September 19, 2024
ಗರದ ತೆರಾಪಂಥ್ ಭವನದಲ್ಲಿ ಅಣುವ್ರತ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಪರಿಸರ ಸ್ನೇಹಿ ದೀಪಾವಳಿ

ಗರದ ತೆರಾಪಂಥ್ ಭವನದಲ್ಲಿ ಅಣುವ್ರತ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಪರಿಸರ ಸ್ನೇಹಿ ದೀಪಾವಳಿ

ಚಿಕ್ಕಮಗಳೂರು:  ಜಿಲ್ಲಾಡಳಿತದ ಆದೇಶದಂತೆ ಪರಿಸರ ದೀಪಾವಳಿಯನ್ನು ಆಚರಣೆ ಮಾಡುವ ಮೂಲಕ ಮುಂದಿನ ಯುವ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡೋಣ ಎಂದು ಅಣುವ್ರತ್ ಸಮಿತಿ ಅಧ್ಯಕ್ಷರಾದ ಮಂಜುಬಾಯಿ ಬನ್ಸಾಲಿ ತಿಳಿಸಿದರು.

ನಗರದ ತೆರಾಪಂಥ್ ಭವನದಲ್ಲಿ ಅಣುವ್ರತ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೀಪಾವಳಿ ಹಬ್ಬದಲ್ಲಿ ದೀಪಗಳನ್ನು ಬೆಳಗುವುದರ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸೋಣ, ಸಾರ್ವಜನಿಕರು ಹೆಚ್ಚಾಗಿ ಪಟಾಕಿ ಹೊಡೆಯಬಾರದು ಎಂದರು.

ಇದರಿಂದ ಪರಿಸರ ವಾತಾವರಣವನ್ನು ಉತ್ತಮವಾಗಿಡಬಹುದು, ಇದರಿಂದ ಆರೋಗ್ಯವು ಸಹ ಸುಧಾರಣೆ ಆಗುತ್ತದೆ, ಹಬ್ಬದಲ್ಲಿ ಪಟಾಕಿ ಹೊಡೆಯುವುದರಿಂದ ಹಣದ ದುರ್ಬಳಕೆ ಆಗುತ್ತದೆ, ಇದರ ಬದಲಾಗಿ ಬಡ ಮಕ್ಕಳಿಗೆ ಪುಸ್ತಕ ನೀಡುವುದು, ಅನ್ನದಾನ ಮಾಡುವುದರ ಜೊತೆಗೆ ಪರಿಸರ ಸ್ನೇಹಿ ಗಣಪತಿ ಹಬ್ಬವನ್ನು ಆಚರಣೆ ಮಾಡಿದ ರೀತಿಯಲ್ಲಯೇ ದೀಪಾವಳಿ ಹಬ್ಬ ಆಚರಿಸಿ, ಎಲ್ಲರಿಗೂ ಮಾದರಿಯಾಗೋಣ ಎಂದರು.

ಈ ಸಂದರ್ಭದಲ್ಲಿ ಸಂಯೋಜಕರಾದ ಮದನ್‌ಚಂದ್ ಗಾಧಿಯಾ, ತೆರಾಪಂಥ್ ಸಭಾ ಅಧ್ಯಕ್ಷ ತಾರಾಚಂದ್‌ಜಿ ಸೇಠಿಯಾ, ತೆರಾಪಂಥ್ ಟ್ರಸ್ಟ್ ಅಧ್ಯಕ್ಷ ಅಶೋಕ್‌ಜೀ ದೋಸಿ, ಮೂತಿ ಪೂಜಕ್ ಸಂಘದ ಉಪಾಧ್ಯಕ್ಷ ಸಜನ್ ರಾಜ್ ಪಿರಗಲ್, ಅಣುವ್ರತ್ ಸಮಿತಿಯ ಮಾಜಿ ಅಧ್ಯಕ್ಷ ಲಾಲ್ ಚಂದ್‌ಜೀ ಬನ್ಸಾಲಿ, ಮಹಿಳಾ ಮಂಡಲ ಅಧ್ಯಕ್ಷೆ ಗುಣವತಿನಹರ್, ಮಾಜಿ ಅಧ್ಯಕ್ಷೆ ಸಂಗೀತ ಗಾಧಿಯಾ, ಮುಖಂಡರಾದ ಗೌತಮ್ ಆಚಾ ಉಪಸ್ಥಿತರಿದ್ದರು.

An eco-friendly Diwali was organized by Anukvrat Samiti at Terapanth Bhawan

About Author

Leave a Reply

Your email address will not be published. Required fields are marked *

You may have missed