September 7, 2024

ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಮಹಿಷಾ ದಸರಾ ಆಚರಣೆ ರದ್ದು

0
ದಸರಾ ಆಚರಣೆ ಸಮಿತಿಯ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್ ಪತ್ರಿಕಾಗೋಷ್ಠಿ

ದಸರಾ ಆಚರಣೆ ಸಮಿತಿಯ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಮಹಿ? ದಸರಾ ಆಚರಣೆಯನ್ನು ರದ್ದುಗೊಳಿಸಿದ ಜಿಲ್ಲಾಡಳಿತದ ಕ್ರಮವನ್ನು ಮಹಿಷಾ ದಸರಾ ಆಚರಣಾ ಸಮಿತಿ ಮುಖಂಡರುಗಳು ತೀವ್ರವಾಗಿ ಖಂಡಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಿಷಾ ದಸರಾ ಆಚರಣೆ ಸಮಿತಿಯ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್ ಇನ್ನಿತರರು ಕಾಣದ ಕೈಗಳು ಪಿತೂರಿ ನಡೆಸಿ ಮಹಿಷಾ ದಸರಾ ಆಚರಣೆ ತಡೆಯುವಂತೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರುವ ?ಡ್ಯಂತ್ರ ನಡೆಸಿದೆ ಎಂದು ಆರೋಪಿಸಿದರು.

ಮೂಲ ನಿವಾಸಿಗಳ ಇತಿಹಾಸ ಮತ್ತು ಮೂಲ ನಿವಾಸಿಗಳ ದೊರೆಯಾದ ಮಹಿಷನ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಸಲುವಾಗಿ ಮಹಿಷಾ ದಸರಾವನ್ನು ಏರ್ಪಡಿಸಲಾಗಿದ್ದು ಆದರೆ ಕಾರ್ಯಕ್ರಮಕ್ಕೆ ಪ್ರೊ|| ಭಗವಾನ್‌ರನ್ನು ಬರದಂತೆ ಮಾಡುವ ಸಲುವಾಗಿ ಇಡೀ ಕಾರ್ಯಕ್ರಮವನ್ನು ನಡೆಸದಂತೆ ಮಾಡಿರುವುದು ಜಿಲ್ಲಾಡಳಿತ ಸಾಂವಿಧಾನಿಕ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬ ಸಂಕೇತವಾಗಿದೆ ಎಂದು ಹೇಳಿದರು.

ಮಹಿ? ದಸರಾ ಆಚರಣೆಯಿಂದ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ತೊಂದರೆ ಆಗುತ್ತದೆ ಎಂಬ ಕಾರಣ ನೀಡಿ ನಿ?ದಾಜ್ಞೆ ಜಾರಿಗೊಳಿಸಲಾಗಿತ್ತು. ಈ ಹಿಂದೆ ನಡೆದಿರುವ ಅನೇಕ ಕಾರ್ಯಕ್ರಮಗಳಿಂದ ಪ್ರವಾಸಿಗರಿಗೆ ತೊಂದರೆ ಆಗಿರಲಿಲ್ಲವೇ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಯ ಮುಖವಾಣಿಯಂತೆ ತೀರ್ಮಾನ ಕೈಗೊಂಡಿದ್ದಾರೆ, ಕಾರ್ಯಕ್ರಮದ ಸಂಘಟಕರನ್ನು ಕನಿ? ಸೌಜನ್ಯಕ್ಕಾದರೂ ಮಾತನಾಡಿಸಿ ನಿರ್ಧಾರ ಕೈಗೊಳ್ಳಬಹುದಾಗಿತ್ತು ಆದರೆ ಜಿಲ್ಲಾಧಿಕಾರಿಗಳು ಏಕಾ ಪಕ್ಷೀಯ ನಿರ್ಧಾರ ಕೈಗೊಂಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಆರೋಪಿಸಿದರು.

ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್ ಅವರು ದಲಿತ ಸಂಘಟನೆಗಳ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಖಂಡಿಸಿದ ಅವರು ರಾಜಶೇಖರ್ ಮಾತನಾಡಿರುವ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಲು ಉತ್ತರ ನೀಡಲು ನಮಗೂ ಗೊತ್ತಿದೆ. ಅನೇಕ ಪ್ರಗತಿಪರ ಒಕ್ಕಲಿಗ ಮುಖಂಡರು ಮಹಿಷಾ ದಸರಾಕ್ಕೆ ಬೆಂಬಲಿಸಿದ್ದಾರೆ ಆದರೆ ಕಾಣದ ಕೈಗಳ ಪಿತೂರಿಯಿಂದ ಒಕ್ಕಲಿಗರ ಸಂಘದ ಮೂಲಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದು, ಈ ಷಡ್ಯಂತ್ರವನ್ನು ಮುಂದಿನ ದಿನಗಳಲ್ಲಿ ರಾಜಕೀಯವಾಗಿಯೇ ನಿರ್ಧರಿಸುತ್ತೇವೆಂದು ಹೇಳಿದರು.

ಒಕ್ಕಲಿಗರ ಸಂಘವಾಗಲೀ, ಇನ್ನಿತರೆ ಯಾವುದೇ ಸಂಘಟನೆಗಳಾಗಲೀ ಎ? ಅಡ್ಡಿಪಡಿಸಿದರೂ ನಮ್ಮ ಸಂಘಟನೆಗಳು ಜಗ್ಗುವುದಿಲ್ಲ. ಮೂಲ ನಿವಾಸಿಗಳು ಇತಿಹಾಸ ತಿಳಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಯೇ ತೀರುತ್ತೇವೆ ಎಂದು ಸವಾಲು ಹಾಕಿದರು.

ಹುಣಸೆಮಕ್ಕಿ ಲಕ್ಷ್ಮಣ ಮಾತನಾಡಿ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್ ಅವರಿಗೆ ದಲಿತರ ಬಗ್ಗೆ ಏನು ಗೊತ್ತಿಲ್ಲ ಅವರಿಂದ ದಲಿತರು ಪಾಠ ಕಲಿಯಬೇಕಾಗಿಲ್ಲ, ಬಿ.ಕೆ ಸುಂದರೇಶ್‌ರಂತಹ ನಾಯಕರು ಹೆಚ್.ಹೆಚ್ ದೇವರಾಜ್ ಅಂತಹ ನಾಯಕರುಗಳು ಇನ್ನೂ ಅನೇಕರು ದಲಿತರ ಪರವಾಗಿ ಜಾತ್ಯಾತೀತವಾಗಿ ನಡೆದುಕೊಂಡು ಬಂದಿರುವುದು ಇತಿಹಾಸವಿದೆ ಅಂತಹವರ ಮಧ್ಯೆ ರಾಜಶೇಖರ್ ಯಾವ ಲೆಕ್ಕಕ್ಕೂ ಇಲ್ಲ ಎಂದು ಟೀಕಿಸಿದರು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ವಕೀಲ ಪರಮೇಶ್ ಮಾತನಾಡಿ, ಯಾವ ಘೋ?ಣೆ ಇಲ್ಲದಂತೆ ಯಾರ ವಿರುದ್ಧವು ಅಲ್ಲದೆ ಮಹಿ? ದಸರಾ ಆಚರಿಸುತ್ತಿದ್ದಾಗ ಅದನ್ನು ಎಸ್‌ಪಿ ಮತ್ತು ಡಿಸಿ ತಡೆದಿದ್ದು, ಕಾಯಾಂಗ ವಿಫಲವಾಗಿದೆ. ಈ ಬಗ್ಗೆ ಶಾಸಕರೂ ಕೂಡ ಮೌನವಾಗಿದ್ದು ಮಾತನಾಡಿಲ್ಲ, ಮೂಲ ನಿವಾಸಿಗಳ ಇಂತಹ ಕಾರ್ಯಕ್ರಮಕ್ಕೆ ಈ ರೀತಿ ನಿಬಂಧ ಹಾಕಿದರೆ ಸಂಘಟನೆಗಳಿಗೆ ಮತ್ತ? ಪ್ರೇರಣೆ ಬರುತ್ತದೆ. ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮ ನಡೆಸುವುದಾಗಿ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಇತರ ಮುಖಂಡರುಗಳಾದ ಹರೀಶ್‌ಮಿತ್ರ, ಪುರ ಚಂದ್ರಶೇಖರ್, ಹಿರೇಮಗಳೂರು ಸುರೇಶ್ ಮತ್ತಿತರರಿದ್ದರು.

Mahisha Dussehra celebrations are cancelled

About Author

Leave a Reply

Your email address will not be published. Required fields are marked *

You may have missed