September 20, 2024

ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ

0
ಹುಲ್ಲೇಹಳ್ಳಿ ಗ್ರಾಮದಲ್ಲಿ ದಸರ ಹಬ್ಬದ ಪ್ರಯುಕ್ತ ಉಗ್ರಂ ಬಾಯ್ಸ್ ಹಾಗೂ ಗ್ರಾಮಮಸ್ಥರು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಹೊಲು ಬೆಳಕಿನ ಕಬ್ಬಟ್ಟಿ ಪಂದ್ಯಾವಳಿ ಕಾರ್ಯಕ್ರಮವ

ಹುಲ್ಲೇಹಳ್ಳಿ ಗ್ರಾಮದಲ್ಲಿ ದಸರ ಹಬ್ಬದ ಪ್ರಯುಕ್ತ ಉಗ್ರಂ ಬಾಯ್ಸ್ ಹಾಗೂ ಗ್ರಾಮಮಸ್ಥರು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಹೊಲು ಬೆಳಕಿನ ಕಬ್ಬಟ್ಟಿ ಪಂದ್ಯಾವಳಿ ಕಾರ್ಯಕ್ರಮವ

ಬೀರೂರು: ಆಧುನಿಕತೆಯ ಭರಾಟೆಯಲ್ಲಿ ಅಳಿವಿನಂಚಿನಲ್ಲಿರುವ ಗ್ರಾಮೀಣ ಸೊಗಡಿನ ದೇಶಿ ಕ್ರೀಡೆ ಕಬ್ಬಡ್ಡಿಗೆ ಎಲ್ಲರೂ ಪ್ರೋತ್ಸಾಹ ನೀಡುವುದು ಅತ್ಯವಶ್ಯಕ ಎಂದು ಬಿಜೆಪಿ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ಅವರು ಹುಲ್ಲೇಹಳ್ಳಿ ಗ್ರಾಮದಲ್ಲಿ ದಸರ ಹಬ್ಬದ ಪ್ರಯುಕ್ತ ಉಗ್ರಂ ಬಾಯ್ಸ್ ಹಾಗೂ ಗ್ರಾಮಮಸ್ಥರು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಹೊಲು ಬೆಳಕಿನ ಕಬ್ಬಟ್ಟಿ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಗ್ರಾಮೀಣ ಕ್ರೀಡೆ ಆಗಿರುವ ಕಬಡ್ಡಿ ಸುಮಾರು ೪೦೦೦ ವ?ಗಳ? ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕ? ಹೆಗ್ಗಳಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ. ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಅಂದರೆ ಗ್ರಾಮೀಣ ಜನರಿಗೆ ಬಹಳ ಇ?. ಇಂತಹ ಕ್ರೀಡೆಗಳಿಗೆ ಗ್ರಾಮೀಣ ಜನರು ಇನ್ನಷ್ಟು ಪ್ರೋತ್ಸಾಹ ನೀಡಿ ಕಬ್ಬಡ್ಡಿ ಪಟುಗಳನ್ನು ಹೊರತರಲಿ ಎಂದರು.

ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಜೋಡಿತಿಮ್ಮಾಪುರ ಗೋವಿಂದಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾವಳಿಯಿಂದ ದೇಶಿ ಕ್ರೀಡೆಗಳು ನಶಿಸಿ ಹೋಗುತ್ತವೆ.ಅಂತಹುದ್ದರಲ್ಲಿ ಹುಲ್ಲೇಹಳ್ಳಿ ಯುವಕರು ಕಬ್ಬಡ್ಡಿ ಅಂತಹ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿ ಪಂದ್ಯಾವಳಿ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಹುಲ್ಲೇಹಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಎಂ.ಲಕ್ಷ್ಮಣ್ ಮಾತನಾಡಿ, ಯುವಕರು ಜೀವನದಲ್ಲಿ ಉಜ್ವಲ ಭವಿ? ಹೊಂದಬೇಕಾದರೆ ಉತ್ತಮ ಆರೋಗ್ಯದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಅಂದಾಗ ಮಾತ್ರ ಯುವಕರ ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯ. ಪ್ರಸ್ತುತ ಯುವ ಸಮುದಾಯ ಕ್ರಿಕೆಟ್, ಮೊಬೈಲ್ ಗೇಮ್‌ಗಳ ಮಧ್ಯೆ ಕಾಲ ಕಳೆಯುತ್ತಿದೆ. ಗ್ರಾಮೀಣ ಕ್ರೀಡೆಗಳು ಕ್ರಮೇಣ ಮರೆಮಾಚುತ್ತಿವೆ. ಇವುಗಳನ್ನು ಪೋಷಿಸುವ ಕೆಲಸವಾಗಬೇಕಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಉತ್ಸಾಹ ಬಹುಮುಖ್ಯವಾಗಿದೆ. ಕಬಡ್ಡಿ, ಖೋ-ಖೋ ಸೇರಿದಂತೆ ಹತ್ತಾರು ಆಟಗಳನ್ನು ಆಡುವುದರಿಂದ ದೈಹಿಕವಾಗಿ ಸದೃಢರಾಗುವ ಜತೆಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಬೇಕು ಎಂದರು.

ವಕೀಲ ಗೋವಿಂದಸ್ವಾಮಿ ಮಾತನಾಡಿ, ಭಾರತದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುತ್ತಿದೆ. ಹೆಚ್ಚಿನ ಸಂಖ್ಯೆ ಯುವ ಸಮುದಾಯ ಪಠ್ಯೇತರವಾಗಿ ಇದೀಗ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರ ಕ್ರೀಡೆಗೆ ಮಾನ್ಯತೆ ದೊರೆಯುತ್ತಿದೆ ಎಂದರು.

ಕ್ರೀಡಾಕೂಟಗಳಲ್ಲಿ ಸೋಲು-ಗೆಲುವು ಸಾಮಾನ್ಯ ಅವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಕ್ರೀಡಾಪಟುವಿನಲ್ಲಿ ಬೆಳೆಯಬೇಕು. ಅಂದಾಗ ಮಾತ್ರ ಆ ಕ್ರೀಡಾಪಟು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಅದರಲ್ಲೂ ಸೋಲುವ ಭೀತಿಯಲ್ಲಿ ಕ್ರೀಡೆಗಳಿಂದ ದೂರ ಉಳಿಯುವವರ ಸಂಖ್ಯೆ ಹೆಚ್ಚಿದೆ. ಕ್ರೀಡೆಗಳಲ್ಲಿ ಸೋಲು-ಗೆಲವು ಸಹಜ. ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯವಾಗಿರುತ್ತದೆ. ಆದ್ದರಿಂದ ಯುವಕರು ಕ್ರೀಡೆಗಳಲ್ಲಿ ಭಾಗವಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲೆಯ ವಿವಿಧೆಡೆಯಿಂದಾ ಸುಮಾರು ೨೫ಕ್ಕೂ ಹೆಚ್ಚು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಹುಲ್ಲೇಹಳ್ಳಿ ಗ್ರಾ.ಪಂ.ಅಧ್ಯಕ್ಷ ಮೂರ್ತಪ್ಪ, ಉಗ್ರಂ ಬಾಯ್ಸ್‌ನ ನಂದಕುಮಾರ್, ಮಧು, ಪ್ರವೀಣ್, ನವೀನ್, ಯೋಗೀಶ್, ಅಶೋಕ್, ಸಂಜಯ್, ಸೇರಿದಂತೆ ಗ್ರಾಮಸ್ಥರು ಹಾಗೂ ಮತ್ತಿತರರು ಇದ್ದರು.

District Level Field Lighting Kabbatti Tournament Programme

About Author

Leave a Reply

Your email address will not be published. Required fields are marked *