September 20, 2024

ಅಜಾದ್ ಪಾರ್ಕ್ ಗಣಪತಿ ಸೇವಾಸಮಿತಿ ಹಣ ಅಧ್ಯಕ್ಷರ ಬಳಿ ಇರುವುದು ಖಚಿತ

0
ಜಿಲ್ಲಾ ಬಿಜೆಪಿ ವಕ್ತಾರ ಟಿ.ರಾಜಶೇಖರ್

ಜಿಲ್ಲಾ ಬಿಜೆಪಿ ವಕ್ತಾರ ಟಿ.ರಾಜಶೇಖರ್

ಚಿಕ್ಕಮಗಳೂರು: ಅಜಾದ್‌ಪಾರ್ಕ್ ಗಣಪತಿ ಸೇವಾಸಮಿತಿ ಅಧ್ಯಕ್ಷರು ಬಳಿ ೬,೭೧,೦೦೦ ರೂ. ಇರುವುದಾಗಿ ಸಮಿತಿ ಪದಾಧಿಕಾರಿಗಳೇ ಒಪ್ಪಿಕೊಂಡಿರುವುದರಿಂದ ತಾವು ಮಾಡಿದ ಆರೋಪ ಸತ್ಯವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಟಿ.ರಾಜಶೇಖರ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಈ ವಿ?ಯ ತಿಳಿಸಿರುವ ಅವರು ಸಾರ್ವಜನಿಕರಿಂದ ಗಣಪತಿ ಉತ್ಸವಕ್ಕೆ ಸಂಗ್ರಹ ಮಾಡಿರುವ ಹಣವನ್ನು ಸಮಿತಿ ಅಧ್ಯಕ್ಷರಾಗಿರುವ ವರಸಿದ್ಧಿ ವೇಣುಗೋಪಾಲ್ ಕಳೆದ ೩ ವ?ಗಳಿಂದ ತಮ್ಮ ಸ್ವಂತಕ್ಕೆ ಬಳಸಿರುವುದು ಖಂಡನೀಯ ಎಂದಿದ್ದಾರೆ.

ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬರುತ್ತಿದ್ದಂತೆ ಬಡ್ಡಿ ಸೇರಿಸಿ ಕೊಡುತ್ತೇನೆ. ಆಮೇಲೆ ಕೊಡುತ್ತೇನೆ ಪ್ರಭಾವಳಿ ಮಾಡಿಸುತ್ತೇನೆ ಎಂಬುದಾಗಿ ನಾಟಕವಾಡುತ್ತಿದ್ದಾರೆ ಸಾರ್ವಜನಿಕರ ಹಣವನ್ನು ಮನೆಯಲ್ಲಿಟ್ಟುಕೊಂಡು ಸ್ವಂತಕೆ ಬಳಸಿದ್ದೇ ಅಪರಾಧ ಈ ಹಣದಲ್ಲಿ ಗಣಪತಿಗೆ ಪ್ರಭಾವಳಿ ಮಾಡಿಸುವುದಾಗಿ ಹೇಳಿರುವುದು ಎ?ರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ದೇವರ ಬಗ್ಗೆ ಗೌರವ ಭಕ್ತಿ ಇದ್ದರೆ ಈ ಹಣವನ್ನು ದುರುಪಯೋಗಪಡಿಸಿಕೊಳ್ಳದೆ ಈ ಹಣವನ್ನು ಕೂಡಲೆ ಸಮಿತಿಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದು ಆಗ್ರಹಿಸಿದ ಅವರು ಹಿಂದೂ ಸಂಪ್ರದಾಯದಲ್ಲಿ ಯಾರು ಈ ರೀತಿ ಹಣ ವಂಚನೆ ಮಾಡುವುದಿಲ್ಲ ವರಸಿದ್ಧಿ ವೇಣುಗೋಪಾಲ್ ಕದಿಯುವ ಪ್ರಯತ್ನ ಮಾಡಿದ್ದಾರೆಂದು ದೂರಿದ್ದಾರೆ.

ಈ ಹಣ ವಂಚನೆ ಪ್ರಕರಣದಲ್ಲಿ ಗಣಪತಿ ಸೇವಾಸಮಿತಿಯ ಪದಾಧಿಕಾರಿಗಳು ಶಮಿಲಾಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ ರಾಜಶೇಖರ್ ವರಸಿದ್ಧಿ ವೇಣುಗೋಪಾಲ್ ಹಾಕಿರುವ ಬಿಸ್ಕೆಟ್ ತಿಂದು ಅವರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇ?ಲ್ಲ ನಡೆದಿದ್ದರೂ ಸಮಿತಿಯವ ಪೊಲೀಸ್‌ಗೆ ದೂರು ನೀಡಿಲ್ಲ ವೇಣುಗೋಪಾಲ್‌ಗೆ ಸಹಕಾರ ನೀಡಿ ಹಣ ವಂಚಿಸಲು ಮುಂದಾಗಿರುವುದರಿಂದ ೭ ಲಕ್ಷಕ್ಕೆ ೭ ಲಕ್ಷ ಸೇರಿಸಿ ಗಣಪತಿ ಸಮಿತಿಗೆ ಬ್ಯಾಂಕ್ ಖಾತೆಗೆ ಹಾಕುವ ಮೂಲಕ ಸಾರ್ವಜನಿಕರ ಬಹಿರಂಗ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.

ಸಾರ್ವಜನಿಕ ಹಣ ವಂಚಿಸಿರುವ ವರಸಿದ್ಧಿ ವೇಣುಗೋಪಾಲ್‌ರವರು ಸಭ್ಯಸ್ತರಂತೆ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿರುವುದನ್ನು ವಿರೋಧಿಸುತ್ತೇವೆ. ಈ ಸಂಬಂಧ ನಗರಸಭೆ ಸಭೆಯಲ್ಲಿ ಹೊರಗೆ ಒಳಗೆ ಹೋರಾಟ ಮಾಡುವುದಾಗಿ ತಿಳಿಸಿ ಕೂಡಲೆ ನಗರದ ಪ್ರಥಮ ಪ್ರಜೆ ಸ್ಥಾನದಲ್ಲಿದ್ದು ಹಣ ವಂಚಿಸಿರುವುದರ ವಿರುದ್ಧ ಸಂಘ ಸಂಸ್ಥೆಗಳ ಮುಖಂಡರ ಗಮನಕ್ಕೆ ತಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

Azad Park Ganapati Seva Samiti money is sure to be with the president

About Author

Leave a Reply

Your email address will not be published. Required fields are marked *