September 20, 2024

ಮನುಷ್ಯ ಭೂಮಿಮೇಲೆ ಬದುಕಲು ಸೌಹಾರ್ಧವೂ ಅಷ್ಟೇ ಮುಖ್ಯ

0
ನಗರದ ಸಂತಜೋಸೇಫರ ಪ್ರಧಾನಾಲಯ ಚರ್ಚ್‌ನ ಆವರಣದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯಗೆ ಸನ್ಮಾನ

ನಗರದ ಸಂತಜೋಸೇಫರ ಪ್ರಧಾನಾಲಯ ಚರ್ಚ್‌ನ ಆವರಣದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯಗೆ ಸನ್ಮಾನ

ಚಿಕ್ಕಮಗಳೂರು- ಮನುಷ್ಯ ಭೂಮಿಮೇಲೆ ಬದುಕಲು ನೀರು, ಆಹಾರ ಎಷ್ಟು ಮುಖ್ಯವೋ ಶಾಂತಿ, ಸೌಹಾರ್ಧವೂ ಅಷ್ಟೇ ಮುಖ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ಅವರು ಭಾನುವಾರ ನಗರದ ಸಂತಜೋಸೇಫರ ಪ್ರಧಾನಾಲಯ ಚರ್ಚ್‌ನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಿಷನ್ ಸಂಡೇ ಕಾರ್ಯಕ್ರಮದಲ್ಲಿ ಚರ್ಚ್ ವತಿಯಿಂದ ಏರ್ಪಡಿಸಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಶಾಂತಿ, ಸೌಹಾರ್ಧತೆ, ನೆಮ್ಮದಿಯನ್ನು ನಾನು ನನ್ನ ಸಾಮಾಜಿಕ ಜೀವನದಲ್ಲಿ ಮೊದಲು ಬಯಸುತ್ತೇನೆ. ಭೂಮಿ ಮೇಲೆ ಬಂದ ಮೇಲೆ ಬದುಕಿಗೆ ಇದೆಲ್ಲವೂ ಅತ್ಯಗತ್ಯ. ನಿಮ್ಮ ಸುಖ, ಸಂತೋಷದಲ್ಲಿ ಎಂದೆಂದೂ ಭಾಗಿಯಾಗಿರುತ್ತೇನೆ ಎಂದರು.

ಚರ್ಚ್‌ನ ಸದಸ್ಯರಾದ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್ ಮಾತನಾಡಿ, ಪರಸ್ಪರ ಪ್ರೀತಿಸುವುದು, ಗೌರವಿಸುವುದು, ಕಷ್ಟದಲ್ಲಿರುವವರಿಗೆ ನೆರವಾಗುವುದು, ನಿರ್ಗತಿಕರಿಗೆ ಆಶ್ರಯವಾಗಿ ನಿಲ್ಲುವುದು ಸೇರಿದಂತೆ ಎಲ್ಲರೊಂದಿಗೆ ಸಹಬಾಳ್ವೆ ಮಾಡುವುದು, ಅನಾಹುತಗಳು ಸಂಭವಿಸಿದಾದ ನೊಂದವರ ಪರವಾಗಿ ನಿಲ್ಲುವಂತಹ ಹಾಗೂ ಪ್ರಮುಖವಾಗಿ ಪ್ರೀತಿ ಎನ್ನುವ ದೇವರ ವಾಕ್ಯವನ್ನು ಸಾರುವುದು ಮಿಷನ್ ಸಂಡೇ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದರು.

ಸಂತ ಜೋಸೆಫರ ಪ್ರಧಾನಾಲಯದ ಮುಖ್ಯ ಗುರುಗಳಾದ ಫಾ.ಅಂತೋಣಿ ಪಿಂಟೋ, ಪಾಲನಾ ಸಮಿತಿಯ ಕಾರ್ಯದರ್ಶಿ ಕ್ಲಾಡ್ ಲೋಬೊ, ಟಾಬ್ಸ್ ಸಂಸ್ಥೆಯ ಮುಖ್ಯಸ್ಥ ಜೀನ್ ಫುಟಾಡೊ, ಮಲೆನಾಡು ಕ್ರೈಸ್ತ ಅಭಿವೃದ್ಧಿ ಸಂಘದ ಸದಸ್ಯ ಫೆಲಿಕ್ಸ್ ಸಿಕ್ವೇರಾ, ಪ್ರಧಾನಾಲಯ ಸಹಾಯಕ ಗುರುಗಳಾದ ಫಾ. ಲಿನುರಾಬರ್ಟ್, ಬಾಲ ಯೇಸು ಪುಣ್ಯಕ್ಷೇತ್ರದ ನಿರ್ಧೇಶಕರಾದ ಫಾ. ಸಿಲ್‌ವೆಶ್ಟರ್ ಉಪಸ್ಥಿತರಿದ್ದರು.

Tribute to MLA HD Thammaiah in the premises of Saint Joseph’s Cathedral Church in the city

About Author

Leave a Reply

Your email address will not be published. Required fields are marked *