September 19, 2024

ಧಾರ್ಮಿಕ ನಂಬಿಕೆ ಬಗ್ಗೆ ಸಾರ್ವಜನಿಕವಾಗಿ ಟೀಕೆ ಮಾಡುವುದು ಸರಿಯಲ್ಲ

0
ನಗರದ ಬಸವನಹಳ್ಳಿ ಶಂಕರಮಠದ ಮುಂಭಾಗ ನಡೆದ ಧಾರ್ಮಿಕ ಸಭೆ

ನಗರದ ಬಸವನಹಳ್ಳಿ ಶಂಕರಮಠದ ಮುಂಭಾಗ ನಡೆದ ಧಾರ್ಮಿಕ ಸಭೆ

ಚಿಕ್ಕಮಗಳೂರು: ಸಾವಿರಾರು ವರ್ಷಗಳಿಂದ ನಮ್ಮ ಯಾವುದೇ ಶುಭ ಸಮಾರಂಭದಲ್ಲಿ ಪ್ರಥಮ ಪೂಜೆ ಸಲ್ಲಿಸುವುದೇ ಗಣೇಶನಿಗೆ. ಎಲ್ಲಾ ಕಾರ್ಯ ನಿರ್ವಿಘ್ನವಾಗಿ ನಡೆಯಲಿ ಎನ್ನುವ ನಂಬಿಕೆ, ವಿಶ್ವಾಸ ನಮ್ಮದು. ಅದನ್ನು ಘಾಸಿ ಮಾಡುವುದು, ಸಾರ್ವಜನಿಕವಾಗಿ ಟೀಕೆ ಮಾಡುವುದು ಸರಿಯಲ್ಲ ಎಂದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು

ದತ್ತಮಾಲೆ ಅಭಿಯಾನದ ಶೋಭಾಯಾತ್ರೆ ಅಂಗವಾಗಿ ಭಾನುವಾರ ನಗರದ ಬಸವನಹಳ್ಳಿ ಶಂಕರಮಠದ ಮುಂಭಾಗ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಗಣಪತಿ ಪೂಜೆ ಮಾಡಬೇಡಿ ಎಂದು ಚಿತ್ರದುರ್ಗದ ಸಾಣೆಹಳ್ಳಿ ಶ್ರೀಗಳು ನೀಡಿರುವ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಈ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಒತ್ತಾಯಿಸಿದರು.

ಶ್ರೀಗಳ ಬಗ್ಗೆ ನಮಗೆ ಗೌರವವಿದೆ. ಪೂಜ್ಯತೆ ಇದೆ. ನಾಟಕೋತ್ಸವದ ಮೂಲಕ ಸಮಾಜದಲ್ಲಿ ಬದಲಾವಣೆಯ ಕ್ರಾಂತಿಯನ್ನೂ ಅವರು ತಂದಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ವಚನಗಳನ್ನು ಹೇಳಬೇಕು ಎನ್ನುವ ಶ್ರೀಗಳ ಮಾತನನ್ನು ನಾವು ಒಪ್ಪುತ್ತೇವೆ. ನಾವೂ ವಚನಗಳನ್ನು ಹಾಡುತ್ತೇವೆ. ಆದರೆ ಗಣೇಶನಿಗೆ ಪೂಜೆ ಮಾಡಬಾರದು ಎನ್ನುವುದು ಸರಿಯಲ್ಲ. ಹಿಂದೂ ಧರ್ಮದ ಬಗ್ಗೆ ಮಾತ್ರ ಆಘಾತಗಳಾಗುತ್ತಿವೆ. ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳಲ್ಲೂ ಸಾಕಷ್ಟು ಮೂಢ ನಂಬಿಕೆಗಳಿವೆ ಅದರ ಬಗ್ಗೆ ಮಾತನಾಡುವುದಿಲ್ಲ. ಜಾತ್ಯಾತೀತರು ಎಂದ ಮೇಲೆ ಎಲ್ಲಾ ಧರ್ಮದ ಬಗ್ಗೆ ಮಾತನಾಡಬೇಕು. ಬರೇ ಹಿಂದೂ ಧರ್ಮದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದರು.

ಮೈಸೂರಿನಲ್ಲಿ ಒಬ್ಬ ಭಗವಾನ್ ಇದ್ದಾರೆ. ಆತ ಭಗವಾನ್ ಅಲ್ಲ ಸೈತಾನ್, ಮಹಿಶಾಸುರ ಮರ್ಧಿನಿ ಸಹಸ್ರಾರು ವರ್ಷಗಳಿಂದ ನಡೆದು ಬಂದಿದೆ. ಆ ರಾಕ್ಷಸನೇ ನಮಗೆ ದೇವರು ಎನ್ನುತ್ತಾರೆ. ಇದೆಂತಹ ಮೂರ್ಖತನ. ಕಾನೂನು ಸಹ ಅಂತಹವರ ಬಗ್ಗೆ ಯೋಚಿಸುವುದಿಲ್ಲ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಕೂಡಲೇ ಹುಲಿ ಉಗುರಿನ ಬಗ್ಗೆ ಒಮ್ಮೆಲೆ ಜಾಗೃತಿ ಆಗಿ ಹಿಂದೂ ಅಮಾಯಕ ಅರ್ಚಕರನ್ನು ಬಂಧಿಸುತ್ತಾರೆ. ಶಾಖಾದ್ರಿಯನ್ನು ಮುಟ್ಟುವ ತಾಕತ್ತು ಇವರಲ್ಲಿಲ್ಲ. ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ರಾಜಕಾರಣಿಗಳ ಮಕ್ಕಳು, ನಟರು ಎಲ್ಲರಿಗೂ ಕಾನೂನು ಒಂದೇ ಆದರೂ ಇದರಲ್ಲಿ ತಾರತಮ್ಯ ಏಕೆ ಮಾಡುತ್ತಿದ್ದೀರಿ. ಶಾಖಾದ್ರಿ ಸಿಗಲಿಲ್ಲವೇ? ಎಲ್ಲಿದ್ದಾರೆ ಹೇಳಬೇಕಾ? ಸಿದ್ದರಾಮಯ್ಯ ನಿಮ್ಮ ಕೈ ಹಿಡಿದು ಎಳೆಯುತ್ತಿರುವ ಕಾರಣ ನೀವು ಬಂಧಿಸುತ್ತಿಲ್ಲ. ಬಹುಮಾನ ಘೊಷಣೆ ಮಾಡಿ ನಾವು ಶಾಖಾದ್ರಿಯನ್ನು ಹುಡುಕಿಕೊಡುತ್ತೇವೆ ಎಂದು ಸವಾಲು ಹಾಕಿದರು.

ಗೋರಕ್ಷಕ ಸಂತೋಷ್‌ನನ್ನು ಬಿಗ್ ಬಾಸ್ ಒಳಗೆ ಹೋಗಿ ಹಿಡಿಯುತ್ತೀರಿ, ನಿಮಗೆ ಶಾಖಾದ್ರಿ ಸಿಗುವುದಿಲ್ಲವೇ? ನವಿಲು ರಾಷ್ಟ್ರೀಯ ಪಕ್ಷಿ ಅದರ ಗರಿಗಳನ್ನೇ ಹಿಡಿದು ತಲೆಯಮೇಲೆ ಕುಟ್ಟುತ್ತಾರಲ್ಲಾ ಅವರಾರು ನಿಮಗೆ ಸಿಗಲಿಲ್ಲವೇ, ದರ್ಗಾದ ಒಳಗೆ ಹೋಗಿ ಅವರನ್ನು ಬಂಧಿಸಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಹೇಗೆ ಹಿಂದೂಗಳನ್ನು ಗುರಿ ಮಾಡುತ್ತದೆ ಎನ್ನುವುದಕ್ಕೆ ಇದು ಜ್ವಲಂತ ಸಾಕ್ಷಿ ಎಂದರು.

ತಮಿಳುನಾಡಿನ ಮಂತ್ರಿ ಉದಯನಿಧಿ ಸನಾತ ಧರ್ಮದ ಬಗ್ಗೆ ಕೀಳುಮಟ್ಟದ ಹೇಳಿಕೆ ಕೊಟ್ಟಿದ್ದಾರೆ. ಅವರ ಅಜ್ಜನೂ ರಾಮನ ಅವಹೇಳನ ಮಾಡಿ ಮಣ್ಣಿಗೆ ಹೋಗಿದ್ದಾರೆ. ರಾಮನನ್ನು ಏನೂ ಮಾಡಲಾಗಲಿಲ್ಲ. ಉದಯ ನಿಧಿ ಬಚ್ಚಾ, ಇದೇ ರೀತಿ ಮುಸ್ಲಿಮರು, ಮಸೀದಿ, ಕ್ರಿಶ್ಚಿಯನ್ನರ ಬಗ್ಗೆ ಹೇಳುವುದಿಲ್ಲ. ನಮ್ಮ ದೌರ್ಬಲ್ಯದ ಕಾರಣದಿಂದಲೇ ಇಂತಹ ವಿಕೃತ ವಾದಿಗಳು ಹುಟ್ಟಿಕೊಂಡಿದ್ದಾರೆ ಎಂದರು.

ಹಿಂದುತ್ವದ ರಕ್ಷಣೆಗೆ ಒಂದುಕಡೆ ನಾವು ಹೋರಾಡುತ್ತಿದ್ದರೆ, ಇನ್ನೊಂದೊಡೆ ವಿಷಕಾರಿ ಕ್ಯಾನ್ಸರ್ ಮಾದರಿ ಹಿಂದೂ ವಿರೋಧಿ ಶಕ್ತಿಗಳಿವೆ ಅವರನ್ನು ಮೆಟ್ಟಿ ನಿಲ್ಲಬೇಕು. ಬ್ರಿಟೀಷರು ಇದ್ದಾಗಿನಿಂದ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಾ ಬಂದಿದೆ ಎಂದರು

Public criticism of religious beliefs is not appropriate

About Author

Leave a Reply

Your email address will not be published. Required fields are marked *

You may have missed