September 20, 2024

ಅಂಬು ಒಡೆಯುವ ಮೂಲಕ ಆರದವಳ್ಳಿ ಗ್ರಾಮದಲ್ಲಿ ನವರಾತ್ರಿ ಸಂಪನ್ನ

0
ಆರದವಳ್ಳಿ ಗ್ರಾಮದಲ್ಲಿ ಅಂಬು ಒಡೆಯುವ ಕಾರ್ಯಕ್ರಮ

ಆರದವಳ್ಳಿ ಗ್ರಾಮದಲ್ಲಿ ಅಂಬು ಒಡೆಯುವ ಕಾರ್ಯಕ್ರಮ

ಚಿಕ್ಕಮಗಳೂರು: ನವರಾತ್ರಿಯ ಕೊನೆಯ ದಿನವಾದ ಇಂದು ವಿಜಯದಶಮಿ ಆಚರಣೆ ಯನ್ನು ತಾಲೂಕಿನ ಅಂಬಳೆ ಹೋಬಳಿಯ ಆರದವಳ್ಳಿ ಗ್ರಾಮದಲ್ಲಿ ಅಂಬು ಒಡೆಯುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಗ್ರಾಮದ ಪಟೇಲ ವಂಶಸ್ಥರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್ ಮಹೇಶ್ ನೇತೃತ್ವದಲ್ಲಿ ೨೬ನೇ ವರ್ಷದ ಅಂಬು ಮಹೋತ್ಸವ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳೊಂದಿಗೆ ಅತ್ಯಂತ ಸಂಭ್ರಮ ದಿಂದ ನೆರವೇರಿತು.

ಗ್ರಾಮಸ್ಥರು ಗ್ರಾಮದೇವರನ್ನು ಹೊತ್ತು ಊರಿನ ಸುತ್ತ ಮೆರವಣಿಗೆ ನಡೆಸುವ ಮೂಲಕ ಅಂಬು ಒಡೆ ಯುವ ಸ್ಥಳಕ್ಕೆ ಸಾಗಿದರು. ಸಾಂಪ್ರದಾಯಿಕ ಅಲಂಕೃತ ಉಡುಗೆಯೊಂದಿಗೆ ಸಿಂಗಾರಗೊಂಡಿದ್ದ ಪಟೇಲ ವಂಶಸ್ಥ ರಾದ ಎ.ಎನ್.ಮಹೇಶ್ ಹಾಗೂ ಕುಟುಂಬಸ್ಥರನ್ನು ಊರಿನ ಮುಖಂಡರು, ಗ್ರಾಮಸ್ಥರುಗಳು ವಾದ್ಯಗೋಷ್ಠಿಯೊ ಂದಿಗೆ ಮೆರವಣಿಗೆ ಮೂಲಕ ಗ್ರಾಮದ ಅಂಬು ಹೊಡೆಯುವ ದೊಡ್ಡಕೆರೆ ಬಳಿಗೆ ಕರೆ ತರಲಾಯಿತು.

ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿ ಬನ್ನಿ ಮರದ ಬಳಿ ಶಮಿ ಪೂಜೆ ನೆರವೇರಿಸಿದ ನಂತರ ಊರಿನ ದೊಡ್ಡ ಕೆರೆ ಬಳಿಕ ಏರ್ಪಡಿಸಿದ ಅಂಬು ಹೊಡೆಯುವ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಬಾಳೆಗೊನೆಗೆ ಬಿಲ್ಲು ಹೊಡೆಯುವ ಮೂಲಕ ತುಂಡರಿಸಿದರು. ನಂತರ ಬಂದೂರಿನಿಂದ ಬಾಳೆ ದಿಂಡನ್ನು ತುಂಡರಿಸಲಾಯಿತು.

ಶ್ರೀ ಆಂಜನೇಯ ಸ್ವಾಮಿ, ಮಲ್ಲೇಶ್ವರಸ್ವಾಮಿ, ಗ್ರಾಮದೇವತೆಗಳಾದ ಮಾರಮ್ಮದೇವಿ ಹಾಗೂ ಭೂತಪ್ಪ ದೇವರ ಉತ್ಸವದೊಂದಿಗೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಂಪ್ರದಾಯಿಕವಾಗಿ ಬಾಳೆ ಗೊನೆಗೆ ಬಿಲ್ಲು ಹೊಡೆಯುವ ಮೂಲ ಅಂಬಿನ ಉತ್ಸವವನ್ನು ಯಶಸ್ವಿಗೊಳಿಸಿದರು.

ವಿಜಯದಶಮಿ ಅಂಬುಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎ.ಎನ್.ಮಹೇಶ್ ವಿಜಯದಶಮಿ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ವಿಜಯನಗರ ಅರಸರ ಕಾಲದಿಂದಲೂ ದಸರಾ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ಮೈಸೂರು ಅರಸರ ಕಾಲದಲ್ಲಿ ನವರಾತ್ರಿ ದಸರಾಗೆ ಮತ್ತಷ್ಟು ಮಹತ್ವ ಬಂದಿದೆ ಎಂದರು.

ರಾಜ ಪ್ರಜಾಪ್ರಭುತ್ವದ ಕಾಲದಲ್ಲಿ ಸ್ಥಳೀಯ ಆಡಳಿತ ನಡೆಸುವ ಪಟೇಲರನ್ನು ನೇಮಿಸಿ ಅವರಿಂದ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತಿತ್ತು. ಅಂದಿನಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ತಮ್ಮ ಕುಟುಂಬದ ಪೂರ್ವಜರು ಪಟೇಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದರು.

ಅಂಬು ಉತ್ಸವವು ಅನೇಕ ವರ್ಷಗಳಿಂದ ಆರದವಳ್ಳಿಯ ಗ್ರಾಮದಲ್ಲಿ ಪಟೇಲ ವಂಶಸ್ಥರಿಂದ ಚಾಲನೆ ದೊರೆಯುತ್ತಿದೆ. ವಿಜಯದಶಮಿಯಂದು ಅಂಬುಹೊಡೆಯುವ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಆಹ್ವಾನ ನೀಡುವ ಮೂಲಕ, ಸಂಪ್ರದಾಯಿಕ ಉಡುಗೆ, ವಾದ್ಯಗೋಷ್ಠಿಯೊಂದಿಗೆ ಕರೆತಂದು ವಿಶೇಷ ಗೌರವದಿಂದ ಕಾಣುತ್ತಾರೆ. ಇದಕ್ಕೆ ನಮ್ಮ ಪೂರ್ವಜರು, ಗ್ರಾಮಸ್ಥರು, ಹಾಗೂ ಮುಖಂಡರ ಸಹಕಾರವೇ ಕಾರಣ ಎಂದರು.

ಮೈಸೂರು ಅರಸ್ ಆಳ್ವಿಕೆಯ ಸಂದರ್ಭದಲ್ಲಿ ಸಂಸ್ಥಾನದ ಆಡಳಿತವು ಅಲ್ಲಲ್ಲಿ ಪಟೇಲರ ನೇತೃತ್ವದಲ್ಲಿ ನಡೆಯುತ್ತಿತ್ತು. ಪಟೇಲರ ವ್ಯಾಪ್ತಿ ೨೦ ರಿಂದ ೩೦ ಹಳ್ಳಿಗಳಿದ್ದವು. ಮೈಸೂರಿನಲ್ಲಿ ಆರಂಭವಾದ ಸಾಂಪ್ರ ದಾಯಿಕ ದಸರಾ ಕಾರ್ಯಕ್ರಮ ನಾಡಿನಾದ್ಯಂತ ನಡೆಯಬೇಕೆಂಬುದು ಅರಸರ ಅಭಿಲಾಷೆಯಾಗಿತ್ತು. ಅಂತೆಯೇ ನಾಡಿನ ಎಲ್ಲಾ ಭಾಗದಲ್ಲಿಯೂ ಅಲ್ಲಿಯ ಸಂಸ್ಥಾನದ ಪಟೇಲರ ನೇತೃತ್ವದಲ್ಲಿ ನಡೆಯಬೇಕೆಂದು ತೀರ್ಮಾನಿಸಲಾ ಯಿತು. ಅದರಂತೆ ಆರದವಳ್ಳಿ ಸೇರಿದಂತೆ ಎಲ್ಲಾ ಸಂಸ್ಥಾದಲ್ಲಿಯೂ ಆರಂಭಿಸಲಾಯಿತು.

ಸುಮಾರು ೧೦೦ ವರ್ಷಗಳ ಹಿಂದೆ ಆರದವಳ್ಳಿಯಲ್ಲಿ ಅಲ್ಲಿಯ ಪಟೇಲರಾದ ದೊಡ್ಡಪುಟ್ಟೇಗೌಡರು ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರ ನೇತೃತ್ವದಲ್ಲಿ ನಿರಂತರವಾಗಿ ನಡೆಯುತ್ತಿದ್ದು ಅವರ ಕಾಲಾನಂತರದಲ್ಲಿ ಕಾರ್ಯಕ್ರಮ ಸ್ಥಗಿತಗೊಂಡಿತು. ಬಳಿಕ ಚಾಲನೆಗೆ ಬಂದಿದ್ದು ಕಳೆದ ೨೬ ವರ್ಷಗಳ ಹಿಂದೆ ಗ್ರಾಮಸ್ಥರು ಊರಿನ, ಹಿರಿಯರು ಸೇರಿದಂತೆ ಪಟೇಟರ ವಂಶಸ್ಥರಾದ ತಮ್ಮನ್ನು ಕೋರಿಕೊಂಡ ಹಿನ್ನೆಲೆಯಲ್ಲಿ ನಿರಂತ ರವಾಗಿ ವಿಜ್ರಂಭಣೆಯಿಂದ ಗ್ರಾಮದಲ್ಲಿ ದಸರಾ ಕಾರ್ಯಕ್ರಮ ನಡೆಯುತ್ತಿದೆ.

ನವರಾತ್ರಿಯ ಪ್ರಾರಂಭದ ದಿನ ಗ್ರಾಮದೇವರುಗಳನ್ನು ಪಟ್ಟಕ್ಕೆ ಕೂರಿಸಿ ಪೂಜಾ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ನಡೆಯಲಿದ್ದು ೯ ದಿನಗಳ ಕಾಲ ದೇವರ ಪೂಜಾ ಕೈಂಕಾರ್ಯಗಳು ನಡೆಯುತ್ತದೆ. ಕೊನೆಯ ದಿನವಾದ ವಿಜಯದಶಮಿ ವಿಜ್ರಂಭಣೆಯಿಂದ ನೆರವೇರಲಿರುತ್ತದೆ.
ಈ ಸಂದರ್ಭದಲ್ಲಿ ಹರಿಹರದಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶಾರದಾ ಮಾಸ್ತೇಗೌಡ, ಸದಸ್ಯೆ ಲಲಿತಾ ಶಿವಾನಂದ್, ಯುವ ಮುಖಂಡ ಶ್ರೀಕಾಂತ್, ಗ್ರಾಮದ ಅಧ್ಯಕ್ಷ ಪಾಪೇಗೌಡ, ಮುಖಂಡರುಗಳಾದ ವೀರಭದ್ರಚಾರ್, ಎ.ಎಂ. ನಿಂಗೇಗೌಡ, ಎ.ಎಂ.ಯೋಗೀಶ್, ಎ.ಎಂ.ಚಂದ್ರೇಗೌಡ, ಪುಟ್ಟೇಗೌಡ, ಮಾಸ್ತೇಗೌಡ, ಅಣ್ಣೇಗೌಡ, ಜಯಣ್ಣ, ಕುಬೇಂದ್ರಚಾರ್, ಸಣ್ಣೇಗೌಡ, ನಟರಾಜ್, ಲೋಕೇಶ್, ಮಹಿಳೆಯರು, ವೃದ್ದರು, ಮಕ್ಕಳು ಭಾಗವಹಿಸಿ ಸಂಪ್ರದಾಯ ಕಾರ್ಯಕ್ರಮಕ್ಕೆ ಮೆರಗು ಮೂಡಿಸಿದರು.

Arrow breaking program in Aradavalli village

About Author

Leave a Reply

Your email address will not be published. Required fields are marked *