September 20, 2024

ಮುಂಬರುವ ಲೋಕಸಭಾ ಚುನಾವಣೆಗೆ ಮತದಾರರ ಕರಡು ಪಟ್ಟಿ ಪ್ರಕಟ

0
ಜಿಲ್ಲಾಧಿಕಾರಿ ಮೀನಾನಾಗರಾಜ್ ಸುದ್ದಿಗೋಷ್ಠಿ

ಜಿಲ್ಲಾಧಿಕಾರಿ ಮೀನಾನಾಗರಾಜ್ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿ ತಯಾರಿ ನಡೆಸಿದ್ದು ಮತದಾರರ ಪಟ್ಟಿ ಪರಿ?ರಿಸಿ ಕರಡು ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ೨೦೨೪ರ ಜನವರಿ ೫ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದೆಂದು ಜಿಲ್ಲಾಧಿಕಾರಿ ಮೀನಾನಾಗರಾಜ್ ತಿಳಿಸಿದರು.

ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು ಭೂತ್ ಮಟ್ಟದಿಂದ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ ಮತದಾರರ ಪಟ್ಟಿ ಪರಿ?ರಣೆ ಮಾಡಲಾಗಿದ್ದು ನಾಳೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಕರಡು ಪಟ್ಟಿಯನ್ನು ವಿತರಿಸುವುದಲ್ಲದೆ. ಆನ್ ಲೈನ್ ಮೂಲಕ ಇಂದಿನಿಂದಲೇ ಕರಡು ಪಟ್ಟಿ ಪ್ರಕಟಿಸಲಾಗಿದ್ದು ಜನವರಿ ೫ ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಿದ್ದು ಅಲ್ಲಿಯವರೆಗೆ ಮತದಾರರು ತಮ್ಮ ಹೆಸರನ್ನು ಸೇರ್ಪಡೆ ತೆಗೆದು ಹಾಕುವುದು ಅಥವಾ ಮಾರ್ಪಾಡು ಮಾಡಲು ಅವಕಾಶವಿದೆ ಎಂದರು.

ನಿಗಧಿಪಡಿಸಿರುವ ಬಿ.ಎಲ್.ಓ ಅಥವಾ ತಾಲೂಕು ಕಚೇರಿಯಲ್ಲಿ ನಿಗಧಿತ ನಮೂನೆಯಲ್ಲಿ ಡಿಸೆಂಬರ್ ೨೬ ರೊಳಗೆ ನೋಂದಾವಣೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸ ಬಯಸುವವರು ಹಾಗೂ ಈ ಜಿಲ್ಲೆಗೆ ವಲಸೆ ಬಂದು ೧೮ ವ? ಪೂರೈಸಿರುವವರಿಗೆ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಿಕೊಳ್ಳಲು ಅವಕಾಶವಿದೆ ಭಾವಚಿತ್ರ ಬದಲಾಯಿಸುವವರೂ ಕೂಡ ಇದೇ ಅವಧಿಯಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಜಿಲ್ಲೆಯಲ್ಲಿ ೨೦೧೧ರ ಜನಗಣತಿಯಂತೆ ೨೭-೧೦-೨೦೨೩ ಕ್ಕೆ ಅಂತಿಮವಾಗಿ ೪೭೫೪೧೯ ಪರು?ರು, ೪೮೮೨೮೪ ಮಂದಿ ಮಹಿಳೆಯರು ಸೇರಿದಂತೆ ಒಟ್ಟು ೯೬೩೭೩೮ ಮಂದಿ ಮತದಾರರಿದ್ದು ಹಿಂದಿನ ಚುನಾವಣೆಗಿಂತ ಸುಮಾರು ೧೦ ಸಾವಿರ ಮತದಾರರು ಕಡಿಮೆಯಾಗಿದ್ದಾರೆಂದು ಹೇಳಿದರು.

ಮತದಾರರ ಪಟ್ಟಿಯನ್ನು ಮಾರ್ಪಾಡು ಮಾಡುವ ಸಲುವಾಗಿ ಗ್ರಾಮವಾರು ಮನೆ ಮನೆಗೆ ತೆರಳಿ ಪರಿಶೀಲಿಸಿದ್ದು ೧೩೧೨೪ ಮತದಾರರ ಪಟ್ಟಿಯನ್ನು ಮಾರ್ಪಾಡು ಮಾಡಲಾಗಿದೆ. ಈ ಅವಧಿಯಲ್ಲಿ ಒಟ್ಟು ೪೭೯ ಸೇವಾ ಮತದಾರರನ್ನು ಗುರುತಿಸಲಾಗಿದೆ ಒಟ್ಟಾರೆ ಜನಸಂಖ್ಯೆ ಆಧಾರದಲ್ಲಿ ಶೇ.೮೫ರ? ಮತದಾರರಿದ್ದು ವಿವಿಧ ಕಾರಣಗಳಿಂದ ೪೦ ರಿಂದ ೫೦ ಸಾವಿರ ಜನಸಂಖ್ಯೆ ಹೆಚ್ಚಾಗಿದ್ದು ಹೆಚ್ಚುವರಿ ಮತದಾರರನ್ನು ಸೇರಿಸುವ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು ೧೨೨೯ ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ. ಕೆಲವೆಡೆ ಮತದಾನ ಕೇಂದ್ರಗಳನ್ನು ವಿಲೀನಗೊಳಿಸುವ ಬೇಡಿಕೆ ಇದೆ ಇನ್ನೂ ಕೆಲವೆಡೆ ಹೆಚ್ಚುವರಿ ಮತದಾನ ಕೇಂದ್ರಗಳನ್ನು ತೆರೆಯಬೇಕೆಂದು ಬೇಡಿಕೆ ಇದ್ದು ಚಿಕ್ಕಮಗಳೂರು ತಾಲೂಕಿನಲ್ಲಿ ೪ ಕಡೂರು ತಾಲೂಕಿನಲ್ಲಿ ೩ ಹೆಚ್ಚುವರಿ ಮತ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕನಕರಡ್ಡಿ, ನಾರಾಯಣರಡ್ಡಿ ಉಪಸ್ಥಿತರಿದ್ದರು.

Draft list of voters published

About Author

Leave a Reply

Your email address will not be published. Required fields are marked *