September 19, 2024

ಸಣ್ಣ ಸಮುದಾಯದ ಜನಾಂಗದವನಾಗಿರುವುದರಿಂದ ತಮ್ಮ ವಿರುದ್ಧ ಸುಳ್ಳು ಆರೋಪ

0
Varasiddhi Venugopal

Varasiddhi Venugopal

ಚಿಕ್ಕಮಗಳೂರು: ಮೇಲ್ವರ್ಗದ ಜನಾಂಗದವರಾಗಿದ್ದರೆ ಯಾರೂ ಕೂಡ ಅವಿಶ್ವಾಸ ಮಂಡಿಸುತ್ತಿರಲಿಲ್ಲ ತಾನು ಸಣ್ಣ ಸಮುದಾಯದ ಜನಾಂಗದವನಾಗಿರುವುದರಿಂದ ತಮ್ಮ ವಿರುದ್ಧ ಸುಳ್ಳು ಆರೋಪಗಳೊಂದಿಗೆ ಅವಿಶ್ವಾಸ ಮಂಡಿಸಲಾಗಿತ್ತು ಎಂದು ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಆರೋಪ ಮಾಡಿದರು.

ಅವರು ಇಂದು ನಗರಸಭೆ ಆವರಣದಲ್ಲಿ ತಮ್ಮ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಸೋಲಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಮೂರು ತಿಂಗಳಿನಿಂದ ಕೆಲವು ಸದಸ್ಯರು ಇಲ್ಲಸಲ್ಲದ ಆರೋಪ ಮಾಡುತ್ತಾ ತಮ್ಮ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದಾಗಿ ಗೊಂದಲ ಸೃಷ್ಟಿ ಮಾಡಿದ್ದರು ಅದಕ್ಕಾಗಿ ಶುಭ ಶುಕ್ರವಾರವಾದ ಇಂದು ಮುಹೂರ್ತ ನಿಗಧಿಪಡಿಸಿದ್ದು ಗೊಂದಲಕ್ಕೆ ತೆರೆ ಎಳೆಯಲಾಗಿದೆ ಎಂದು ಹೇಳಿದರು.

ನಗರಸಭೆಯಲ್ಲಿ ೩೪ ಜನ ಸದಸ್ಯರಿದ್ದು ಕೆಲವೇ ಸದಸ್ಯರು ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದರು ಅವರು ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಸೋಲಾಗಿದೆ ಹೆಚ್ಚು ನಗರಸಭಾ ಸದಸ್ಯರು ಹಾಗೂ ಇಡೀ ನಾಗರೀಕರ ಬೆಂಬಲ ತಮ್ಮ ಪರವಾಗಿದೆ ಎಂದರು.

ನಾಗರೀಕ ಹೋರಾಟ ಸಮಿತಿಯ ಹೋರಾಟದೊಂದಿಗೆ ಜನಪರ ಕಾರ್ಯಗಳಿಗೆ ಮುಂದಾಗಿದ ತಾವು ಪೊಲೀಸರ ಲಾಠಿ ಏಟು ತಿಂದು ಜೈಲಿಗೆ ಹೋಗಿ ಬಂದಿದ್ದು ಕಳೆದ ೩೦ ವ?ಗಳಿಂದ ತಮ್ಮದೇ ಆದ ಹೋರಾಟದೊಂದಿಗೆ ಸಾರ್ವಜನಿಕರ ಸೇವೆ ಮಾಡುತ್ತಿರುವುದಾಗಿ ಹೇಳಿದ ವೇಣುಗೋಪಾಲ್ ಬಿಜೆಪಿ ಪಕ್ಷದವರೇ ಅಧ್ಯಕ್ಷರಾಗಿ ಮಾಡಿದ್ದು ನಗರವನ್ನು ಮಾದರಿ ನಗರವನ್ನಾಗಿ ಮಾಡುವ ಮೂಲಕ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ ಎಂದು ತಿಳಿಸಿದರು.

ಅತ್ಯಂತ ಸಣ್ಣ ಸಮುದಾಯದವರಾಗಿರುವ ನನಗೆ ಸಿಕ್ಕಿರುವ ಅವಧಿ ೨೦ ತಿಂಗಳಾಗಿದ್ದು ಪೂರ್ಣಗೊಳಿಸಲು ಮನವಿ ಮಾಡಿಕೊಂಡಿದ್ದೆ ಸಣ್ಣ ಸಮುದಾಯದವನಾಗಿರುವುದರಿಂದ ತಮ್ಮ ವಿರುದ್ಧ ಅವಿಶ್ವಾಸ ಮಂಡಿಸುವ ಮೂಲಕ ಅಧಿಕಾರದಿಂದ ಇಳಿಸಲು ಪ್ರಯತ್ನ ನಡೆಸಿದ್ದಾರೆ ಮೇಲ್ವರ್ಗದವರು ಯಾರೇ ಯಾವುದೇ ಅಧ್ಯಕ್ಷರಾಗಿದ್ದರು ಇಂತಹ ಪ್ರಯತ್ನಗಳು ನಡೆಯುತ್ತಿರಲಿಲ್ಲ ಎಂದು ಹೇಳಿದರು.

ಟಿ.ರಾಜಶೇಖರ್ ಆರೋಪ ಮಾಡಿರುವಂತೆ ನಾನು ಗಣಪತಿ ಹಣ ದುರ್ಬಳಕೆ ಮಾಡಿಕೊಂಡಿಲ್ಲ ಭ್ರ?ಚಾರದ ಮೂಲಕ ಹಣ ಮಾಡಿಲ್ಲ ಅಲ್ಪಸಂಖ್ಯಾತರ ವಿರೋಧಿಯಾಗಿಲ್ಲ ಇಲ್ಲಿ ಮಾಡಿರುವ ಎಲ್ಲಾ ಆರೋಪ ರಾಜಶೇಖರ್ ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಎಲ್ಲಿದ್ದರು ಯಾರು ಹಣ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಟೀಕಿಸಿದರು.

ಇಂದು ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಸೋಲಾಗಿದೆ ಹೆಚ್ಚಿನ ಸದಸ್ಯರ ಬೆಂಬಲ ತಮಗಿದ್ದು ಇಡೀ ನಗರದ ನಾಗರೀಕರ ಬೆಂಬಲವೂ ಇದ್ದು ತಮಗಿರುವ ಅವಧಿಯಲ್ಲಿ ಇನ್ನು ಒಳ್ಳೆಯ ಕೆಲಸ ಮಾಡುವ ಮೂಲಕ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

City Council President Varasiddi Venugopal

About Author

Leave a Reply

Your email address will not be published. Required fields are marked *

You may have missed