ಡಿಸೋಜಾ ಪತ್ರಿಕಾಗೋಷ್ಠಿ

ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ.ಮೆಲ್ವಿನ್ ಡಿಸೋಜಾ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಮಾಜ ಸೇವೆ ಮಾಡುವಲ್ಲಿ ಚಿಕ್ಕಮಗಳೂರು ಮುಂಚೂಣಿಯಲ್ಲಿದ್ದು ಸಮಾಜದ ಅತ್ಯಗತ್ಯಗಳಿಗೆ ಸ್ಪಂದಿಸಿ ಸೇವೆಯ ಹೊಸ ಆಯಾಮವನ್ನು ಸೃಷ್ಠಿಸಿ ಸೇವೆಗೆ ಅತ್ಯುನ್ನತವಾದ ಹೊಸ ಕಾಯ ಕಲ್ಪ ನೀಡಲಾಗಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ.ಮೆಲ್ವಿನ್ ಡಿಸೋಜಾ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಲಯನ್ ಜಿಲ್ಲೆ ಎಂಬ ಘೋ?ವಾಕ್ಯದೊಂದಿಗೆ ವಿವಿಧ ಸ್ಥಳಗಳಲ್ಲಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದು. ಜಿಲ್ಲಾ ರಾಜ್ಯಪಾಲರ ಕಾರ್ಯಕ್ರಮ SಒIಐಇ ಕಾರ್ಯಕ್ರಮದ ಅಡಿಯಲ್ಲಿ ಹಿರಿಯ ನಾಗರಿಕರ ಸೇವೆ, ವಿಶೇ? ಮಕ್ಕಳಿಗೆ ಪ್ರೇರಣೆ ಯುವ ಸಬಲೀಕರಣ ದೇಶಪ್ರೇಮ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಒಳಗೊಂಡಿವೆ ಎಂದು ಹೇಳಿದರು.

ಇದಲ್ಲದೆ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಾದ ದೃಷ್ಟಿ, ವಿಪತ್ತು ಪರಿಹಾರ ಮಾನವೀಯ ಸೇವೆಗಳು, ಮಧುಮೇಹ, ಮಕ್ಕಳ ಕ್ಯಾನ್ಸರ್, ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಪಟ್ಟ ಕಾರ್ಯಕ್ರಮಗಳು ನಡೆಯುತ್ತಿವೆ. ಇದು ಮಾತ್ರವಲ್ಲದೆ ಎಲ್ಲ ರೀತಿಯ ಸಾಧ್ಯವಾಗುವ ಇತರ ಸೇವೆಗಳನ್ನು ಕೂಡ ಸ್ಥಳೀಯವಾಗಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಯುವಜನತೆಯ ಘೋ?ಣೆ ಮತ್ತು ಮಹಿಳಾ ಸಬಲೀಕರಣ ಅತ್ಯಂತ ಹೆಚ್ಚಿನ ಒತ್ತನ್ನು ಕೊಡುವ ದ್ಯೇಯೋದ್ದೇಶದಿಂದ ಸಮಾಜದ ಸರ್ವತೋಮುಖ ಪ್ರಗತಿಗೆ ಸಹಕಾರಿಯಾಗಲು ಒತ್ತನ್ನು ನೀಡುತ್ತಿದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ ೩೧೭- ಆ ಕರ್ನಾಟಕ ರಾಜ್ಯದ ೪ ಕಂದಾಯ ಜಿಲ್ಲೆಯ ವ್ಯಾಪ್ತಿಯಲ್ಲಿ ಸಮಾಜ ಸೇವೆಯ ಕಾರ್ಯನಿರ್ವಹಿಸುತ್ತಿದೆ. ೧೨೦ ಕ್ಲಬ್ ಗಳು ಹಾಗೂ ಸುಮಾರು ೪,೫೦೦ ಸದಸ್ಯರನ್ನು ಒಳಗೊಂಡಿದೆ ಎಂದು ಹೇಳಿದರು.

ಈ ವ?ದ ಮೊದಲ ೩ ತಿಂಗಳೊಳಗೆ ೧೦೨ ಹೊಸ ಒಎಈ/Pಒಎಈ ಗಳನ್ನು ನೋಂದಾಯಿಸಲಾಗಿದೆ. ಒಎಈ/Pಒಎಈ ಮೂಲಕ ಐಅIಈ ಗೆ ಒಂದು ಕೋಟಿ ದೇಣಿಗೆ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ದೇಣಿಗೆಯನ್ನು ವಿವಿಧ ಸೇವಾ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದರು.

ಈ ಜಿಲ್ಲೆಯಿಂದ ೮೯ ಕ್ಲಬ್‌ಗಳು ೨೦೦ ಠಿeಚಿಛಿe ಠಿosಣeಡಿ ಞiಣ ಗಳನ್ನು ಪಡೆದು ಶಾಲೆಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿದೆ. ಈಗಾಗಲೇ ೩ ಹೊಸ ಲಯನ್ಸ್ ಹಾಗೂ ೨ ಐಇಔ ಅಐUಃ ಗಳು ನಮ್ಮ ಜಿಲ್ಲೆಗೆ ಸೇರ್ಪಡೆಗೊಂಡಿವೆ. ಸುಮಾರು ೩೪೦ ಹೊಸ ಸದಸ್ಯರ ಸೇರ್ಪಡೆಯಾಗಿದೆ ಎಂದು ಮಾಹಿತಿ ನೀಡಿದರು.

ಲಯನ್ಸ್ ಜಿಲ್ಲಾಧ್ಯಕ್ಷ ಜಿ.ರಮೇಶ್ ಮಾತನಾಡಿ ಲಯನ್ಸ್ ಸಂಸ್ಥೆ ೪೯ ವ?ಗಳನ್ನು ಯಶಸ್ವಿಯಾಗಿ ಪೂರೈಸಿ ಈ ವ? ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ೪೯ ವರ್ಷಾವಧಿಯ ಅಧ್ಯಕ್ಷರುಗಳು ಲಯನ್ ಸಂಸ್ಥೆಯ ಸಮರ್ಪಣಾ ಸದಸ್ಯರೊಂದಿಗೆ ನೂರಾರು ಸೇವಾಕಾರ್ಯಗಳನ್ನು ಸಾಕಾರಗೊಳಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸುಟ್ಟಗಾಯಗಳ ವಾರ್ಡ್ ನಿರ್ಮಾಣ, ವಾಹನ ನಿಲುಗಡೆ ವ್ಯವಸ್ಥೆ, ಡಯಾಲಿಸಿಸ್ ಯಂತ್ರ ನೀಡಿಕೆ, ನಗರದಲ್ಲಿ ಪ್ರಯಾಣಿಕರ ತಂಗುದಾಣಗಳ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ, ಚಿತಾಗಾರದ ನಾವೀನ್ಯತೆ, ಬುದ್ಧಿಮಾಂದ್ಯ (ವಿಶೇ? ಚೇತನ)ರ ಶಾಲೆ, ಸ್ವಾಗತ ಫಲಕಗಳು ಹೀಗೆ ಅನೇಕ ಶಾಶ್ವತ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪ್ರತಿ ವ? ಉಚಿತ ನೇತ್ರ ಚಿಕಿತ್ಸೆ ಶಿಬಿರಗಳನ್ನು ನಡೆಸಿದೆ. ಕೃತಕ ಕೈಕಾಲು ಜೋಡಣಾ ಶಿಬಿರಗಳನ್ನು ನಡೆಸಿದೆ. ಈ ಧ್ಯೇಯೋದ್ದೇಶಗಳನ್ನು ಮುಂದುವರಿಸುತ್ತಾ ೫೦ನೇ ವ?ದ ಸುವರ್ಣ ಮಹೋತ್ಸವದ ಈ ವ?ದುದ್ದಕ್ಕೂ ನಿರಂತರವಾಗಿ ಅನೇಕ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದ್ದರು.

ಈಗಾಗಲೇ ೩ ರಕ್ತದಾನ ಶಿಬಿರ, ೧೦೦ ಯೂನಿಟ್‌ಗಳು ೫ ಯೋಗ ತರಬೇತಿ ಶಿಬಿರ, ೨ ದಂತ ತಪಾಸಣಾ ಶಿಬಿರ, ೩ ನೇತ್ರ ತಪಾಸಣಾ ಶಿಬಿರಗಳನ್ನು ಪೂರೈಸಿದೆ. ಮುಂದೆ ವ್ಯಾಕ್ಸಿನೇಶನ್ ಶಿಬಿರ ಹಾಗೂ ಐ.ಎ.ಎಸ್ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.

ಪ್ರಮುಖವಾಗಿ ನಗರದ ಕುರುವಂಗಿ ಗ್ರಾಮದ ೫೦ ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ನೆಟ್ಟಿರುವ ೪,೨೦೦ ಗಿಡಗಳ ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಂಡು ಮೊದಲನೇ ಹಂತವಾಗಿ ಎಲ್ಲ ಗಿಡಗಳಿಗೆ ಜೈವಿಕ ಗೊಬ್ಬರವನ್ನು ಹಾಕಿ ಫೋಷಿಸಲಾಗಿದೆ. ಇಂದು ಗಿಡಗಳಿಗೆ ತಂಪು ಉಳಿಸುವ ನಿಟ್ಟಿನಲ್ಲಿ ಅಡಿಕೆ ಸಿಪ್ಪೆಯ ಮುಚ್ಚಿಗೆಯನ್ನು ಹೊದಿಸುವ ಕಾರ್ಯಕ್ರಮ ಪ್ರಾರಂಭ ಮಾಡಿದ್ದೇವೆ. ಸರ್ಕಾರದ ಅರಣ್ಯ ಬೆಳೆಸುವ ಯೋಜನೆಯಲ್ಲಿ ಈ ರೀತಿಯ ಸಾರ್ವಜನಿಕರ ಸಹಕಾರದಿಂದ ಶೇ.೯೫ ರಿಂದ ೧೦೦ರ? ಯೋಜನೆಗಳು ಗುರಿ ಸಾಧಿಸಬಹುದು ಎಂಬುದರ ತಿಳುವಳಿಕೆಯನ್ನು ತರುವುದು ಉದ್ದೇಶವಾಗಿದೆ. ಬೇಸಿಗೆಯಲ್ಲಿ ಕಾಡ್ಗಿಚ್ಚು ಹರಡದಂತೆ ಬೆಂಕಿ ರಸ್ತೆಯನ್ನು ಈಗಾಗಲೇ ನಿರ್ಮಿಸಲಾಗಿದೆ. ಬೀಡಾಡಿ ದನಗಳು ನುಸುಳದಂತೆ ಒಂದು ಗೇಟ್ ನಿರ್ಮಾಣ ಮಾಡಿದ್ದೇವೆ. ಬೇಸಿಗೆಯಲ್ಲಿ ನೀರು ಕೊಟ್ಟು ಎಲ್ಲ ಗಿಡಗಳನ್ನು ಉಳಿಸಿಕೊಂಡು ಲಯನ್ಸ್ ಸುವರ್ಣ ವನ ಎಂಬ ಪರಿಕಲ್ಪನೆ ಮಾಡಲಾಗಿದೆ ಎಂದರು.

೫೦ ಜನ ಸಮಾಜ ಸೇವೆಯಲ್ಲಿ ವಿವಿಧ ಕ್ಷೇತ್ರದಲ್ಲಿನ ದುರೀಣರನ್ನು ಗುರುತಿಸಿ ಅಭಿನಂದಿಸುವ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದೆ. ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಮಧುವನ ಲೇಔಟಿನ ಮೊದಲ ಮಹಡಿಯಲ್ಲಿ ತನ್ನ ಕಟ್ಟಡದ ವಿಸ್ತರಣಾ ಕಾಮಗಾರಿಯನ್ನು ಸುಮಾರು ೪೦ ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ದಾನಿಗಳ ಸಹಕಾರದೊಂದಿಗೆ ನಿರ್ಮಾಣ ಮಾಡಿ ಸಾರ್ವಜನಿಕ ಸೇವೆಗೆ ಸಿದ್ಧಗೊಳಿಸುವುದು ಯೋಜನೆಯಾಗಿದೆ ಎಂದು ಹೇಳಿದರು.

ಈ ವ?ದಲ್ಲಿ ದಾನಿಗಳ ಪ್ರಾಯೋಜಿಕತೆಯಲ್ಲಿ ೨-೩ ಅತ್ಯಗತ್ಯ ಪ್ರಯಾಣಿಕರ ತಂಗುದಾಣವನ್ನು ವಿನೂತನ ಶೈಲಿಯಲ್ಲಿ ಆಕ?ಕವಾಗಿ ನಿರ್ಮಿಸುವ ದಿಸೆಯಲ್ಲಿ ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ ಚಿಕ್ಕಮಗಳೂರು ನಗರದ ರುಕ್ಮಿಣಿಯಮ್ಮ ಸಾರ್ವಜನಿಕ ಹೆರಿಗೆ ಆಸ್ಪತ್ರೆಯಲ್ಲಿ ಒಂದು ವಿಶ್ರಾಂತಿ ಹಾಗೂ ತಂಗುದಾಣವನ್ನು ಸುಮಾರು ೬ ಲಕ್ಷ ರೂಪಾಯಿಗಳಲ್ಲಿ ನಿರ್ಮಿಸುವ ಯೋಜನೆಗೆ ಆದ್ಯತೆ ನೀಡಿದ್ದೇನೆಂದರು.

ಈಗಾಗಲೇ ಪ್ರಸ್ತುತ ವ?ದಲ್ಲಿ ೨೮ ಹೊಸ ಸದಸ್ಯರು ನಮ್ಮ ಸಂಸ್ಥೆಗೆ ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ. ಆಸಕ್ತ ಪ್ರತಿಫಲಾಪೇಕ್ಷೆ ಇಲ್ಲದ ಸೇವಾ ಮನೋಭಾವದ ನಾಗರೀಕರು ನಮ್ಮ ಸಂಸ್ಥೆಯನ್ನು ಸೇರಿಕೊಳ್ಳಲು ಈ ಮೂಲಕ ಕರೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ನಾರಾಯಣಸ್ವಾಮಿ, ಬಾಲಕೃ?, ಡಾ||ಜೆ.ಪಿ ಕೃ?ಗೌಡ, ಎಚ್.ಆರ್ ಹರೀಶ್, ಸುಧಾಕರ್, ಎಂ.ಆರ್ ನಾಗರಾಜ್ ಇದ್ದರು

Lions District Governor Dr. Melvin D’Souza press conference

About Author

Leave a Reply

Your email address will not be published. Required fields are marked *

You may have missed