September 20, 2024

ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ

0
ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ

ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ

ಚಿಕ್ಕಮಗಳೂರು: ನಗರದ ಶಂಕರ ಮಠ ದೇವಸ್ಥಾನದಲ್ಲಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಹಾಗೂ ಅಗೋರಿ ಸಾಧುವಾದ ವಿವೇಕಾನಂದ ಅವರ ನೇತೃತ್ವದಲ್ಲಿ ಶ್ರೀರಾಮ ಸೇನೆ ಪದಾಧಿಕಾರಿಗಳ ದತ್ತ ಮಾಲಾ ಧಾರಣೆ ಮಾಡುವ ಮೂಲಕ ಈ ವ?ದ ದತ್ತ ಮಾಲಾ ಅಭಿಯಾನಕ್ಕೆ ಚಾಲನೆ ನೀಡಿದರು.

ದತ್ತಮಾಲ ಧಾರಣೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿಯವರು ಶ್ರೀರಾಮ ಸೇನೆಯ ನೇತೃತ್ವದಲ್ಲಿ ಕಳೆದ ೨೦ ವ?ಗಳಿಂದ ಹಿಂದು ಪೀಠ ಮಾಡುವ ಸಲುವಾಗಿ ಹೋರಾಟ ಮಾಡುತ್ತಾ ಬಂದಿದ್ದು ತಮ್ಮ ನಿರಂತರ ಹೋರಾಟದಿಂದ ಹಿಂದು ಅರ್ಚಕರನ್ನು ನೇಮಕ ಮಾಡುವ ಮೂಲಕ ಹೋರಾಟಕ್ಕೆ ಜಯ ದೊರಕಿದೆ ಎಂದರು.

ಈ ಕ್ಷೇತ್ರ ಸಂಪೂರ್ಣವಾಗಿ ಹಿಂದೂ ಧಾರ್ಮಿಕ ಕ್ಷೇತ್ರವಾಗಬೇಕು ಈಗಾಗಲೇ ಹಿಂದು ಪೀಠ ಎಂದು ನ್ಯಾಯಾಲಯಗಳೇ ಹೇಳಿರುವುದರಿಂದ ಶಾಖಾದ್ರಿ ಮತ್ತು ಮೌಲ್ವಿಗಳಿಗೆ ಇಲ್ಲಿ ಕೆಲಸವಿಲ್ಲ ಅವರನ್ನು ಹೊರಕಳಿಸಬೇಕು ಸರ್ಕಾರಕ್ಕೆ ಹೊರ ಕಳಿಸಲಾಗದಿದ್ದರೆ ಶ್ರೀರಾಮ ಸೇನೆಯಿಂದಲೇ ಆ ಕೆಲಸ ಮಾಡುತ್ತೇವೆ ಎಂದು ಎಚ್ಚರಿಸಿದರು.

ಹಿಂದುಪೀಠವಾಗಿರುವ ದತ್ತಪೀಠದಲ್ಲಿ ಉರುಸ್ ನಡೆಸಬಾರದು ನಾಗೇನಹಳ್ಳಿಯಲ್ಲಿರುವ ದರ್ಗಾದಲ್ಲಿ ಉರುಸ್ ನಡೆಸಲಿ ಎಂದರಲ್ಲದೆ ದತ್ತಪೀಠದಲ್ಲಿರುವ ಗೋರಿಗಳನ್ನು ಸ್ಥಳಾಂತರ ಮಾಡಬೇಕು ಅದಕ್ಕೆ ಸರ್ಕಾರದಲ್ಲಿ ಹಣ ಇಲ್ಲದಿದ್ದರೆ ಶ್ರೀರಾಮ ಸೇನೆಯಿಂದಲೇ ಸ್ಥಳಾಂತರ ಮಾಡಲಾಗುವುದು ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು.

ದತ್ತಪೀಠದ ಹೆಸರಿನಲ್ಲಿದ್ದ ಸಾಕ? ಪ್ರಮಾಣದ ಭೂಮಿಯನ್ನು ನುಂಗಿ ನೀರು ಕುಡಿದಿದ್ದಾರೆ ಈ ಎಲ್ಲಾ ಭೂಮಿಯನ್ನು ಸರ್ಕಾರಕ್ಕೆ ವಶಪಡಿಸಿಕೊಳ್ಳಬೇಕು ದತ್ತಪೀಠದಲ್ಲಿ ನಿತ್ಯ ಅನ್ನದಾನ ನಡೆಯಬೇಕು ದತ್ತಪೀಠ ಹಿಂದು ಪೀಠವಾಗಿರುವುದರಿಂದ ಇಲ್ಲಿಗೆ ಬರುವವರಿಗೆ ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಮಾತನಾಡಿ ಇಂದು ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಸುಮಾರು ೫೦ ಜನರು ಮಾಲಾಧಾರಣೆ ಮಾಡುವ ಮೂಲಕ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಇದೇ ರೀತಿ ಇಂದು ರಾಜ್ಯದ ೩೦ ಜಿಲ್ಲೆಗಳಲ್ಲಿ ದತ್ತಮಾಲಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ನ. ೨ರಂದು ಅನೇಕರು ಜಿಲ್ಲೆಯಲ್ಲಿ ಮಾಲಾಧಾರಣೆ ಮಾಡಿ ದೀಪೋತ್ಸವ ಆಚರಿಸಲಿದ್ದಾರೆ ನ.೪ ರಂದು ರಾಜ್ಯಾದ್ಯಂತ ದತ್ತ ದೀಪೋತ್ಸವ ಆಚರಿಸಲು ಕರೆ ನೀಡಲಾಗಿದೆ. ನ.೫ ರಂದು ಶಂಕರ ಮಠದ ಎದುರು ಧರ್ಮ ಸಭೆ ನಡೆಸಿ ದತ್ತ ಪೀಠಕ್ಕೆ ತೆರಳಿ ಪಡಿ ಅರ್ಪಿಸುವುದಾಗಿದೆ ತಿಳಿಸಿದರು.

ಇಂದಿನ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಪ್ರಧಾನ ಕಾರ್ಯದರ್ಶಿ ಆನಂದ್ ರೆಡ್ಡಿ, ವಿಭಾಗಿಯ ಸಂಚಾಲಕ ಯೋಗೇಶ್ ಸುವರ್ಣ ಮುಂತಾದವರು ಭಾಗವಹಿಸಿದ್ದರು.

Sri Ram Sena’s Dattamala Campaign officially launched

About Author

Leave a Reply

Your email address will not be published. Required fields are marked *