September 20, 2024

ಪದವೀಧರ ಶಿಕ್ಷಕರ ಕ್ಷೇತ್ರ ಅಸ್ಥಿತ್ವಕ್ಕೆ ಬಂದ ನಂತರ ಆರೂ ಬಾರಿಯೂ ಬಿಜೆಪಿ ಗೆದ್ದಿದೆ

0

ಚಿಕ್ಕಮಗಳೂರು:  ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರದ ಮತದಾರರ ನೊಂದಣಿಗೆ ೨ ಹಂತದ ಮಹಾ ಸಂಪರ್ಕ ಅಭಿಯಾನವನ್ನು ಹಮ್ಮಿಕೊಂಡು ನವೆಂಬರ್ ೬ ರೊಳಗೆ ನೊಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮಾಜಿ ಶಾಸಕರು, ವಿಧಾನ ಪರಿಷತ್ ಚುನಾವಣಾ ಉಸ್ತುವಾರಿ ಸಿ.ಟಿ.ರವಿ ತಿಳಿಸಿದರು.

ಅವರು ಬುಧವಾರ ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ಐದೂ ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಇದೇ ತಿಂಗಳು ೨೭ ಮತ್ತು ೨೮ ರಂದು ಮೊದಲ ಹಂತದ ಮಹಾ ಸಂಪರ್ಕ ಅಭಿಯಾನ ಹಾಗೂ ೨ ನೇ ಹಂತದ ಮಹಾ ಸಂಪರ್ಕ ಅಭಿಯಾನವನ್ನು ನವೆಂಬರ್ ೩ ಮತ್ತು ೪ ರಂದು ಹಮ್ಮಿಕೊಳ್ಳೋಣ. ಅಕ್ಟೋಬರ್ ೬ ರೊಳಗೆ ನಮ್ಮೆಲ್ಲಾ ನೊಂದಣಿ ಕಾರ್ಯವನ್ನು ಕೊನೆ ದಿನಾಂಕ ಎಂದು ಭಾವಿಸಿ ಮುಕ್ತಾಯಗೊಳಿಸಬೇಕು ಎಂದು ತಿಳಿಸಿದರು.

ಪದವೀಧರ ಶಿಕ್ಷಕರ ಕ್ಷೇತ್ರ ಅಸ್ಥಿತ್ವಕ್ಕೆ ಬಂದ ನಂತರ ಆರೂ ಬಾರಿಯೂ ಬಿಜೆಪಿ ಗೆದ್ದಿದೆ. ಶಿಕ್ಷಕರ ಕ್ಷೇತ್ರದಲ್ಲೂ ೬ ಬಾರಿ ಚುನಾವಣೆ ನಡೆದು ೪ ಬಾರಿ ಬಿಜೆಪಿ ಗೆದ್ದಿದೆ. ಅತೀ ಹೆಚ್ಚು ಬಾರಿ ಗೆದ್ದ ದಾಖಲೆ ಬಿಜೆಪಿಯದ್ದಾಗಿದೆ. ಇದಕ್ಕೆ ಕಾರಣ ನಮ್ಮ ಸಂಘಟಿತ ಪ್ರಯತ್ನ ಎಂದರು.
ಹಳೇ ಮತದಾರರ ಪಟ್ಟಿಯನ್ನು ನಾವು ಬಳಸಿಕೊಳ್ಳಬೇಕು. ಅದರಲ್ಲಿ ಬಿಜೆಪಿ ಒಲವಿರುವವರು ಎಷ್ಟು ಮಂದಿ ಎಂದು ಗುರುತಿಸಿ ಶೇ.೧೦೦ ಮತದಾನ ಆಗುವಂತೆ ನೋಡಿಕೊಳ್ಳಬೇಕು. ಅದು ಶಿಕ್ಷಕರಿರಲಿ, ಪದವೀಧರರಲಿ. ಹಾಗೆಯೇ ಹೊಸ ನೊಂದಣಿ ಮಾಡುವಾಗ ನಮ್ಮ ಒಲವಿರುವವು ವರು ಎನ್ನುವ ಕಡೆಗೆ ಗಮನಕೊಟ್ಟು ಮಾಡಿಸಬೇಕು ಎಂದರು.

ಯಾರು ನೊಂದಣಿ ಮಾಡಿಸಿದ್ದು ಎನ್ನುವುದು ಮುಖ್ಯವಾಗುವುದಿಲ್ಲ. ಯಾರನ್ನು ನೊಂದಣಿ ಮಾಡಿಸಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಶಿಕ್ಷಕರ ಬೇರೆ ಸಂಘಟನೆಗಳಿವೆ, ಪ್ರಿನ್ಸಿಪಲ್ಸ್ ಅಸೋಸಿಯೇಷನ್, ಖಾಸಗಿ ಶಿಕ್ಷಕರ ಸಂಘ, ಅತಿಥಿ ಶಿಕ್ಷಕರ ಸಂಘಟನೆ, ಪದವೀಧರ ಶಿಕ್ಷಕರ ಸಂಘಟನೆ ಹೀಗೆ ಬೇರೆ ಸಂಘಟನೆಯವರನ್ನೆಲ್ಲಾ ಸಂಪರ್ಕಿಸಬೇಕು ಎಂದು ಸಲಹೆ ಮಾಡಿದರು.

ಅಭ್ಯರ್ಥಿ ಆಯ್ಕೆಯನ್ನು ಸ್ಥಳೀಯರ ಅಭಿಪ್ರಾಯ ಪಡೆದು ರಾಜ್ಯಕ್ಕೆ ಕಳಿಸಿ ನಂತರ ಕೇಂದ್ರೀಯ ಚುನಾವಣಾ ಸಮಿತಿಗೆ ಕಳಿಸಿ ಅಲ್ಲಿ ಅಂತಿಮ ತೀರ್ಮಾನ ಆಗಲಿದೆ ಎಂದು ತಿಳಿಸಿದರು.

ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕೆಲವರಲ್ಲಿ ಗೊಂದಲಗಳಿರಬಹುದು. ಆದರೆ ಇದುವರೆಗೆ ಜೆಡಿಎಸ್‌ನವರು ಎನ್‌ಡಿಎ ಭಾಗ ಮಾತ್ರ ಆಗಿದ್ದಾರೆ. ಚುನಾವಣೆ ಹೊಂದಾಣಿಕೆ ಚರ್ಚೆಯೇ ಪ್ರಾರಂಭವಾಗಿಲ್ಲ. ಈ ಕಾರಣಕ್ಕೆ ಯಾವುದೇ ಗೊಂದಲಕ್ಕೂ ಕಾರ್ಯಕರ್ತರು ಬೀಳುವುದು ಬೇಡ. ಒಂದು ವೇಳೆ ಹೊಂದಾಣಿಕೆ ಆಗುವುದೇ ಆದರೆ ನಾವು ನಮ್ಮ ಹಕ್ಕನ್ನು ಬಿಟ್ಟುಕೊಡುವ ಸಂದರ್ಭ ಬರುವುದಿಲ್ಲ ಎಂದರು.

ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಕೊಡಗು ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಶಿವಮೊಗ್ಗ ಜಿಲ್ಲಾಧ್ಯಕ್ಷ ಮೇಘರಾಜು, ಉಡುಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ವಿಧಾನ ಪರಿಷತ್ ಸದಸ್ಯ ಅರಣ್ ಕುಮಾರ್ ಇನ್ನಿತರೆ ಮುಖಂಡರು ಭಾಗವಹಿಸಿದ್ದರು. ನೈರುತ್ಯ ಪದವೀಧರ ಕ್ಷೇತ್ರದ ಜಿಲ್ಲಾ ಸಂಚಾಲಕ ಸಿ.ಆರ್.ಪ್ರೇಮ್‌ಕುಮಾರ್ ಸ್ವಾಗತಿಸಿ, ಶಿಕ್ಷಕರ ಕ್ಷೇತ್ರದ ಜಿಲ್ಲಾ ಸಂಚಾಲಕ ಎಚ್.ಎಸ್.ಪುಟ್ಟಸ್ವಾಮಿ ವಂದಿಸಿದರು.

A meeting of BJP leaders of five districts under the South-West Graduate and Teacher Constituency

About Author

Leave a Reply

Your email address will not be published. Required fields are marked *