September 20, 2024
ಎ.ಐ.ಸಿ.ಸಿ ಕಾರ್ಯದರ್ಶಿ ಬಿ.ಎಂ ಸಂದೀಪ್ ಸುದ್ದಿಗೋಷ್ಠಿ

ಎ.ಐ.ಸಿ.ಸಿ ಕಾರ್ಯದರ್ಶಿ ಬಿ.ಎಂ ಸಂದೀಪ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ದೇಶದ ಜನರ ಭಾವನೆಗಳನ್ನು ಕೆರಳಿಸಿ ಮನಸನ್ನು ಬೇರೆ ಕಡೆ ಸೆಳೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದವರು ಇಂಡಿಯಾ ಎಂಬ ಹೆಸರು ಬದಲಾವಣೆ ಮಾಡುವ ಮಾತನಾಡುತ್ತಾ ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಎ.ಐ.ಸಿ.ಸಿ ಕಾರ್ಯದರ್ಶಿ ಬಿ.ಎಂ ಸಂದೀಪ್ ಆರೋಪಿಸಿದರು.

ಅವರು ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಭಾರತ ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಆಗಿನ ಜನಸಂಘ ಹಾಗೂ ಮಹಮದ್ ಅಲಿ ಜಿನ್ನ ವಿರೋಧ ವ್ಯಕ್ತಪಡಿಸಿದರು. ಸಂವಿಧಾನ ರಚನಾ ಸಮಿತಿಯವರು ಇಂಡಿಯಾ ಎಂಬುದು ಭಾರತ ಒಕ್ಕೂಟ ವ್ಯವಸ್ಥೆ ಎಂದು ಪರಿಗಣಿಸಿ ಸಂವಿಧಾನವನ್ನು ಅಂತಿಮಗೊಳಿಸಿದ್ದರು. ಈಗ ನರೇಂದ್ರ ಮೋದಿಯವರು ಇಂಡಿಯಾ ಹೆಸರು ಬದಲಾಯಿಸುವ ಮಾತನಾಡುತ್ತ ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ದೂರಿದರು.

ದೇಶದಲ್ಲಿ ಎನ್.ಡಿ.ಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ೯ವರೆ ವ? ಕಳೆದಿದೆ ಈ ಅವಧಿಯಲ್ಲಿ ಬೆಲೆ ಏರಿಕೆ ಜಿಎಸ್‌ಟಿ ತೆರಿಗೆ ಮುಂತಾದವುಗಳಿಂದ ಸಾಮಾನ್ಯರ ಜನರ ಜೀವನ ತತ್ತರಿಸಿದೆ. ಈ ಸರ್ಕಾರದ ವಿರುದ್ಧ ಜನಸಾಮಾನ್ಯರು ಬೇಸತ್ತಿದ್ದು ಈಗ ಜನರ ಮನಸ್ಸನ್ನು ದಿಕ್ಕು ತಪ್ಪಿಸುವ ಸಲುವಾಗಿ ಹೆಸರು ಬದಲಾವಣೆಯಂತಹ ಭಾವನೆಗಳನ್ನು ಕೆರಳಿಸುವ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಇಂಡಿಯಾ ಎಂಬ ಹೆಸರಿನಲ್ಲಿ ಕೇಂದ್ರ ಸರ್ಕಾರದ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಈಗ ಆ ಹೆಸರನ್ನು ಬದಲಾಯಿಸಿದರೆ ಇಂಡಿಯಾ ಎಂಬ ಹೆಸರಿನ ಸಂಸ್ಥೆಗಳನ್ನು ಏನು ಮಾಡುತ್ತೀರೆಂದು ಪ್ರಶ್ನೆಸಿದ ಸಂದೀಪ್ ಭಾವನೆಗಳನ್ನು ಕೆರಳಿಸುವ ವಿಚಾರಗಳನ್ನು ಕೈ ಬಿಟ್ಟು ಜನರ ಬದುಕಿನ ಸಮಸ್ಯೆಗಳನ್ನು ಚರ್ಚಿಸಬೇಕೆಂದು ಆಗ್ರಹಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗ ವಿದರ್ಭದಂತ ಕಾನೂನು ಜಾರಿಗೊಳಿಸಿ ರೈತರಿಗೆ ಸಹಾಯ ಮಾಡಲಾಗಿದೆ ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಕೆಲವೇ ಉದ್ಯಮ ಪ್ರತಿನಿಧಿಗಳ ೨೪೯೫೦೦೦ ಕೋಟಿ ರೂ ಸಾಲ ಮನ್ನಾ ಮಾಡಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ್ದಾರೆ ಈ ಬಗ್ಗೆ ಪ್ರಶ್ನೆ ಕೇಳಿದ ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವವನ್ನೇ ಅನರ್ಹಗೊಳಿಸಲು ಮುಂದಾಗಿದ್ದಾರೆಂದು ಟೀಕಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ೯ವರೆ ವ?ಗಳಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಶೋಭಾಕರಂದ್ಲಾಜೆ ಅವರು ಪ್ರಾರಂಭದಲ್ಲಿ ಅತಿಥಿ ನಟರಂತೆ ಆಗಾಗ ಜಿಲ್ಲೆಗೆ ಭೇಟಿ ನೀಡುತ್ತಿದ್ದರು ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಹೆಚ್ಚು ಹೆಚ್ಚು ಭೇಟಿ ನೀಡಲು ಆರಂಭಿಸಿದ್ದಾರೆ ಆದರೆ ಈ ಜಿಲ್ಲೆಗೆ ಶೋಭಾಕರಂದ್ಲಾಜೆಯವರ ಕೊಡುಗೆ ಶೂನ್ಯ ಎಂದು ಲೇವಡಿ ಮಾಡಿದರು.

ಮಳೆ ಕೊರತೆಯಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ ಕಾಫಿ ಅಡಿಕೆ ನ?ವಾಗಿ ಬೆಳಗಾರರು ಸಂಕ?ದಲ್ಲಿದ್ದಾರೆ ಈ ಬಗ್ಗೆ ಶೋಭಾಕರಂದ್ಲಾಜೆಯಾಗಲಿ ಬಿಜೆಪಿ ಮುಖಂಡ ಸಿಟಿ ರವಿಯಾಗಲಿ ಮಾತನಾಡುತ್ತಿಲ್ಲ ಅದನ್ನು ಬಿಟ್ಟು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುತ್ತಿದ್ದಾರೆ. ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ನೀತಿಯಿಂದ ತತ್ತರಿಸಿ ಹೋಗಿದ್ದ ಜನರಿಗೆ ನೆರವಾಗುವ ಸಲುವಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನಸಾಮಾನ್ಯರ ಬದುಕಿಗೆ ನೆರವಾಗಿದೆ ಇದರಿಂದ ರಾಜ್ಯದ ಆರ್ಥಿಕ ಚಟುವಟಿಕೆ ಉತ್ತಮವಾಗಿದೆ ಮಹಿಳೆಯರು ಸಬಲೀಕರಣವಾಗಿದ್ದಾರೆ ಸೋಲಿನ ಆಘಾತದಲ್ಲಿರುವ ಸಿಟಿ ರವಿ ಇದನ್ನು ಅರ್ಥ ಮಾಡಿಕೊಂಡು ಜನರ ಬದುಕಿನ ಬಗ್ಗೆ ಚರ್ಚಿಸಲಿ ಎಂದು ಸಲಹೆ ನೀಡಿದರು.

ನರೇಂದ್ರ ಮೋದಿಯವರ ಆಡಳಿತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಅಂತಹ ನಿರುದ್ಯೋಗಿ ಯುವಕರಿಗೆ ನೆರವು ನೀಡುವ ಸಲುವಾಗಿ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಸರ್ಕಾರ ಕಾರ್ಯಕ್ರಮ ಅನು?ನಗೊಳಿಸುತ್ತಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ ಶಿವಾನಂದ ಸ್ವಾಮಿ, ಕೆಪಿಸಿಸಿ ಸಂಯೋಜಕ ಹಿರೇಮಗಳೂರು ರಾಮಚಂದ್ರ, ನಗರ ಸಭೆ ಸದಸ್ಯ ಲಕ್ಷ್ಮಣ, ಎನ್.ಎಸ್.ಯು.ಐ ಅಧ್ಯಕ್ಷ ಶ್ರೀಕಾಂತ್, ನಗರ ಕಾಂಗ್ರೆಸ್ ಅಧ್ಯಕ್ಷ ತನೂಜ್ ಕುಮಾರ್ ಉಪಸ್ಥಿತರಿದ್ದರು.

Constitution insulted by BJP government

About Author

Leave a Reply

Your email address will not be published. Required fields are marked *