September 8, 2024

ಆರೋಗ್ಯವಂತ ಸಮಾಜ ಸೃಷ್ಟಿಯಾಗಲು ಮಹಿಳಾ ಸಂಘಗಳು ಸಹಕಾರಿ – ರಮೇಶ್‌ಬಾಬು

0
ಶ್ರೀ ಚಿಂತಾಮಣಿ ಸರಸ್ವತಿ ಮಹಿಳಾ ಮಂಡಳಿಯ ೧೩ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

ಶ್ರೀ ಚಿಂತಾಮಣಿ ಸರಸ್ವತಿ ಮಹಿಳಾ ಮಂಡಳಿಯ ೧೩ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

ಚಿಕ್ಕಮಗಳೂರು: ಆರೋಗ್ಯವಂತ ಸಮಾಜ ಸೃಷ್ಟಿಯಾಗಲು ಮಹಿಳಾ ಸಂಘಗಳು ಸಹಕಾರಿಯಾಗುತ್ತದೆ ಎಂದು ಅರಣ್ಯ ಅಧಿಕಾರಿ ರಮೇಶ್‌ಬಾಬು ತಿಳಿಸಿದರು.
ನಗರದ ಗವನಹಳ್ಳಿಯ ಶ್ರೀನಿವಾಸ ನಗರದ ಸಮುದಾಯ ಭವನದಲ್ಲಿ ಶ್ರೀ ಚಿಂತಾಮಣಿ ಸರಸ್ವತಿ ಮಹಿಳಾ ಮಂಡಳಿಯ ೧೩ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಮಹಿಳೆಯರು ಸಂಘ ಸಂಸ್ಥೆಗಳ ಮೂಲಕ ಹೆಚ್ಚು ಕ್ರಿಯಾಶೀಲರಾಗುವುದರ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಕೈಗೊಂಡು ಸಮಾಜಕ್ಕೆ ಮಾದರಿ ಸಂಘವಾಗಿ ಇರಬೇಕೆಂದು ತಿಳಿಸಿದರು.
ಶ್ರೀನಿವಾಸ ನಗರದಲ್ಲಿ ಚಿಂತಾಮಣಿ ಸರಸ್ವತಿ ಸಂಘವು ಸಕ್ರಿಯವಾಗಿದ್ದು, ಸ್ಥಳಿಯರಿಗೆ ಆರೋಗ್ಯ ತಪಾಸಣೆ ಶಿಬಿರ, ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಿಂದ ಹಲವು ಕಾರ್ಯಕ್ರಮಗಳನ್ನು ಮಾಡುತ್ತ ಹೆಚ್ಚು ಕ್ರಿಯಾಶೀಲವಾಗಿ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ನರೇಂದ್ರ ಮಾತನಾಡಿ ಪೋಷಕರು ಮಕ್ಕಳಿಗೆ ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡುವುದರ ಜೊತೆಗೆ, ಪೋಷಕರು ತಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸಿಕೊಡಬೇಕು, ರಾಮಾಯಣ, ಮಹಾಭಾರತ ಮತ್ತು ಸಂಸ್ಕೃತದ ಬಗ್ಗೆ ವಿಶೇಷ ಆಸಕ್ತಿ ಹೊಂದಿ, ತಮ್ಮ ಮನಃ ಶಾಂತಿಗಾಗಿ ಯೋಗ, ಧ್ಯಾನ ಮತ್ತು ಭಜನೆಗಳನ್ನು ಅಭ್ಯಾಸಿಸಬೇಕಾಗಿ ತಿಳಿಸಿದರು.
ನಗರಸಭೆ ಸದಸ್ಯ ಪರಮೇಶ್‌ರಾಜ್ ಅರಸ್ ಮಾತನಾಡಿ ಮಹಿಳೆಯರು ಹೆಚ್ಚು ಕ್ರಿಯಾಶೀಲರಾಗಿ ಇರಲು ಸಂಘ-ಸಂಸ್ಥೆಗಳು ಸಹಕಾರಿಯಾಗುತ್ತವೆ, ತಮ್ಮ ಆರೋಗ್ಯ ನೋಡಿಕೊಳ್ಳುವುದರ ಜೊತೆಗೆ ಸಮಾಜದ ಆರೋಗ್ಯದ ಬಗ್ಗೆಯು ವಿಶೇಷ ಕಾಳಜಿ ವಹಿಸಬೇಕೆಂದು ತಿಳಿಸಿದರು.
ಶ್ರೀ ಚಿಂತಾಮಣಿ ಸರಸ್ವತಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಸರಸ್ವತಿಲಕ್ಷ್ಮಣಗೌಡ ಮಾತನಾಡಿ ನಮ್ಮ ಸಂಘವು ಅತ್ಯಂತ ಕ್ರಿಯಾಶೀಲವಾಗಿರುವುದರ ಜೊತೆಗೆ ಸ್ಥಳಿಯರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ, ಸಂಘದ ವತಿಯಿಂದ ಪ್ರತಿ ವರ್ಷ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಚಿಂತಾಮಣಿ ಟ್ರಸ್ಟ್ ಕಾರ್ಯದರ್ಶಿ ಬೋಬೇಗೌಡ, ಖಜಾಂಚಿ ಗೋಪಾಲಕೃಷ್ಣ, ಪ್ರದಾನ ಅರ್ಚಕರಾದ ಅಶೋಕ್‌ಶರ್ಮ, ಮಹಿಳಾ ಮಂಡಳಿ ಉಪಾಧ್ಯಕ್ಷೆ ರಾಧಾರುದ್ರೇಶ್, ಗೌರವಾಧ್ಯಕ್ಷೆ ರೇಣುಕಾಚಂದ್ರಪ್ಪ, ಕಾರ್ಯದರ್ಶಿ ಶೃತಿರಮೇಶ್, ಖಜಾಂಚಿ ದೀಪರಂಗನಾಥ್, ಸಹಕಾರ್ಯದರ್ಶಿ ಪ್ರೇಮಾವಿಜಯಕುಮಾರ್, ಹೇಮಾಕುಮಾರ್, ಮಾಜಿ ಸಧ್ಯಕ್ಷೆ ರೇಖಾಜಯಕುಮಾರ್, ರೇಖಾರಘು, ಮಂಜುಳಾರವೀಂದ್ರ, ವೇದಾಆನಂದ್, ರಶ್ಮಿಶ್ರೀಕಾಂತ್, ಗೌರಿತಮ್ಮಣ್ಣಗೌಡ, ಕವಿತಾಚರಣ್, ಚಂಪಾಮೋಹನ್, ಮೈನಾಮಂಜುನಾಥ್ ಇತರರು ಉಪಸ್ಥಿತರಿದ್ದರು, ವೀಣಾಶೆಟ್ಟಿ ಸ್ವಾಗತಿಸಿ, ಸೌಮ್ಯ, ಮೈನಾ ನಿರೂಪಿಸಿ, ಆಶಾ ವಂದಿಸಿದರು.
13th Anniversary Program of Sri Chintamani Saraswati Mahila Mandal

About Author

Leave a Reply

Your email address will not be published. Required fields are marked *

You may have missed