September 19, 2024

ಜಿಲ್ಲಾ ಬಿಜೆಪಿ ರೈತಮೋರ್ಚಾ ಕಾರ್ಯಕರ್ತರಿಂದ ಮೆಸ್ಕಾಂ ಮುತ್ತಿಗೆ

0
ಜಿಲ್ಲಾ ಬಿಜೆಪಿ ರೈತಮೋರ್ಚಾ ಕಾರ್ಯಕರ್ತರಿಂದ ಮೆಸ್ಕಾಂ ಮುತ್ತಿಗೆ

ಜಿಲ್ಲಾ ಬಿಜೆಪಿ ರೈತಮೋರ್ಚಾ ಕಾರ್ಯಕರ್ತರಿಂದ ಮೆಸ್ಕಾಂ ಮುತ್ತಿಗೆ

ಚಿಕ್ಕಮಗಳೂರು:  ಅನಿಯಮಿತ ಲೋಡ್ ಶೆಡ್ಡಿಂಗ್ ಖಂಡಿಸಿ ಜಿಲ್ಲಾ ಬಿಜೆಪಿ ರೈತಮೋರ್ಚಾ ಕಾರ್ಯಕರ್ತರು ಇಂದು ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ ಚಿಕ್ಕಮಗಳೂರು ಮೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.

ರಾಜ್ಯ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಸರ್ಕಾರ ಉಚಿತ, ಖಚಿತ, ನಿಶ್ಚಿತ ಹೆಸರಿನಲ್ಲಿ ರೈತರು ಹಾಗೂ ಜನಸಾಮಾನ್ಯರನ್ನು ವಂಚಿಸಿರುವ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ರೈತರನ್ನು ನಿರ್ಲಕ್ಷಿಸಿದೆ.

ರೈತರಿಗೆ ಹಾಗೂ ಜನಸಾಮಾನ್ಯರಿಗೆ ವಿದ್ಯುತ್‌ನ್ನು ಕೊಡದೇ ಭ್ರಷ್ಟಾಚಾರದಲ್ಲಿ ಮುಳುಗಿ ರೈತರನ್ನು ಆತ್ಮಹತ್ಯೆ ಕಡೆಗೆ ಪ್ರೇರೇಪಿಸುತ್ತಿರುವ ಈ ಕಾಂಗ್ರೆಸ್ ಸರ್ಕಾರ ಅನಿಯಮಿತ ಲೋಡ್‌ಶೆಡ್ಡಿಂಗ್ ಮಾಡುವ ಮೂಲಕ ಕತ್ತಲೆ ಭಾಗ್ಯವನ್ನು ಕರುಣಿಸಿದೆ.

ನಿಗದಿತ ಸಮಯದಲ್ಲಿ ವಿದ್ಯುತ್‌ನ್ನು ನೀಡದೇ ರೈತರು ಬೆಳೆಗಳಿಗೆ ನೀರೊದಗಿಸಲು ಆಗದೇ ಶ್ರಮವಹಿಸಿ ರೈತ ಸಾಲ-ಸೂಲ ಮಾಡಿ ಬೀಜ, ಗೊಬ್ಬರ, ತಂದು ವಿದ್ಯುತ್ ಇಲ್ಲದೇ ನೀರೊದಗಿಸಲು ಆಗದೇ ಆತ್ಮಹತ್ಯೆ ದಾರಿಯನ್ನು ಹಿಡಿದಿದ್ದಾನೆ.

ಹಗಲು ರಾತ್ರಿ ಎನ್ನದೇ ದರೋಡೆಕೋರರ ಕೈಯಲ್ಲಿ ರಾಜ್ಯ ಸಿಕ್ಕಿ ರೈತರ ಜೀವ ಆತ್ಮಹತ್ಯೆ ಕಡೆಗೆ ಹೊರಳುತ್ತಿದೆ, ರೈತರ ಮೂಗಿಗೆ ತುಪ್ಪಸವರಿ ಮತವನ್ನು ಪಡೆದು ಈಗ ಅಧಿಕಾರದ ಲಾಲಸೆಯಿಂದ ಭ್ರಷ್ಟಾಚಾರದಲ್ಲಿ ಮುಳುಗಿ ರೈತರನ್ನು ಹಾಗೂ ರಾಜ್ಯದ ಜನರನ್ನು ವಂಚಿಸುತ್ತಿದೆ. ನಾವು ಕೇಳುತ್ತಿರುವುದು ವಿದ್ಯುತ್‌ನ್ನುಇದನ್ನು ನೀಡಲು ಆಗದೇ ದ್ರೋಹಬಗೆದು ಗಂಟಿನಹಿಂದೆ ಬಿದ್ದಿರುವ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟವನ್ನು ನಡೆಸಲು ಬಿಜೆಪಿ ರೈತಮೋರ್ಚಾ ಕಟಬದ್ಧವಾಗಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ವಾಡಿಕೆಗಿಂತ ಮಳೆ ಅಭಾವ ಜಾಸ್ತಿಯಾಗಿ ಬರ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಬಿಡಿಗಾಸನ್ನು ಬರ ನಿರ್ವಹಣೆಗೆ ನೀಡದೇ ರೈತರನ್ನು ವಂಚಿಸುತ್ತಿದ್ದು ಕನಿಷ್ಠಪಕ್ಷ ಜನ ಜಾನುವಾರುಗಳಿಗೆ ಹಾಗು ಪಶು-ಪಕ್ಷಿಗಳಿಗೆ ಕುಡಿಯುವ ನೀರಿಗೂ ವಿದ್ಯುತ್ ಒದಗಿಸದ ದ್ರೋಹ ಬಗೆದಿದೆ ಇದರ ವಿರುದ್ಧ ಇಂದಿನ ಹೋರಾಟದ ಉದ್ದೇಶ ವಾಗಿದ್ದು,ಕೂಡಲೇ ರಾಜ್ಯ ಸರ್ಕಾರ ಸಮಸ್ಯೆಗಳನ್ನು ಬಗೆ ಹರಿಸುವಂತೆ ಆಗ್ರಹಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಆರ್‌ಆನಂದಪ್ಪ ,ಗ್ರಾಮಾಂತರ ಮಂಡಲ ರೈತ ಮೋರ್ಚಾಅಧ್ಯಕ್ಷಜಿ.ಎನ್. ನಾಗೇಗೌಡ, ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ಸಫಾಯಿಕರ್ಮಾಚಾರಿನಿಗಮದ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳವಾಡಿ ರವೀಂದ್ರ,ಹಿರೇಮಗಳೂರು ಕೇಶವ ಸೇರಿದಂತೆ ಹಲವರಿದ್ದರು.

MESCOM siege by District BJP Raitamorcha workers

About Author

Leave a Reply

Your email address will not be published. Required fields are marked *

You may have missed