September 19, 2024

ಅಕ್ರಮ ಜಲ್ಲಿ ಕ್ರಷರ್ ಮತ್ತು ಗಣಿಗಾರಿಕೆಯ ವಿರುದ್ಧ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

0
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ನೂರುಲ್ಲಾಖಾನ್ ಪತ್ರಿಕಾಗೋಷ್ಠಿ

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ನೂರುಲ್ಲಾಖಾನ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಜಲ್ಲಿ ಕ್ರಷರ್ ಮತ್ತು ಗಣಿಗಾರಿಕೆಯ ವಿರುದ್ಧ ಇನ್ನು ಏಳು ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ನೂರುಲ್ಲಾಖಾನ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ, ಜಿಲ್ಲಾಡಳಿತ ಜಲ್ಲಿ ಕ್ರಷರ್ ಗಣಿಗಾರಿಕೆ ಬಗ್ಗೆ ಸಮಗ್ರ ತನಿಖೆ ನಡೆಸಿ ಪರಿಸರವನ್ನು ಉಳಿಸುವಂತೆ ಒತ್ತಾಯಿಸಿದರು.

ತಾಲೂಕಿನ ಈಶ್ವರಹಳ್ಳಿ, ಕಳಸಾಪುರ, ಮರ್ಲೆ, ನಾಗರಹಳ್ಳಿ ಗ್ರಾಮಗಳಲ್ಲಿ ನಡೆಯುತ್ತಿರುವ ಜಲ್ಲಿ ಕ್ರ?ರ್ ಗಣಿಗಾರಿಕೆ ಬಗ್ಗೆ ಗಣಿ ಮತ್ತು ಭೂವಿಜ್ಞಾನಿ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ತಡೆಯಬೇಕೆಂದಯ ಆಗ್ರಹಿಸಿದರು.

ಈಶ್ವರಹಳ್ಳಿ ಗ್ರಾಮದಲ್ಲಿ ಒಂದೇ ಸರ್ವೇ ನಂಬರ್ ಅಂದರೆ ೨೮೧/ಪಿ೧ ರಲ್ಲಿ ಒಬ್ಬರಿಗೆ ೫ ಎಕರೆ ಇನ್ನೊಂದು ಕಂಪನಿಗೆ ೩ ಎಕರೆ, ಮತ್ತೊಂದು ಕಂಪನಿಗೆ ೭.೨೦ ಎಕರೆ ಭೂಮಿಯನ್ನು ಗ್ರಾನೈಟ್ ತೆಗೆಯಲು ಗುತ್ತಿಗೆ ನೀಡಲಾಗಿದೆ. ಇವುಗಳಿಗೆ ಅನುಮತಿ ನೀಡಿರುವ ಜಮೀನುಗಳು ಈ ಮೂರು ಗುತ್ತಿಗೆದಾರರು ಪಡೆದಿರುವ ಮಾಲೀಕರು ಬೇರೆ ಬೇರೆ ಹಾಗೂ ರಾಜಕೀಯ ಪ್ರಭಾವಿಗಳಾಗಿದ್ದಾರೆ ಎಂದರು.

ಇವರುಗಳು ಮರ್ಲೆ ಮತ್ತು ನಾಗರಹಳ್ಳಿಯಲ್ಲಿ ನಡೆಯುತ್ತಿರುವ ಜಲ್ಲಿ ಕ್ರ?ರ್‌ಗಳಲ್ಲಿ ಪಾಲುದಾರರಾಗಿದ್ದ ಜಮೀನು ಮತ್ತು ಅದರ ಆಸುಪಾಸಿನಲ್ಲಿ ಹಲವು ಜಮೀನು ಹಾಗೂ ಗುಡ್ಡವನ್ನು ಅಗೆದು ಸಂಪೂರ್ಣ ಅರಣ್ಯ ನಾಶ ಮಾಡಿ ಪರಿಸರವನ್ನು ಹಾಳು ಮಾಡಿ ಗ್ರಾನೈಟ್ ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು.

ನಗರದಾದ್ಯಂತ ಟಿಪ್ಪರ್ ಲಾರಿಗಳಲ್ಲಿ ಜಲ್ಲಿಯನ್ನು ಸಾಗಿಸುತ್ತಿದ್ದರೂ ಸಹ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ನಗರದ ಒಳಗಡೆ ಭಾರಿ ವಾಹನ ಸಂಚಾರ ನಿ?ಧವಿದ್ದರೂ ಸಹ ಕ್ರ?ರ್‌ಗಳಿಂದ ಬಂದಂತಹ ಎಂಸ್ಯಾಂಡ್‌ನ್ನು ಅತಿ ಹೆಚ್ಚು ಭಾರ ಹಾಕಿ ಪೂರೈಕೆ ಮಾಡುತ್ತಿರುವ ಟಿಪ್ಪರ್‌ಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಕರವೇ ನಗರಾಧ್ಯಕ್ಷ ಸುಮಂತ್, ಸಚ್ಚಿದಾನಂದ್, ಪ್ರಶಾಂತ, ಶರತ್ ಮತ್ತಿತರರಿದ್ದರು.

Massive protest led by Watal Nagaraj

About Author

Leave a Reply

Your email address will not be published. Required fields are marked *

You may have missed