September 19, 2024

ಶೋಷಿತರ ಸಮಸ್ಯೆ ಆಲಿಸಲು ಸಂಘಟನೆ ಬಲಿಷ್ಟವಾಗಬೇಕು

0
ನಗರದ ಪ್ರವಾಸಿ ಮಂದಿರದಲ್ಲಿ ದಸಂಸ ಮುಖಂಡರುಗಳ ಜಿಲ್ಲಾ ಮಟ್ಟದ ಸಭೆ

ನಗರದ ಪ್ರವಾಸಿ ಮಂದಿರದಲ್ಲಿ ದಸಂಸ ಮುಖಂಡರುಗಳ ಜಿಲ್ಲಾ ಮಟ್ಟದ ಸಭೆ

ಚಿಕ್ಕಮಗಳೂರು: ಮುಂಬರುವ ಲೋಕಸಭಾ ಚುನಾವಣೆ ಎದುರಿಸುವ ಹಾಗೂ ಭೂ ರಹಿತರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಸಂಘಟನೆ ಬಲಿಷ್ಟಗೊಳಿಸಲು ಮುಂದಾಗಬೇಕು ಎಂದು ದಸಂಸ (ಅಂಬೇ ಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಮಲ್ಲೇಶ್ ಅಂಬುಗ ಕರೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ದಸಂಸ ಮುಖಂಡರುಗಳ ಜಿಲ್ಲಾ ಮಟ್ಟದ ಸಭೆಯನ್ನುದ್ದೇಶಿಸಿ ಗುರುವಾರ ಮಾತನಾಡಿದ ಅವರು ಈ ಬಾರಿಯ ಲೋಕಸಭಾ ಚುನಾವಣೆಯನ್ನು ದಲಿತ ಮುಖಂಡರುಗಳು ಸವಾಲಾಗಿ ಸ್ವೀಕರಿಸಿ ಕೋಮುವಾದಿ ಪಕ್ಷವನ್ನು ತೊಲಗಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸಬೇಕು ಎಂದು ಹೇಳಿದರು.

ನೂರಾರು ದಲಿತ ಸಂಘಟನೆಗಳ ಪೈಕಿಯಲ್ಲಿ ಮಾವಳ್ಳಿ ಶಂಕರ್ ನೇತೃತ್ವದಲ್ಲಿ ಅಂಬೇಡ್ಕರ್ ವಾದ ಸಂಘಟನೆ ಬಹಳಷ್ಟು ಶಕ್ತಿಯುತವಾಗಿದೆ. ಇದೀಗ ರಾಜ್ಯಾದ್ಯಂತ ಸಂಚರಿಸುವ ನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾವಾರು ಮುಖಂಡರುಗಳು ವಿದ್ಯಾರ್ಥಿ ಹಾಗೂ ಮಹಿಳಾ ಒಕ್ಕೂಟಗಳನ್ನು ಸ್ಥಾಪಿಸಿ ಮುಂದಿನ ರೂಪರೇಷೆ ಗಳಿಗೆ ತಯಾರಾಗಿರಬೇಕು ಎಂದು ತಿಳಿಸಿದರು.

ಮುಂದಿನ ಲೋಕಸಭಾ ಚುನಾವಣೆ ಸಂಬಂಧ ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ತೊಲಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕು, ಹೋಬಳಿ ಹಾಗೂ ಗ್ರಾಮಮಟ್ಟದಲ್ಲಿ ದಸಂಸ ಸಂಘಟನೆ ಮನವರಿಕೆ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ನಿವೇಶನ ರಹಿತರು, ಸಣ್ಣಬೆಳೆಗಾರರು ಹಾಗೂ ಶೋಷಿತರ ಪರವಾಗಿ ಸ್ಪಂದಿಸಲು ಅನುಕೂಲವಾಗಲಿದೆ ಎಂದರು.

ಜಿಲ್ಲೆಯಲ್ಲಿ ಬಲಾಡ್ಯ ವ್ಯಕ್ತಿಗಳಿಂದ ಭೂ ಒತ್ತುವರಿ, ಶೋಷಿತರಿಗೆ ಅನ್ಯಾಯ, ಕಾರ್ಮಿಕರಿಗೆ ನಿಗಧಿತ ವೇತನ ನೀಡದೇ ತಾರತಮ್ಯ ಸಂಬಂಧ ರಾಜ್ಯ ಸಮಿತಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಸಮಿತಿ ಮುಂದಾಗಬೇಕು. ಸಮಸ್ಯೆ ಬಗೆಹರಿಸಲು ಸಮಾವೇಶ ಹಮ್ಮಿಕೊಂಡಿದ್ದು ಸದ್ಯದಲ್ಲೇ ಕರಪತ್ರ ವಿತರಿಸಲಾಗುವುದು. ಇದನ್ನು ಪ್ರತಿ ಮನೆ ಗಳಿಗೆ ತೆರಳಿ ವಿತರಿಸುವ ಮೂಲಕ ಸಂಘಟನೆಗೆ ಬೆಂಬಲಿಸಲು ಪ್ರೇರೇಪಿಸಬೇಕು ಎಂದರು.

ರಾಜ್ಯದಲ್ಲಿ ಅನೇಕ ದಲಿತ ಸಂಘಟನೆಗಳು ಸ್ಥಾಪಿಸಿ ಹಲವಾರು ಅರ್ಧದಲ್ಲಿಯೇ ನಿಂತಿದೆ. ಕೆಲವು ಸಂಘಟನೆ ಗಳ ಪ್ರಮುಖರುಗಳೇ ಆರೋಗ್ಯ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಗಳಿಂದ ಸಂಘಟನೆಗಳಿಂದ ದೂರವಾಗಿ ದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸಂಘಟನೆ ಮಾಡಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ದಸಂಸ ಅಂಬೇಡ್ಕರ್ ವಾದ ಸಂಘ ಟನೆ ಬಹಳಷ್ಟು ಬಲಿಷ್ಟವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಮಾವೇಶ ಹಮ್ಮಿಕೊಳ್ಳುವ ಸಂಬಂಧ ರಾಜ್ಯ ಸಮಿತಿಯೊಂದಿಗೆ ಚರ್ಚಿಸಿ ಕಾರ್ಯಕ್ರಮ ಹಮ್ಮಿ ಕೊಳ್ಳಬೇಕು. ಸ್ಥಳೀಯವಾಗಿ ಶಾಸಕರು, ಸಚಿವರು, ಹಿರಿಯ ಪ್ರೊಫೆಸರ್ ಹಾಗೂ ಸಾಹಿತಿಗಳನ್ನು ಆಹ್ವಾನಿಸಿ ಶೋಷಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖಂಡರುಗಳು ಮುಂದಾಗಬೇಕು ಎಂದು ಸಲಹೆ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಜಿಲ್ಲಾ ಮಟ್ಟ ದಲ್ಲಿ ಸಂಘಟನೆ ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ತಯಾರಿ ನಡೆಸಲಾಗಿದೆ. ಮುಂದಿನ ಲೋಕಸಭಾ ಚುನಾವಣೆ ಹಾಗೂ ಶೋಷಿತರ ಪರವಾಗಿ ಹೋರಾಡುವ ನಿಟ್ಟಿನಲ್ಲಿ ಮುಖಂಡರುಗಳು ಸದಾಸಿದ್ಧ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಮಹೇಂದ್ರ ಸ್ವಾಮಿ, ಸಣ್ಣಪ್ಪ ಖಜಾಂಚಿ ಸಂತೋ? ಲಕ್ಯಾ, ತಾಲೂಕು ಸಂಚಾಲಕ ಮಂಜುನಾಥ ನಂಬಿಯಾರ್, ಕಡೂರು ಸಂಚಾಲಕ ಸುರೇಶ್ ಕಸವನಹಳ್ಳಿ ಅಜ್ಜಂಪುರ ಸಂಚಾಲಕ ನಾಗರಾಜ್, ಸಂಶೋದನಾ ವಿದ್ಯಾರ್ಥಿ ಹರೀಶ್, ಮುಖಂಡರುಗಳಾದ ಸುರೇಶ್ ವಾಸು, ಮೋನಪ್ಪ, ಹಿರೇಮಗಳೂರು ಜಗದೀಶ್ ಮುಂತಾದವರು ಭಾಗವಹಿಸಿದ್ದರು.

A district level meeting of Dasamsa leaders at the tourist hall in the city

About Author

Leave a Reply

Your email address will not be published. Required fields are marked *

You may have missed